Thursday, 12th December 2024

ಯೂರೊ-2020 ಫುಟ್ಬಾಲ್: ಜರ್ಮನಿಗೆ ಸೋಲುಣಿಸಿದ ಫ್ರಾನ್ಸ್

ಮ್ಯೂನಿಚ್: ವಿಶ್ವಚಾಂಪಿಯನ್ ಫ್ರಾನ್ಸ್ ತಂಡ ಯೂರೊ-2020 ಫುಟ್ಬಾಲ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಪ್ರಬಲ ಜರ್ಮನಿ ವಿರುದ್ಧ 1-0 ಗೋಲಿನ ಗೆಲುವು ಸಾಧಿಸಲು ಕಾರಣವಾಯಿತು. ಇದಕ್ಕೆ ಮ್ಯಾಟ್ಸ್ ಹುಮ್ಮೆಲ್ಸ್ ಹೊಡೆದ ಸ್ವಯಂ ಗೋಲು ಕಾರಣವಾಯಿತು.

ವಿಶ್ವ ಚಾಂಪಿಯನ್ನರು 20ನೇ ನಿಮಿಷದಲ್ಲಿ ಮುನ್ನಡೆ ಸಾಧಿಸಿದರು. ಮಿಡ್‌ ಫೀಲ್ಡರ್ ಪಾಲ್ ಪೊಗಾಬಾ ಅವರ ಪಾಸನ್ನು ಲೂಕಸ್ ಹೆರ್ನಂಡೆಸ್ ಗೋಲು ಪೆಟ್ಟಿಗೆ ಬಳಿ ಶರವೇಗದಿಂದ ಕಳುಹಿಸಿದರು. ಡಿಫೆಂಡರ್ ಹ್ಯುಮ್ಮೆಲ್ಸ್ ಬಾಲ್ ಕ್ಲಿಯರ್ ಮಾಡುವ ಯತ್ನದಲ್ಲಿ ತನ್ನದೇ ನೆಟ್‌ನೊಳಗೆ ಸೇರಿಸಿದರು.

ಮುಂದಿನ ಪಂದ್ಯವನ್ನು ಶನಿವಾರ ಜರ್ಮನಿ ಪೋರ್ಚುಗಲ್ ಜತೆ ಆಡಲಿದ್ದರೆ, ಫ್ರಾನ್ಸ್ ಹಂಗೇರಿ ವಿರುದ್ಧ ಸೆಣೆಸಲಿದೆ.

ಪೊಗ್ಬಾ ನೀಡಿದ ಅದ್ಭುತ ಕ್ರಾಸ್‌ಫೀಲ್ಡ್ ಪಾಸನ್ನು ಹೆರ್ನಂಡ್ಸ್, ಎದುರಾಳಿ ತಂಡದ ರಕ್ಷಣಾ ಆಟಗಾರ ಹ್ಯುಮ್ಮಲ್ಸ್ ಅವರನ್ನು ವಂಚಿಸುವ ಪ್ರಯತ್ನ ಮಾಡಿದರು. ಎರಡು ವರ್ಷಗಳ ಕಾಲ ತಂಡದಿಂದ ಹೊರಗಿದ್ದ ಹಮ್ಮೆಲ್ಸ್ ಈ ಟೂರ್ನಿಗಾಗಿ ವಾಪಸ್ಸಾಗಿ ದ್ದರು. ಈ ಹಂತದಲ್ಲಿ ಹಮ್ಮಲ್ಸ್ ತಮ್ಮದೇ ಗೋಲ್‌ಕೀಪರ್ ಮ್ಯಾನ್ಯುಯೆಲ್ ನೇಮರ್ ಕಡೆಗೆ ತಳ್ಳಿದರು.