Sunday, 8th September 2024

ಭಾರತ-ಇಂಗ್ಲೆಂಡ್‌ ಸರಣಿ ವೇಳಾಪಟ್ಟಿ ಪ್ರಕಟ

ನವದೆಹಲಿ: ಒಂದು ಅಹರ್ನಿಶಿ ಟೆಸ್ಟ್ ಪಂದ್ಯವೊಂದನ್ನು ಒಳಗೊಂಡಂತೆ, ಇಂಗ್ಲೆಂಡ್‌ ವಿರುದ್ದ ಐದು ಟಿ20, ಏಕದಿನ ಹಾಗೂ ಟೆಸ್ಟ್‌ ಪಂದ್ಯಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಗುರುವಾರ ಪ್ರಕಟಿಸಿದೆ.

ಮುಂಬರುವ ಫೆಬ್ರವರಿ 5ರಿಂದ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ಆರಂಭಗೊಳ್ಳಲಿದೆ.
ಮೂರನೇ ಪಂದ್ಯ ಅಹರ್ನಿಶಿಯಾಗಿದ್ದು, ಅಹಮದಾಬಾದ್‌ನಲ್ಲಿ ನಡೆಯಲಿದೆ. ಇಂಗ್ಲೆಂಡ್‌ ತಂಡವು ಭಾರತ ಪ್ರವಾಸದಲ್ಲಿ ಐದು ಟಿ20 ಹಾಗೂ ಮೂರು ಏಕದಿನ ಪಂದ್ಯವನ್ನಾಡಲಿದೆ.

ಕೋವಿಡ್‌ ಬಳಿಕ ದೇಶದಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಸರಣಿಯಾಗಿದೆ. ಕೋವಿಡ್‌ ನಿಂದಾಗಿ, ದೇಶದಲ್ಲಿ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ವಿರುದ್ದ ಸರಣಿಯನ್ನು ರದ್ದುಗೊಳಿಸಲಾಗಿತ್ತು. ಇಂಗ್ಲೆಂಡ್‌ ವಿರುದ್ದದ ಎರಡು ಟೆಸ್ಟ್‌ ಪಂದ್ಯ ಗಳನ್ನು ಚೆನ್ನೈನಲ್ಲಿ, ಅಹಮದಾಬಾದ್‌ನಲ್ಲಿ ಅಹರ್ನಿಶಿ ಪಂದ್ಯ ಸೇರಿ ಒಂದು ಡೇ ಟೆಸ್ಟ್‌ ಹಾಗೂ ಐದು ಟಿ20 ನಡೆಯಲಿದೆ.

ಪುಣೆಯಲ್ಲಿ ಮೂರು ಏಕದಿನ ಪಂದ್ಯ ನಡೆಯಲಿದೆ. ಅಹಮದಾಬಾದ್‌ನ ಸರ್ದಾರ್‌ ಪಟೇಲ್‌ ಮೊಟೇರಾ ಕ್ರೀಡಾಂಗಣವು ಎರಡು ಟೆಸ್ಟ್‌ ಪಂದ್ಯದ ಆತಿಥ್ಯ ವಹಿಸಲಿದೆ. ಮೊಟೇರಾ ಕ್ರೀಡಾಂಗಣದಲ್ಲಿ ಎರಡನೇ ಅಹರ್ನಿಶಿ ಟೆಸ್ಟ್‌ ಪಂದ್ಯ ನಡೆಯಲಿದ್ದು, ಮೊದಲ ಪಂದ್ಯ ಕಳೆದ ವರ್ಷ ಕೋಲ್ಕತಾದಲ್ಲಿ ಆಯೋಜಿಸಲಾಗಿತ್ತು. ಅಹಮದಾಬಾದ್‌ನಲ್ಲಿ ಮೂರನೇ ಟೆಸ್ಟ್‌ ಫೆ.24ರಿಂದ ಅಹರ್ನಿಶಿ ಯಾಗಿ ಆರಂಭವಾಗಲಿದೆ.

Leave a Reply

Your email address will not be published. Required fields are marked *

error: Content is protected !!