ದಿ ಓವಲ್: ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ಮಧ್ಯೆ ನಾಲ್ಕನೇ ಟೆಸ್ಟ್ ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭ ವಾಗಿದೆ. ಅಂತೆಯೇ, ಕಳಪೆ ಪ್ರದರ್ಶನದಿಂದಾಗಿ ಆಟಗಾರರ ವೃತ್ತಿಜೀವನ ಕೊನೆಗೊಳ್ಳುವ ಸಾಧ್ಯತೆಯಿದೆ.
ಅಜಿಂಕ್ಯ ರಹಾನೆ ಕಳಪೆ ಪ್ರದರ್ಶನ ನೀಡುತ್ತಿರುವ ಕಾರಣ ತಂಡದಲ್ಲಿ ಅವರ ಸ್ಥಾನವೂ ತೂಗುಯ್ಯಾಲೆಯಲ್ಲಿದೆ. 5 ನೇ ಸ್ಥಾನದಲ್ಲಿ ಆಡ್ತಿರುವ ಅಜಿಂಕ್ಯ ರಹಾನೆ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಶತಕ ಸಿಡಿಸಿದ್ದರು. ಅಜಿಂಕ್ಯ ರಹಾನೆ, ಕೊನೆಯ ಎರಡು ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೆ, ಸೂರ್ಯಕುಮಾರ್ ಯಾದವ್ ಟೆಸ್ಟ್ ತಂಡಕ್ಕೆ ಪ್ರವೇಶ ಪಡೆಯ ಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ, ಇಶಾಂತ್ ಶರ್ಮಾ ಟೀಮ್ ಇಂಡಿಯಾಕ್ಕೆ ಮುಳುವಾಗಿದ್ದರು. ಇಶಾಂತ್ ಶರ್ಮಾ ಮೂರನೇ ಟೆಸ್ಟ್ ಪಂದ್ಯದಲ್ಲಿ ರನ್ ನೀಡಿದ್ದಲ್ಲದೆ, ಒಂದು ವಿಕೆಟ್ ಕೂಡ ನೀಡಲಿಲ್ಲ. ಇಶಾಂತ್ ಶರ್ಮಾ 22 ಓವರ್‌ಗಳಲ್ಲಿ ಯಾವುದೇ ವಿಕೆಟ್ ಪಡೆಯದೆ 92 ರನ್ ನೀಡಿದರು.
ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಅತ್ಯುತ್ತಮ ವೇಗದ ಬೌಲರ್ ಸೇರ್ಪಡೆಯಾಗಿದ್ದಾರೆ. ಭಾರತ ಟೆಸ್ಟ್ ತಂಡದ ಭಾಗವಾಗಿರುವ ಉಮೇಶ್ ಯಾದವ್, ಇಂಗ್ಲೆಂಡ್ ಪ್ರವಾಸದ ತಂಡದಲ್ಲಿ ಸ್ಥಾನ ಪಡೆಯ ಲು ಯಶಸ್ವಿಯಾಗಿರಬಹುದು, ಆದರೆ 48 ಟೆಸ್ಟ್ ಪಂದ್ಯ ಆಡಿರುವ 33 ವರ್ಷದ ಉಮೇಶ್ ಯಾದವ್ಗೆ ಇಂಗ್ಲೆಂಡ್ ಪ್ರವಾಸ ಕೊನೆಯ ಪಂದ್ಯವಾಗುವ ಸಾಧ್ಯತೆ ಯಿದೆ.