Wednesday, 11th December 2024

ಪ್ರಥಮ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಒ.ಪಿ.ಭಾರದ್ವಾಜ್ ನಿಧನ

ನವದೆಹಲಿ: ದೇಶದ ಪ್ರಪ್ರಥಮ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಬಾಕ್ಸಿಂಗ್ ತರಬೇತುದಾರ ಒ.ಪಿ.ಭಾರದ್ವಾಜ್(82) ವಯೋ ಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ.

10 ದಿನಗಳ ಹಿಂದೆ ತಮ್ಮ ಪತ್ನಿಯನ್ನು ಅಗಲಿದ್ದ ಭಾರದ್ವಾಜ್ ಅವರು ವಯೋಸಹಜ ಖಾಯಿಲೆಯಿಂದ ಇಹಲೋಕ ತ್ಯಜಿಸಿ ದ್ದಾರೆ. 1968 ರಿಂದ 1989 ರವರೆಗೆ ರಾಷ್ಟ್ರೀಯ ಬಾಕ್ಸಿಂಗ್ ತಂಡದ ಕೋಚ್ ಆಗಿದ್ದ ಅವರ ಗರಡಿಯಲ್ಲಿ ಪಳಗಿದ್ದ ಹಲವಾರು ಮಂದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ನಾಡಿಗೆ ಕೀರ್ತಿ ತಂದಿದ್ದಾರೆ.