Thursday, 12th December 2024

ಆಂಗ್ಲರಿಗೆ ಆಘಾತ ನೀಡಿದ ಇಶಾಂತ್‌, ಅಕ್ಷರ್‌: ಎರಡು ವಿಕೆ‌ಟ್‌ ಪತನ

ಅಹಮದಾಬಾದ್: ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಅವರು ನೂರನೇ ಟೆಸ್ಟ್ ಆಡುತ್ತಿದ್ದು, ಎರಡನೇ ಓವರ್‌ನಲ್ಲಿ ಇಶಾಂತ್ ಆರಂಭಿಕ ಡಾಮ್‌ ಸಿಬ್ಲಿ (0) ವಿಕೆಟ್‌ ಪಡೆಯುವ ಮೂಲಕ ವಿಕೆಟ್‌ ಖಾತೆ ತೆರೆದಿದ್ದಾರೆ.

ಗುಜರಾತ್‌ನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ನಲ್ಲಿ ಟಾಸ್‌ ಗೆದ್ದಿರುವ ಇಂಗ್ಲೆಂಡ್‌ ತಂಡವು ಬ್ಯಾಟಿಂಗ್‌ ಆಯ್ಕೆ ಮಾಡಿದೆ.

ತಮ್ಮ ಮೊದಲ ಓವರ್‌ನಲ್ಲೇ ಸ್ಪಿನ್ನರ್‌ ಅಕ್ಸರ್‌ ಪಟೇಲ್‌ ವಿಕೆಟ್‌ ಕಬಳಿಸಿದರು. ಜಾನಿ ಬೆಸ್ಟೊ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವ ಮೂಲಕ ಶೂನ್ಯಕ್ಕೆ ಅವರನ್ನು ಪೆವಿಲಿ ಯನ್‌ಗೆ ಕಳುಹಿಸಿದರು. ಬಿರುಸಿನ ಆಟ ಆಡುತ್ತಿರುವ ಜಾಕ್ ಕ್ರಾಲಿ ಈಗಾಗಲೇ ಐದು ಬೌಂಡರಿ ಸಿಡಿಸಿದ್ದಾರೆ.

ಜ್ಯಾಕ್ ಕ್ರಾಲಿ (23) ಮತ್ತು ನಾಯಕ ಜೋ ರೂಟ್ ಕಣದಲ್ಲಿದ್ದಾರೆ. 19 ಓವರ್‌ಗಳಲ್ಲಿ ಇಂಗ್ಲೆಂಡ್‌ ಎರಡು ವಿಕೆಟ್‌ ನಷ್ಟಕ್ಕೆ 67 ರನ್‌ ಗಳಿಸಿದೆ.