Monday, 16th September 2024

ಡೇವಿಡ್ ಮಲನ್ 87: ಇಂಗ್ಲೆಂಡ್ ಹಠಾತ್ ಕುಸಿತ

ಪುಣೆ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ನೆದರ್ಲೆಂಡ್ಸ್‌ ವಿರುದ್ಧ ನಡೆಯುತ್ತಿರುವ ಇಂಗ್ಲೆಂಡ್‌ ತಂಡವು ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದೆ.

ಇತ್ತೀಚಿನ ವರದಿ ಪ್ರಕಾರ, ಇಂಗ್ಲೆಂಡ ತಂಡ ಉತ್ತಮ ಆರಂಭದ ಹೊರತಾಗಿಯೂ, ಆಗಾಗ್ಗೆ ವಿಕೆಟ್ ಕಳೆದುಕೊಂಡು ಆರು ವಿಕೆಟ್ ಕಳೆದುಕೊಂಡು 192 ಗಳಿಸಿದೆ. ಆಲ್ರೌಂಡರ್‌ ಸ್ಟೋಕ್ಸ್ 36 ಬ್ಯಾಟಿಂಗ್ ಮಾಡುತ್ತಿದ್ದು, ಸವಾಲಿನ ಮೊತ್ತ ಪೇರಿಸುವ ಅಗತ್ಯವಿದೆ. ನೆದರ‍ಲ್ಯಾಂಡ್ ಪರ ಆರ್ಯನ್ ಎರಡು ವಿಕೆಟ್ ಕಿತ್ತರು. ಆರಂಭಿಕ ಡೇವಿಡ್ ಮಲನ್ 87 ರನೌಟಾದರು.

ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸುವ ಅವಕಾಶ ಕಳೆದುಕೊಂಡಿರುವ ಇಂಗ್ಲೆಂಡ್‌ ಮತ್ತು ನೆದರ್ಲೆಂಡ್ಸ್‌ ತಂಡಗಳು, ಇಂದಿನ ಪಂದ್ಯ ಗೆದ್ದು 2025ರ ಚಾಂಪಿಯನ್ಸ್‌ ಟ್ರೋಫಿಗೆ ಅರ್ಹತೆ ಪಡೆಯಲು ಪ್ರಯತ್ನಿಸಲಿವೆ.

ಚಾಂ‍ಪಿಯನ್ಸ್‌ ಟ್ರೋಫಿಯಲ್ಲಿ ಆಡುವ ಅವಕಾಶ ವಂಚಿತರಾಗಿ ಅವಮಾನಕ್ಕೆ ಗುರಿಯಾಗುವುದನ್ನು ತಪ್ಪಿಸಲು ಜೋಸ್‌ ಬಟ್ಲರ್‌ ಬಳಗಕ್ಕೆ ಇನ್ನುಳಿದ ಎರಡು ಪಂದ್ಯಗಳಲ್ಲಿ ಜಯ ಅನಿವಾರ್ಯ. ಇಂಗ್ಲೆಂಡ್‌ ತನ್ನ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

Leave a Reply

Your email address will not be published. Required fields are marked *