Sunday, 15th December 2024

ಕೆ.ಎಲ್.ರಾಹುಲ್​ ಪಡೆದ ಡಿಆರ್​ಎಸ್​ ರಿವ್ಯೂ…!

ಮುಂಬೈ: ವಿಶ್ವಕಪ್‌ ಕ್ರಿಕೆಟ್‌ನ 33ನೇ ಪಂದ್ಯ ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ- ಶ್ರೀಲಂಕಾ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ನಂತರ ಮತ್ತೊಂದು ಹೈಲೆಟ್​, ಅದು ಕೆ.ಎಲ್.ರಾಹುಲ್​ ಪಡೆದ ಡಿಆರ್​ಎಸ್​ ರಿವ್ಯೂ.

11ನೇ ಓವರ್​ನಲ್ಲಿ ದುಷ್ಮಂತ ಚಮೀರಾ ಬ್ಯಾಟಿಂಗ್​ ಮಾಡುತ್ತಿದ್ದರು. ಆಗ ಶಮಿ ಬೌಲಿಂಗ್​ ಜವಾಬ್ದಾರಿ ನಿಭಾಯಿಸುತ್ತಿದ್ದರು. ಈ ಓವರ್​ನ 3ನೇ ಎಸೆತವನ್ನು ಶಮಿ ಚಮೀರಾ ಅವರ ಲೆಗ್ ಸೈಡ್‌ಗೆ ಬೌನ್ಸರ್ ಮಾಡಿದರು. ಈ ಎಸೆತವನ್ನು ಚಮೀರಾ ವೈಲ್ಡ್ ಪುಲ್ ಮಾಡಲು ಪ್ರಯತ್ನಿಸಿದ್ದಾರೆ. ಚೆಂಡು​ ಗ್ಲೌಸ್​ಗೆ ತಾಗಿ ವಿಕೆಟ್​ ಕೀಪರ್​ ಕೆ.ಎಲ್.ರಾಹುಲ್​ ಕೈ ಸೇರಿತ್ತು. ಆದರೆ ಅಂಪೈರ್​ ವೈಡ್​ ನಿರ್ಧಾರ ನೀಡಿದರು. ಅಂಪೈರ್​ ನಿರ್ಣಯದಿಂದ ಸಮಾಧಾನವಾಗದೇ ರಾಹುಲ್​ ನಾಯಕ ರೋಹಿತ್​ ಅವರ ಜೊತೆ ಚರ್ಚಿಸದೇ ಡಿಆರ್​ಎಸ್​ ರಿವ್ಯೂ​ ಪಡೆದರು.

ಬಳಿಕ ರೋಹಿತ್​ ಮನವೊಲಿಸಿ ರಾಹುಲ್​ ಡಿಆರ್​ಎಸ್​ ರಿವ್ಯೂ​ ಪಡೆದರು. ಅಲ್ಟ್ರಾಎಡ್ಜ್​ನಲ್ಲಿ ಬಾಲ್​ ಗ್ಲೌಸ್‌ಗೆ ತಗುಲಿರುವುದು ಸ್ಪಷ್ಟವಾಗಿ ಕಂಡುಬಂತು. ಇದು ರಾಹುಲ್‌ ಅವರ ಅನುಮಾನವನ್ನು ದೃಢಪಡಿಸಿತು. ಅಂಪೈರ್​ ತನ್ನ ನಿರ್ಧಾರವನ್ನು ರದ್ದು ಗೊಳಿಸಿದಾಗ ಎಲ್ಲರೂ ಅರೆಕ್ಷಣ ಅಚ್ಚರಿಯಾದರು. ಬಳಿಕ ಎಲ್ಲರೂ ಸಂತಸ ವ್ಯಕ್ತಪಡಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಕೆಟ್​ ಅಭಿಮಾನಿಗಳು, ಈ ರಿವ್ಯೂ​ನಿಂದ ಧೋನಿ ನೆನಪಾದರು ಎಂದು ಬರೆದುಕೊಂಡಿದ್ದಾರೆ.

ಡಿಆರ್​ಎಸ್​ ಪಡೆದ ವಿಷಯದ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, “ನಮ್ಮ ಬೌಲರ್‌ಗಳ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ. ಡಿಆರ್​ಎಸ್​​ ನಿರ್ಧಾರವನ್ನು ಬೌಲರ್ ಮತ್ತು ವಿಕೆಟ್ ಕೀಪರ್‌ಗೆ ಬಿಡಲಾಗಿದೆ. ಇಬ್ಬರಿಗೂ ಬಾಲ್​ ಎಸೆತದ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ವೈಯಕ್ತಿಕವಾಗಿ ಪ್ರತಿಯೊಬ್ಬರ ಮೇಲೂ ನನಗೆ ನಂಬಿಕೆ ಇದೆ” ಎಂದರು.