11ನೇ ಓವರ್ನಲ್ಲಿ ದುಷ್ಮಂತ ಚಮೀರಾ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ಶಮಿ ಬೌಲಿಂಗ್ ಜವಾಬ್ದಾರಿ ನಿಭಾಯಿಸುತ್ತಿದ್ದರು. ಈ ಓವರ್ನ 3ನೇ ಎಸೆತವನ್ನು ಶಮಿ ಚಮೀರಾ ಅವರ ಲೆಗ್ ಸೈಡ್‌ಗೆ ಬೌನ್ಸರ್ ಮಾಡಿದರು. ಈ ಎಸೆತವನ್ನು ಚಮೀರಾ ವೈಲ್ಡ್ ಪುಲ್ ಮಾಡಲು ಪ್ರಯತ್ನಿಸಿದ್ದಾರೆ. ಚೆಂಡು ಗ್ಲೌಸ್‌ಗೆ ತಾಗಿ ವಿಕೆಟ್ ಕೀಪರ್ ಕೆ.ಎಲ್.ರಾಹುಲ್ ಕೈ ಸೇರಿತ್ತು. ಆದರೆ ಅಂಪೈರ್ ವೈಡ್ ನಿರ್ಧಾರ ನೀಡಿದರು. ಅಂಪೈರ್ ನಿರ್ಣಯದಿಂದ ಸಮಾಧಾನವಾಗದೇ ರಾಹುಲ್ ನಾಯಕ ರೋಹಿತ್ ಅವರ ಜೊತೆ ಚರ್ಚಿಸದೇ ಡಿಆರ್ಎಸ್ ರಿವ್ಯೂ ಪಡೆದರು.
ಬಳಿಕ ರೋಹಿತ್ ಮನವೊಲಿಸಿ ರಾಹುಲ್ ಡಿಆರ್ಎಸ್ ರಿವ್ಯೂ ಪಡೆದರು. ಅಲ್ಟ್ರಾಎಡ್ಜ್ನಲ್ಲಿ ಬಾಲ್ ಗ್ಲೌಸ್‌ಗೆ ತಗುಲಿರುವುದು ಸ್ಪಷ್ಟವಾಗಿ ಕಂಡುಬಂತು. ಇದು ರಾಹುಲ್ ಅವರ ಅನುಮಾನವನ್ನು ದೃಢಪಡಿಸಿತು. ಅಂಪೈರ್ ತನ್ನ ನಿರ್ಧಾರವನ್ನು ರದ್ದು ಗೊಳಿಸಿದಾಗ ಎಲ್ಲರೂ ಅರೆಕ್ಷಣ ಅಚ್ಚರಿಯಾದರು. ಬಳಿಕ ಎಲ್ಲರೂ ಸಂತಸ ವ್ಯಕ್ತಪಡಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಕೆಟ್ ಅಭಿಮಾನಿಗಳು, ಈ ರಿವ್ಯೂನಿಂದ ಧೋನಿ ನೆನಪಾದರು ಎಂದು ಬರೆದುಕೊಂಡಿದ್ದಾರೆ.
ಡಿಆರ್ಎಸ್ ಪಡೆದ ವಿಷಯದ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, “ನಮ್ಮ ಬೌಲರ್‌ಗಳ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ. ಡಿಆರ್ಎಸ್ ನಿರ್ಧಾರವನ್ನು ಬೌಲರ್ ಮತ್ತು ವಿಕೆಟ್ ಕೀಪರ್‌ಗೆ ಬಿಡಲಾಗಿದೆ. ಇಬ್ಬರಿಗೂ ಬಾಲ್ ಎಸೆತದ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ವೈಯಕ್ತಿಕವಾಗಿ ಪ್ರತಿಯೊಬ್ಬರ ಮೇಲೂ ನನಗೆ ನಂಬಿಕೆ ಇದೆ” ಎಂದರು.