Saturday, 23rd November 2024

ಟೀಂ ಇಂಡಿಯಾದಲ್ಲಿ ’ದಿ ವಾಲ್’ ದ್ವಿತೀಯ ಇನ್ನಿಂಗ್ಸ್: ಮುಖ್ಯ ಕೋಚ್‌ ಆಗಿ ದ್ರಾವಿಡ್‌

ನವದೆಹಲಿ: ಭಾರತದ ಕ್ರಿಕೆಟ್‌ ಕಂಡ ದಿ ವಾಲ್ ಖ್ಯಾತಿಯ ಟೀಂ ಇಂಡಿಯಾ ಪರ ತಮ್ಮ ದ್ವಿತೀಯ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಅದು ಮುಖ್ಯ ಕೋಚ್ ಆಗಿ.

ಭಾರತದ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ಯುಎಇ ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ನಂತರ ಭಾರತೀಯ ಸೀನಿಯರ್ ಕ್ರಿಕೆಟ್ ತಂಡದ ಕೋಚ್ ಆಗಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಅವರು ದುಬೈನಲ್ಲಿ ನಡೆದಿದ್ದ ಐಪಿಎಲ್ ಫೈನಲ್ ಪಂದ್ಯದ ವೇಳೆ ದ್ರಾವಿಡ್ ಅವರನ್ನು ಭೇಟಿಯಾಗಿ ಯುಎಇಯಲ್ಲಿ ಟಿ 20 ವಿಶ್ವಕಪ್ ಮುಗಿದ ನಂತರ ಭಾರತ ಕ್ರಿಕೆಟ್ ತಂಡದ ಕೋಚ್ ಆಗುವಂತೆ ಮನವೊಲಿಸಿದರು.

ದ್ರಾವಿಡ್ ಅವರು ಭಾರತ ತಂಡದ ಮುಂದಿನ ಮುಖ್ಯ ಕೋಚ್ ಆಗುವುದನ್ನು ದೃಢ ಪಡಿಸಿದ್ದಾರೆ. ದ್ರಾವಿಡ್ ಅವರು ಶೀಘ್ರದಲ್ಲೇ ಎನ್‌ಸಿಎ ಮುಖ್ಯಸ್ಥ ಹುದ್ದೆಯನ್ನು ತ್ಯಜಿಸಲಿದ್ದಾರೆ’ ಎಂದು ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು. ದ್ರಾವಿಡ್ ಅವರ ಆಪ್ತ ಪರಾಸ್ ಮಾಂಬ್ರೆ ಅವರನ್ನು ಬೌಲಿಂಗ್ ತರಬೇತುದಾರರನ್ನಾಗಿ, ವಿಕ್ರಮ್ ರಾಥೋರ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಮುಂದುವರಿಯಲಿದ್ದಾರೆ.

ದ್ರಾವಿಡ್ ಗೆ ಎರಡು ವರ್ಷಗಳ ಗುತ್ತಿಗೆ ಹಾಗೂ 10 ಕೋಟಿ ರೂ. ಸಂಬಳ ಪಡೆಯಲಿದ್ದಾರೆ. ಕಳೆದ ತಿಂಗಳು ಅವರನ್ನು ಎನ್‌ಸಿಎ ಮುಖ್ಯಸ್ಥರಾಗಿ ಮರು ನೇಮಕ ಮಾಡಲಾಯಿತು. ದ್ರಾವಿಡ್ ಅವರು ವಿಶ್ವಕಪ್ ನಂತರ ನ್ಯೂಜಿಲ್ಯಾಂಡ್ ಸರಣಿಯ ವೇಳೆ ಕೋಚ್ ಹುದ್ದೆ ವಹಿಸಿಕೊಳ್ಳುತ್ತಾರೆ ಎಂದು ಮೂಲ ಗಳು ತಿಳಿಸಿವೆ.