ದುಬಾೖ: ಮೊದಲ ಸೂಪರ್-12 ಮುಖಾಮುಖಿಯಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಇಂಗ್ಲೆಂಡ್ ವಿರುದ್ಧ 14.2 ಓವರ್‌ಗಳಲ್ಲಿ 55 ರನ್ನಿಗೆ ಕುಸಿದು 6 ವಿಕೆಟ್‌ಗಳ ಸೋಲಿಗೆ ತುತ್ತಾಗಿದೆ.
ಚಾಂಪಿಯನ್ನರ ಆಟವಾಡಲು ವಿಫಲವಾದ ವೆಸ್ಟ್ ಇಂಡೀಸ್ ವಿಶ್ವಕಪ್ ಇತಿಹಾಸದಲ್ಲಿ ತನ್ನ ಕನಿಷ್ಠ ಮೊತ್ತ ದಾಖಲಿಸಿತು. ಇದು ಟಿ20 ವಿಶ್ವಕಪ್‌ನ 3ನೇ ಸಣ್ಣ ಸ್ಕೋರ್.
ಆದಿಲ್ ರಶೀದ್ ಕೇವಲ 2 ರನ್ನಿತ್ತು 4 ವಿಕೆಟ್ ಉಡಾಯಿಸಿ ಪೊಲಾರ್ಡ್ ಪಡೆಗೆ ನೀರು ಕುಡಿಸಿದರು. ಇದು ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಬೌಲರ್‌ನ ಅತ್ಯುತ್ತಮ ಸಾಧನೆಯಾಗಿದೆ. 2016ರ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 28ಕ್ಕೆ 4 ವಿಕೆಟ್ ಕೆಡವಿದ್ದು ಜವಾಬಿತ್ತ ಇಂಗ್ಲೆಂಡ್ 8.2 ಓವರ್‌ಗಳಲ್ಲಿ 4 ವಿಕೆಟಿಗೆ 56 ರನ್ ಬಾರಿಸಿತು.
ವೆಸ್ಟ್ ಇಂಡೀಸ್ ಆರಂಭದಿಂದಲೇ ರನ್ನಿಗಾಗಿ ಚಡಪಡಿಸಿತು. ಪವರ್ ಪ್ಲೇ ಅವಧಿಯಲ್ಲಿ 31 ರನ್ನಿಗೆ 4 ವಿಕೆಟ್ ಉದುರಿಸಿಕೊಂಡಿತು. ಗೇಲ್ 3 ಬೌಂಡರಿ ಹೊಡೆದು ಅಬ್ಬರಿಸಿದರೂ ಇನ್ನಿಂಗ್ಸ್ ಬೆಳೆಸಲು ವಿಫಲರಾದರು. ಕೊನೆಯಲ್ಲಿ ಗೇಲ್ ಗಳಿಕೆಯೇ ವಿಂಡೀಸ್ ಸರದಿಯ ಸರ್ವಾಧಿಕ ವೈಯಕ್ತಿಕ ಮೊತ್ತವೆನಿಸಿತು. ಉಳಿದವ ರ್ಯಾರೂ ಡಬಲ್ ಫಿಗರ್ ದಾಖಲಿಸಲಿಲ್ಲ. ಲೆವಿಸ್ ಅಬ್ಬರ ಒಂದೇ ಸಿಕ್ಸರ್‌ಗೆ ಸೀಮಿತಗೊಂಡಿತು.
ಅರ್ಧ ಹಾದಿ ಕ್ರಮಿಸುವಾಗ ಸ್ಕೋರ್ 6 ವಿಕೆಟಿಗೆ 44 ರನ್ ಆಗಿತ್ತು. 10 ಓವರ್‌ಗಳ ಬಳಿಕ ಆದಿಲ್ ರಶೀದ್ ಮಾರಕವಾಗಿ ಎರಗಿದರು.
ಸ್ಪಿನ್ನರ್‌ಗಳಾದ ಆದಿಲ್ ರಶೀದ್ (2ಕ್ಕೆ 4) ಹಾಗೂ ಮೊಯಿನ್ ಅಲಿ (17ಕ್ಕೆ 2) ಜೋಡಿಯ ಮಾರಕ ದಾಳಿಗೆ ನಲುಗಿದ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಟಿ20 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಹಣಾಹಣಿಯಲ್ಲಿ ಹಾಲಿ ರನ್ನರ್‌ಅಪ್ ಇಂಗ್ಲೆಂಡ್ ಎದುರು 6 ವಿಕೆಟ್‌ಗಳಿಂದ ಶರಣಾಯಿತು.
ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಇಂಗ್ಲೆಂಡ್ ಇವೊಯಿನ್ ಮಾರ್ಗನ್, ವಿಂಡೀಸ್ ತಂಡವನ್ನು ಬ್ಯಾಟಿಂಗ್ ಆಹ್ವಾ ನಿಸಿದರು. ಆಂಗ್ಲರ ಸ್ಪಿನ್ ಜಾಲಕ್ಕೆ ಮಂಕಾದ ವಿಂಡೀಸ್ ತಂಡ 14.2 ಓವರ್‌ಗಳಲ್ಲಿ 55 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 8.2 ಓವರ್‌ಗಳಲ್ಲಿ 4 ವಿಕೆಟ್‌ಗೆ 56 ರನ್‌ಗಳಿಸಿ ಜಯದ ನಗೆ ಬೀರಿತು. ಜೋಸ್ ಬಟ್ಲರ್ (24*ರನ್, 22 ಎಸೆತ, 3 ಬೌಂಡರಿ) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.
ವೆಸ್ಟ್ ಇಂಡೀಸ್: 14.2 ಓವರ್‌ಗಳಲ್ಲಿ 55
ಇಂಗ್ಲೆಂಡ್: 8.2 ಓವರ್‌ಗಳಲ್ಲಿ 4 ವಿಕೆಟ್‌ಗೆ 56
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-14.2 ಓವರ್‌ಗಳಲ್ಲಿ 55
ಇಂಗ್ಲೆಂಡ್- 8.2 ಓವರ್‌ಗಳಲ್ಲಿ 4 ವಿಕೆಟಿಗೆ 56
ಪಂದ್ಯಶ್ರೇಷ್ಠ: ಮೊಯಿನ್ ಅಲಿ.