ಸ್ಟೀವನ್ ಸ್ಮಿತ್ – ಟೀಂ ಇಂಡಿಯಾ ವಿರುದ್ದ ಕಳೆದ ಐದು ಪಂದ್ಯಗಳಲ್ಲಿ ಒಂದು ಶತಕ, ಮೂರು ಅರ್ಧಶತಕ
ನಾಯಕ ಫಿಂಚ್‌ರಿಂದ 17ನೇ ಶತಕದ ಸಾಧನೆ
ಟೀಂ ಇಂಡಿಯಾ ವಿರುದ್ದ ಫಿಂಚ್ ನಾಲ್ಕನೇ ಶತಕ
ನಾಯಕನಾಗಿ ಆರನೇದ್ದು
ಸಿಡ್ನಿಯಲ್ಲಿ ಮೊದಲ ಶತಕ
ಸಿಡ್ನಿ: ಟೀ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ತಂಡ ಉತ್ತಮ ಆರಂಭ ಪಡೆಯಿತು.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸೀಸ್’ನ ಆರಂಭಿಕರಿಬ್ಬರು ಅರ್ಧಶತಕದ ಕಾಣಿಕೆ ಸಲ್ಲಿಸಿದರು. ಇತ್ತೀಚಿನ ವರದಿ ಪ್ರಕಾರ, ವಾರ್ನರ್ ವಿಕೆಟ್ ಬಿದ್ದ ಬೆನ್ನಲ್ಲೇ ಕ್ರೀಸ್ ಆಕ್ರಮಿಸಿಕೊಂಡ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರು ಕೂಡ ಅರ್ಧಶತಕ ಬಾರಿಸಿ ಮಿಂಚಿದರು. ಈ ಪೈಕಿ ನಾಯಕ ಫಿಂಚ್ ಶತಕ ಬಾರಿಸಿ, ಆಟ ಮುಂದುವರಿಸಿದ್ದಾರೆ.
ಆರರ ಸರಾಸರಿಯಲ್ಲಿ ರನ್ ಹರಿಸುತ್ತಿರುವ ಆಸೀಸ್ ತಂಡದ ಕೈಯಲ್ಲಿ ಇನ್ನೂ ಒಂಭತ್ತು ವಿಕೆಟ್ ಉಳಿದಿದೆ. ವೇಗಿ ಮೊಹಮ್ಮದ್ ಶಮಿ ಮಾತ್ರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಉಳಿದ ಬೌಲರುಗಳು ತಮ್ಮ ಎಂದಿನ ಮೊನಚಿನ ಬೌಲಿಂಗ್ ಪ್ರದರ್ಶನ ನೀಡಲ್ಲ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ ಆರಂಭವಾಗಿದ್ದು ಟಾಸ್ ಗೆದ್ದ ಆಸಿಸ್ ನಾಯಕ ಆಯರೋನ್ ಫಿಂಚ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.