ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

FIFA rankings: ಫಿಫಾ ರ್‍ಯಾಂಕಿಂಗ್‌ನಲ್ಲಿ ಪಾತಾಳಕ್ಕೆ ಕುಸಿದ ಭಾರತ

ಇಗೊರ್ ಸ್ಟಿಮ್ಯಾಕ್ ಬದಲಿಗೆ ಮನೊಲೊ ಮಾರ್ಕ್ವೆಝ್ ಮುಖ್ಯ ಕೋಚ್ ಆಗಿ ನೇಮಕಗೊಂಡ ನಂತರ ಭಾರತ ತಂಡವು ಕಳೆದ 16 ತಿಂಗಳುಗಳಿಂದ ಸ್ಪರ್ಧಾತ್ಮಕ ಪಂದ್ಯವನ್ನು ಜಯಿಸುವಲ್ಲಿ ವಿಫಲವಾಗಿದೆ. 2025 ರಲ್ಲಿ ಇಲ್ಲಿಯವರೆಗೆ, ಭಾರತವು ನಾಲ್ಕು ಪಂದ್ಯಗಳನ್ನು ಆಡಿದ್ದು, ಒಂದು ಗೆಲುವು, ಒಂದು ಡ್ರಾ ಮತ್ತು ಎರಡು ಸೋಲುಗಳನ್ನು ದಾಖಲಿಸಿದೆ.

ಫಿಫಾ ರ್‍ಯಾಂಕಿಂಗ್‌ನಲ್ಲಿ ಪಾತಾಳಕ್ಕೆ ಕುಸಿದ ಭಾರತ

Profile Abhilash BC Jul 11, 2025 11:03 AM

ನವದೆಹಲಿ: ಭಾರತೀಯ ಪುರುಷರ ಫುಟ್ಬಾಲ್ ತಂಡವು(India men’s football team) ಒಂಬತ್ತು ವರ್ಷಗಳಲ್ಲಿ ತನ್ನ ಅತ್ಯಂತ ಕಡಿಮೆ ಫಿಫಾ ಶ್ರೇಯಾಂಕಕ್ಕೆ(FIFA Rankings) ಕುಸಿದಿದೆ. ಆರು ಸ್ಥಾನಗಳ ಕುಸಿತ ಕಂಡು 133 ನೇ ಸ್ಥಾನಕ್ಕೆ ತಲುಪಿದೆ. ಜೂನ್‌ನಲ್ಲಿ ಸತತ ಸೋಲುಗಳ ನಂತರ ಈ ಕುಸಿತ ಕಂಡುಬಂದಿದೆ. ಜೂನ್ 4 ರಂದು ನಡೆದ ಸೌಹಾರ್ದ ಪಂದ್ಯದಲ್ಲಿ ಥೈಲ್ಯಾಂಡ್ ವಿರುದ್ಧ 0-2 ಸೋಲು, ನಂತರ ಏಷ್ಯನ್ ಕಪ್ ಅರ್ಹತಾ ಪಂದ್ಯದಲ್ಲಿ ಹಾಂಗ್‌ಕಾಂಗ್ ವಿರುದ್ಧ 0-1 ಸೋಲು ಕಂಡಿತ್ತು.

ಭಾರತವು ಕೊನೆಯ ಬಾರಿಗೆ ಡಿಸೆಂಬರ್ 2016 ರಲ್ಲಿ 135 ನೇ ಸ್ಥಾನಕ್ಕೆ ಕುಸಿದಿತ್ತು. 1996 ರಲ್ಲಿ 94 ನೇ ಸ್ಥಾನ ಪಡೆದದ್ದು ಭಾರತ ತಂಡದ ಸಾರ್ವಕಾಲಿಕ ಅತ್ಯುತ್ತಮ ಶ್ರೇಯಾಂಕವಾಗಿದೆ. ಏಷ್ಯಾದ 46 ತಂಡಗಳ ಪೈಕಿ ಭಾರತ 24ನೇ ಸ್ಥಾನದಲ್ಲಿದೆ.

ಇಗೊರ್ ಸ್ಟಿಮ್ಯಾಕ್ ಬದಲಿಗೆ ಮನೊಲೊ ಮಾರ್ಕ್ವೆಝ್ ಮುಖ್ಯ ಕೋಚ್ ಆಗಿ ನೇಮಕಗೊಂಡ ನಂತರ ಭಾರತ ತಂಡವು ಕಳೆದ 16 ತಿಂಗಳುಗಳಿಂದ ಸ್ಪರ್ಧಾತ್ಮಕ ಪಂದ್ಯವನ್ನು ಜಯಿಸುವಲ್ಲಿ ವಿಫಲವಾಗಿದೆ. 2025 ರಲ್ಲಿ ಇಲ್ಲಿಯವರೆಗೆ, ಭಾರತವು ನಾಲ್ಕು ಪಂದ್ಯಗಳನ್ನು ಆಡಿದ್ದು, ಒಂದು ಗೆಲುವು, ಒಂದು ಡ್ರಾ ಮತ್ತು ಎರಡು ಸೋಲುಗಳನ್ನು ದಾಖಲಿಸಿದೆ.

ತಂಡದ ಕಳಪೆ ಫಲಿತಾಂಶದಿಂದಾಗಿ ನವೃತ್ತಿ ಘೋಷಿಸಿದ್ದ ದಂತಕಥೆಯ ಸ್ಟ್ರೈಕರ್ ಮತ್ತು ಮಾಜಿ ನಾಯಕ ಸುನಿಲ್ ಛೆಟ್ರಿ ಅವರನ್ನು ಮತ್ತೆ ತಂಡಕ್ಕೆ ಕರೆತರಲಾಗಿತ್ತು. ಆದರೆ ಅವರ ಪುನರಾಗಮನವು ತಂಡದ ಅದೃಷ್ಟವನ್ನು ಬದಲಾಯಿಸಲು ಹೆಚ್ಚೇನೂ ಮಾಡಿಲ್ಲ.

ಇದನ್ನೂ ಓದಿ IND vs ENG 3rd Test: ನಿತೀಶ್‌ ರೆಡ್ಡಿಗೆ ತೆಲುಗಿನಲ್ಲೇ ಪ್ರಶಂಸೆ ವ್ಯಕ್ತಪಡಿಸಿದ ಶುಭಮನ್‌ ಗಿಲ್‌; ವಿಡಿಯೊ ವೈರಲ್‌

2023ರ ನಂತರ ಭಾರತದ ಫುಟ್ಬಾಲ್ ತಂಡವು ರ‍್ಯಾಂಕಿಂಗ್‌ ನಲ್ಲಿ ಕುಸಿತ ಕಾಣುತ್ತಾ ಬಂದಿದೆ. 2023ರಲ್ಲಿ ಟಾಪ್-100ರೊಳಗೆ ಸ್ಥಾನ ಪಡೆದಿತ್ತು. 2023ರ ಎಎಫ್‌ಸಿ ಏಶ್ಯನ್ ಕಪ್‌ ನಲ್ಲಿ ಗ್ರೂಪ್ ಹಂತದಲ್ಲಿ ನಿರ್ಗಮಿಸಿದ್ದ ಭಾರತ ತಂಡವು 2026ರ ಫಿಫಾ ವಿಶ್ವಕಪ್ ಕ್ವಾಲಿಫೈಯರ್‌ ನಿಂದಲೂ ನಿರ್ಗಮಿಸಿತ್ತು.