Friday, 20th September 2024

ಅಂತಿಮ ಟೆಸ್ಟ್‌: ಟಾಸ್‌ ಗೆದ್ದ ಆಸೀಸ್‌ ಬ್ಯಾಟಿಂಗ್‌ ಆಯ್ಕೆ

ಬ್ರಿಸ್ಬೇನ್‌: ಗವಾಸ್ಕರ್‌ – ಬೋರ್ಡರ್‌ ಟೆಸ್ಟ್ ಸರಣಿಯ ಅಂತಿಯ ಟೆಸ್ಟ್ ಪಂದ್ಯಕ್ಕೆ ಗಬ್ಬಾ ಕ್ರೀಡಾಂಗಣ ಸಜ್ಜಾಗಿದೆ.

ಈ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸೀಸ್‌ ತಂಡ ಟಾಸ್‌ ಗೆದ್ದು ಬ್ಯಾಟಿಂಗ್‌ ಆರಿಸಿಕೊಡಿದೆ. ಕಳೆದ ಮೂರು ಟೆಸ್ಟ್ ಗಳಲ್ಲಿ ಉಭಯ ತಂಡದಲ್ಲೂ ಗಾಯಾಳುಗಳ ಯಾದಿ ಬೆಳೆದಿದ್ದು, ಕೊನೆಯ ಟೆಸ್ಟ್’ಗೆ ಮಹತ್ವಪೂರ್ಣ ಬದಲಾವಣೆಗಳಾಗಿದೆ.

ಟೀಂ ಇಂಡಿಯಾದಲ್ಲಿ ಇಂದಿನ ಟೆಸ್ಟ್’ಗೆ ನಾಲ್ಕು ಬದಲಾವಣೆಯಾಗಿದ್ದು, ಇಬ್ಬರೂ ಟೆಸ್ಟ್‌ ಪಂದ್ಯಕ್ಕೆ ಪಾದಾರ್ಪಣೆ ಮಾಡು ತ್ತಿದ್ದಾರೆ. ಗಾಯಾಳುಗಳಾದ ಆಲ್ರೌಂಡರ್‌ ರವೀಂದ್ರ ಜಡೇಜಾ, ಪ್ರಧಾನ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌, ಪ್ರಮುಖ ಬೌಲರ್‌ ಬೂಮ್ರಾ ಹಾಗೂ ಹನುಮ ವಿಹಾರಿ ಬದಲಿಗೆ ಟಿ20 ಸ್ಪೆಷಲಿಸ್ಟ್‌ ವಾಷಿಂಗ್ಟನ್‌ ಸುಂದರ್‌, ವೇಗಿ ಶಾರ್ದೂಲ್‌ ಠಾಕೂರ್‌, ಮಯಾಂ‌ಕ್‌ ಅಗರ್ವಾಲ್‌ ಹಾಗೂ ಟಿ.ನಟರಾಜನ್‌ ಜಾಗ ಪಡೆದುಕೊಂಡಿದ್ದಾರೆ. ಇವರಲ್ಲಿ ವಾಷಿಂಗ್ಟನ್‌ ಸುಂದರ್‌ ಮತ್ತು ಟಿ.ನಟರಾಜನ್‌ ರಿಗೆ ಇದು ಪಾದಾರ್ಪಣಾ ಟೆಸ್ಟ್ ಪಂದ್ಯ. ಉಳಿದಂತೆ, ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.

ಆಸೀಸ್‌ ಪಾಳೆಯದಲ್ಲಿ ವಿಲ್‌ ಪುವೋಸ್ಕಿ ಬದಲಿಗೆ ಮಾರ್ಕಸ್‌ ಹ್ಯಾರಿಸ್‌ ಸ್ಥಾನ ಪಡೆದಿದ್ದಾರೆ.

ವಿಶೇಷವೇನೆಂದರೆ, ಭಾರತೀಯ ತಂಡದಲ್ಲಿ ಕೊನೆಯ ಬಾರಿ ಮೂರಕ್ಕಿಂತ ಐವರು ಆಟಗಾರರು ಗಾಯಾಳುಗಳ ಸ್ಥಾನ ಹಾಗೂ ಪಾದಾರ್ಪಣೆ ಮಾಡಿದ್ದು ಇಂಗ್ಲೆಂಡ್‌ ವಿರುದ್ದ 1996 ರಲ್ಲಿ. ಅಂದು ಸುನೀಲ್‌ ಜೋಶಿ, ವೆಂಕಟೇಶ್‌ ಪ್ರಸಾದ್‌, ರಾಹುಲ್‌ ದ್ರಾವಿಡ್‌ (ಕನ್ನಡಿಗರು), ಸೌರವ್‌ ಗಂಗೂಲಿ, ಪರಾಸ್‌ ಮಾಂಬ್ರೆ, ವಿಕ್ರಮ್‌ ರಾಥೋಡ್‌ ಮುಂತಾದವರು ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು.