Joe Root: ಟೆಸ್ಟ್‌ನಲ್ಲಿ 13 ಸಾವಿರ ರನ್ ಪೂರೈಸಿ ದಾಖಲೆ ಬರೆದ ಜೋ ರೂಟ್
ಡಿಸೆಂಬರ್ 13, 2012 ರಂದು ನಾಗ್ಪುರದಲ್ಲಿ ಭಾರತ ವಿರುದ್ಧ ಟೆಸ್ಟ್ ಪದಾರ್ಪಣೆ ಮಾಡಿದ ರೂಟ್ ಅಂದಿನಿಂದ ಆಧುನಿಕ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಮತ್ತು ಯಶಸ್ವಿ ಬ್ಯಾಟರ್ ಆಗಿ ಅನೇಕ ದಾಖಲೆ ಬರೆದಿದ್ದಾರೆ. ರೂಟ್ ಆಸ್ಟ್ರೇಲಿಯಾ ಮತ್ತು ಭಾರತದ ವಿರುದ್ಧ ತಲಾ 2,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.


ಲಂಡನ್: ಇಂಗ್ಲೆಂಡ್ ತಂಡದ ಹಿರಿಯ ಅನುಭವಿ ಆಟಗಾರ ಜೋ ರೂಟ್(Joe Root) ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ನೂತನ ಮೈಲಿಗಲ್ಲೊಂದನ್ನು ನೆಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್(Test cricket)ನಲ್ಲಿ 13 ಸಾವಿರ ರನ್(Joe Root 13,000 runs) ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆಗೈದ ವಿಶ್ವದ 5ನೇ ಹಾಗೂ ಇಂಗ್ಲೆಂಡ್‌ನ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಜಿಂಬಾಬ್ವೆ ವಿರುದ್ಧ ಗುರುವಾರ ಆರಂಭಗೊಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ 28 ರನ್ ಬಾರಿಸುತ್ತಿದ್ದಂತೆ ರೂಟ್ ಈ ಸಾಧನೆ ಮಾಡಿದರು.
ಅತಿ ವೇಗವಾಗಿ ಟೆಸ್ಟ್‌ನಲ್ಲಿ 13 ಸಾವಿರ ರನ್ ಗಡಿ ದಾಟಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಕೂಡ ಅವರು ತಮ್ಮ ಹೆಸರಿಗೆ ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಕ್ ಕ್ಯಾಲಿಸ್(159 ಪಂದ್ಯ) ಹೆಸರಿನಲ್ಲಿತ್ತು. ರೂಟ್ 153 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಆದರೆ ಕಡಿಮೆ ಇನಿಂಗ್ಸ್‌ನಲ್ಲಿ 13 ಸಾವಿರ ರನ್ ಪೂರೈಸಿದ ದಾಖಲೆ ಸಚಿನ್ ತೆಂಡೂಲ್ಕರ್(266 ಇನಿಂಗ್ಸ್) ಹೆಸರಿನಲ್ಲಿದೆ. ಜೋ ರೂಟ್(279 ಇನ್ನಿಂಗ್ಸ್)ಗೆ ಕೊನೆಯ ಸ್ಥಾನ.
ವೇಗವಾಗಿ 13,000 ಟೆಸ್ಟ್ ರನ್ ಪೂರೈಸಿದವರು
ಜೋ ರೂಟ್ - 153* ಪಂದ್ಯ
ಜಾಕ್ ಕ್ಯಾಲಿಸ್ - 159 ಪಂದ್ಯ
ರಾಹುಲ್ ದ್ರಾವಿಡ್ - 160 ಪಂದ್ಯ
ರಿಕಿ ಪಾಂಟಿಂಗ್ - 162 ಪಂದ್ಯ
ಸಚಿನ್ ತೆಂಡೂಲ್ಕರ್ - 163 ಪಂದ್ಯ
ಕಡಿಮೆ ಇನಿಂಗ್ಸ್‌ನಲ್ಲಿ 13,000 ಟೆಸ್ಟ್ ರನ್
ಸಚಿನ್ ತೆಂಡೂಲ್ಕರ್ - 266 ಇನ್ನಿಂಗ್ಸ್
ಜಾಕ್ ಕ್ಯಾಲಿಸ್ - 269 ಇನ್ನಿಂಗ್ಸ್
ರಿಕಿ ಪಾಂಟಿಂಗ್ - 275 ಇನ್ನಿಂಗ್ಸ್
ರಾಹುಲ್ ದ್ರಾವಿಡ್ - 277 ಇನ್ನಿಂಗ್ಸ್
ಜೋ ರೂಟ್ - 279 ಇನ್ನಿಂಗ್ಸ್
ಇದನ್ನೂ ಓದಿ IPL 2025: ಚೊಚ್ಚಲ ಶತಕ ಬಾರಿಸಿ ದಾಖಲೆ ಬರೆದ ಮಿಚೆಲ್ ಮಾರ್ಷ್
ಡಿಸೆಂಬರ್ 13, 2012 ರಂದು ನಾಗ್ಪುರದಲ್ಲಿ ಭಾರತ ವಿರುದ್ಧ ಟೆಸ್ಟ್ ಪದಾರ್ಪಣೆ ಮಾಡಿದ ರೂಟ್ ಅಂದಿನಿಂದ ಆಧುನಿಕ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಮತ್ತು ಯಶಸ್ವಿ ಬ್ಯಾಟರ್ ಆಗಿ ಅನೇಕ ದಾಖಲೆ ಬರೆದಿದ್ದಾರೆ. ರೂಟ್ ಆಸ್ಟ್ರೇಲಿಯಾ ಮತ್ತು ಭಾರತದ ವಿರುದ್ಧ ತಲಾ 2,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ 1,000 ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿದ್ದಾರೆ.