Monday, 25th November 2024

Emerging Teams Asia Cup 2024: ಭಾರತ ‘ಎ’ ತಂಡ ಪ್ರಕಟ

ಮುಂಬಯಿ: ಅಕ್ಟೋಬರ್ 18 ರಂದು ಒಮನ್‌ನಲ್ಲಿ ನಡೆಯಲಿರುವ ಪುರುಷರ T20 ಉದಯೋನ್ಮುಖ ತಂಡಗಳ ಏಷ್ಯಾ ಕಪ್‌ಗೆ(Emerging Teams Asia Cup 2024) ಭಾರತ ʼಎʼ ತಂಡ(India A) ಪ್ರಕಟಗೊಂಡಿದೆ. ಎಡಗೈ ಬ್ಯಾಟರ್‌ ತಿಲಕ್ ವರ್ಮಾ(Tilak Varma) ತಂಡವನ್ನು ಮುನ್ನಡೆಸಲಿದ್ದಾರೆ. ವಿಪರ್ಯಾಸವೆಂದರೆ ಈ ತಂಡದಲ್ಲಿ ಕನಿಷ್ಠ ಒಬ್ಬ ಕನ್ನಡಿಗನಿಗೂ ಅವಕಾಶ ಸಿಕ್ಕಿಲ್ಲ. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದೆ. ಅಕ್ಟೋಬರ್ 19 ರಂದು ಇತ್ತಂಡಗಳು ಮುಖಾಮುಖಿಯಾಗಿದೆ.

ತಿಲಕ್‌ ವರ್ಮಾ ನಾಲ್ಕು ಏಕದಿನ ಮತ್ತು 16 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಅನುಭವ ಹೊಂದಿದ್ದಾರೆ. ಬಾಂಗ್ಲಾ ವಿರುದ್ಧದ ಟಿ20ಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದ ಅಭಿಷೇಕ್ ಶರ್ಮಾ ಕೂಡ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ IND vs NZ Test: ಬೆಂಗಳೂರು ತಲುಪಿದ ರೋಹಿತ್‌, ಕೊಹ್ಲಿ

ಎಮರ್ಜಿಂಗ್​ ಏಷ್ಯಾ ಕಪ್ 2024ರ ತಂಡಗಳು

ಗುಂಪು-ʼಎʼ: ಶ್ರೀಲಂಕಾ,ಬಾಂಗ್ಲಾದೇಶ, ಅಫಘಾನಿಸ್ತಾನ,ಹಾಂಗ್ ಕಾಂಗ್.

ಗುಂಪು-ʼಬಿʼ: ಭಾರತ, ಪಾಕಿಸ್ತಾನ, ಯುಎಇ, ಒಮಾನ್‌

ಭಾರತ ʼಎʼ ತಂಡ: ತಿಲಕ್ ವರ್ಮಾ (ನಾಯಕ), ಅಭಿಷೇಕ್ ಶರ್ಮಾ, ರಮಣ್​ದೀಪ್ ಸಿಂಗ್, ಆಯುಷ್ ಬದೋನಿ, ನಿಶಾಂತ್ ಸಿಂಧು, ಅನೂಜ್ ರಾವತ್, ಪ್ರಭ್ ಸಿಮ್ರಾನ್ ಸಿಂಗ್, ನೆಹಾಲ್ ವಧೇರಾ, ಅನ್ಶುಲ್ ಕಾಂಬೋಜ್, ಹೃತಿಕ್ ಶೋಕೀನ್, ಆಕಿಬ್ ಖಾನ್, ವೈಭವ್ ಅರೋರಾ, ರಾಸಿಖ್ ಸಲಾಂ, ಸಾಯಿ ಕಿಶೋರ್, ರಾಹುಲ್ ಚಹರ್.

ವೇಳಾಪಟ್ಟಿ

ಅಕ್ಟೋಬರ್ 18: ಬಾಂಗ್ಲಾದೇಶ ಎ vs ಹಾಂಗ್ ಕಾಂಗ್ ಎ

ಅಕ್ಟೋಬರ್ 18: ಶ್ರೀಲಂಕಾ ಎ vs ಅಫ್ಘಾನಿಸ್ತಾನ ಎ

ಅಕ್ಟೋಬರ್ 19: ಒಮಾನ್ vs ಯುಎಇ ಎ

ಅಕ್ಟೋಬರ್ 19: ಭಾರತ ಎ vs ಪಾಕಿಸ್ತಾನ ಎ

ಅಕ್ಟೋಬರ್ 20: ಶ್ರೀಲಂಕಾ ಎ vs ಹಾಂಗ್ ಕಾಂಗ್ ಎ

ಅಕ್ಟೋಬರ್ 20: ಬಾಂಗ್ಲಾದೇಶ ಎ vs ಅಫ್ಘಾನಿಸ್ತಾನ ಎ

ಅಕ್ಟೋಬರ್ 21: ಒಮಾನ್ vs ಪಾಕಿಸ್ತಾನ ಎ

ಅಕ್ಟೋಬರ್ 21: ಭಾರತ ಎ vs ಯುಎಇ ಎ

ಅಕ್ಟೋಬರ್ 22: ಅಫ್ಘಾನಿಸ್ತಾನ ಎ vs ಹಾಂಗ್ ಕಾಂಗ್ ಎ

ಅಕ್ಟೋಬರ್ 22: ಶ್ರೀಲಂಕಾ ಎ vs ಬಾಂಗ್ಲಾದೇಶ ಎ

ಅಕ್ಟೋಬರ್ 23: ಪಾಕಿಸ್ತಾನ ಎ vs ಯುಎಇ ಎ

ಅಕ್ಟೋಬರ್ 23: ಒಮಾನ್ vs ಭಾರತ ಎ

ಅಕ್ಟೋಬರ್ 25: ಸೆಮಿಫೈನಲ್ 1

ಅಕ್ಟೋಬರ್ 25: ಸೆಮಿಫೈನಲ್ 2

ಅಕ್ಟೋಬರ್ 27: ಫೈನಲ್