Thursday, 12th December 2024

ಮಾಜಿ ಕ್ರಿಕೆಟರ್‌ ಲಕ್ಷ್ಮಣ್ ಶಿವರಾಮಕೃಷ್ಣನ್ ಬಿಜೆಪಿಗೆ ಸೇರ್ಪಡೆ

ಚೆನ್ನೈ : ಟೀಂ ಇಂಡಿಯಾದ ಮಾಜಿ ಆಟಗಾರ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಬುಧವಾರ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮಿಳುನಾಡು ರಾಜ್ಯ ಬಿಜೆಪಿ ಉಸ್ತುವಾರಿ ಸಿ.ಟಿ. ರವಿ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆಲ್ರೌಂಡರ್ ಶಿವರಾಮಕೃಷ್ಣನ್ ಟೀಂ ಇಂಡಿಯಾ ಪರ 9 ಟಸ್ಟ್ ಪಂದ್ಯಗಳನ್ನು ಆಡಿ 130 ರನ್ ಗಳಿಸಿ ದ್ದಾರೆ. 76 ಫಸ್ಟ್ ಕ್ಲಾಸ್ ಪಂದ್ಯಗಳಿಂದ 1,802 ರನ್ ಗಳಿಸಿದ್ದಾರೆ.