ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

England test series: ರೋಹಿತ್-ಕೊಹ್ಲಿ ಸ್ಥಾನ ತುಂಬುವರೇ ಕನ್ನಡಿಗ ಆಟಗಾರರು?

ರಾಹುಲ್‌ಗೆ ಎಡಗೈ ಬ್ಯಾಟರ್ ಬಿ. ಸಾಯಿಸುದರ್ಶನ್ ಕೂಡ ಪೈಪೋಟಿ ನೀಡುವ ಸಾಧ್ಯತೆಯೂ ಇದೆ. ಈ ಬಾರಿಯ ಐಪಿಎಲ್‌ನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಸಾಯಿಸುದರ್ಶನ್ ಉತ್ತಮ ರನ್‌ ಕಲೆ ಹಾಕಿದ್ದಾರೆ. ಮಾಜಿ ಕೋಚ್‌ ರವಿಶಾಸ್ತ್ರಿ, ಸುನೀಲ್‌ ಗವಾಸ್ಕರ್‌ ಸೇರಿ ಅನೇಕ ಮಾಜಿ ಆಟಗಾರರು ಸಾಯಿಸುದರ್ಶನ್‌ಗೆ ಟೆಸ್ಟ್‌ನಲ್ಲಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.

ರೋಹಿತ್-ಕೊಹ್ಲಿ ಸ್ಥಾನ ತುಂಬುವರೇ ಕನ್ನಡಿಗ ಆಟಗಾರರು?

Profile Abhilash BC May 14, 2025 10:03 AM

ಬೆಂಗಳೂರು: ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ(England test series) ನಡೆಯಲಿರುವ ಐದು ಟೆಸ್ಟ್‌ಗಳ ಸರಣಿಯಲ್ಲಿ ಆಡಲು ಭಾರತ ತಂಡವನ್ನು ಬಿಸಿಸಿಐ(BCCI) ಆಯ್ಕೆ ಸಮಿತಿಯು ಪ್ರಕಟಿಸುವ ಸಿದ್ಧತೆಯಲ್ಲಿದೆ. ಈ ಮಧ್ಯೆ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮಾ(Rohit sharma) ಮತ್ತು ವಿರಾಟ್ ಕೊಹ್ಲಿ(Virat Kohli) ಅವರ ಸ್ಥಾನಗಳನ್ನು ತುಂಬುವವರು ಯಾರು ಎಂಬ ಚರ್ಚೆ ಈಗ ಜೋರಾಗಿದೆ. ಈ ಪೈಪೋಟಿಯಲ್ಲಿ ಇಬ್ಬರು ಕನ್ನಡಿಗರು ಕಾಣಿಸಿಕೊಂಡಿದ್ದಾರೆ. ಅವರೆಂದರೆ ಕೆ.ಎಲ್‌ ರಾಹುಲ್‌ ಮತ್ತು ಕರುಣ್‌ ನಾಯರ್‌.

ರೋಹಿತ್‌ ಸ್ಥಾನಕ್ಕೆ ರಾಹುಲ್‌

ಸದ್ಯ ಭಾರತ ತಂಡದಲ್ಲಿ ಇರುವ ಹೆಚ್ಚು ಅನುಭವಿ ಬ್ಯಾಟರ್‌ನೆಂದರೆ ಅದು ಕನ್ನಡಿಗ ಕೆ.ಎಲ್. ರಾಹುಲ್. ಯಾವುದೇ ಬ್ಯಾಟಿಂಗ್‌ ಕ್ರಮಾಂಕದಲ್ಲಿಯೂ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುವ ಸಾಮರ್ಥ್ಯ ಅವರಲ್ಲಿದೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರು ಯಶಸ್ವಿ ಜೈಸ್ವಾಲ್ ಜತೆಗೆ ಇನಿಂಗ್ಸ್‌ ಆರಂಭಿಸಿದ್ದರು. ಹೀಗಾಗಿ ರೋಹಿತ್‌ ಅವರಿಂದ ತೆರವಾದ ಆರಂಭಿಕ ಸ್ಥಾನವನ್ನು ರಾಹುಲ್‌ ನಿಭಾಯಿಸುವ ಸಾಧ್ಯತೆ ಇದೆ.

ರಾಹುಲ್‌ಗೆ ಎಡಗೈ ಬ್ಯಾಟರ್ ಬಿ. ಸಾಯಿಸುದರ್ಶನ್ ಕೂಡ ಪೈಪೋಟಿ ನೀಡುವ ಸಾಧ್ಯತೆಯೂ ಇದೆ. ಈ ಬಾರಿಯ ಐಪಿಎಲ್‌ನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಸಾಯಿಸುದರ್ಶನ್ ಉತ್ತಮ ರನ್‌ ಕಲೆ ಹಾಕಿದ್ದಾರೆ. ಮಾಜಿ ಕೋಚ್‌ ರವಿಶಾಸ್ತ್ರಿ, ಸುನೀಲ್‌ ಗವಾಸ್ಕರ್‌ ಸೇರಿ ಅನೇಕ ಮಾಜಿ ಆಟಗಾರರು ಸಾಯಿಸುದರ್ಶನ್‌ಗೆ ಟೆಸ್ಟ್‌ನಲ್ಲಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಹೀಗಾಗಿ ಅವರು ಕೂಡ ಆರಂಭಿಕ ಸ್ಥಾನದ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಕೊಹ್ಲಿ ಸ್ಥಾನಕ್ಕೆ ಕರುಣ್‌

ರಣಜಿ ಮತ್ತು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಗಳಲ್ಲಿ ರನ್‌ ಹೊಳೆಯನ್ನೇ ಹರಿಸಿದ್ದ ಕನ್ನಡಿಗ ಕರುಣ್ ನಾಯರ್ ಅವರಿಗೂ ಮತ್ತೆ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಅವರು ಕೂಡ 3 ಅಥವಾ 4ನೇ ಕ್ರಮಾಂಕದಲ್ಲಿ ಆಡಲು ಸೂಕ್ತ ಬ್ಯಾಟರ್ ಆಗಿದ್ದಾರೆ. ಹೀಗಾಗಿ ಕೊಹ್ಲಿಯ ಸ್ಥಾನಕ್ಕೆ ಇವರು ಸೂಕ್ತ ಆಟಗಾರನಾಗಬಲ್ಲರು. 2016ರಲ್ಲಿ ಕರುಣ್‌ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ತ್ರಿಶತಕ ಗಳಿಸಿದ್ದರು. ಆದರೆ 2017ರ ನಂತರ ಅವರಿಗೆ ಮತ್ತೆ ಟೆಸ್ಟ್‌ ತಂಡದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ.

ಇದನ್ನೂ ಓದಿ IPL 2025: ಕೆಕೆಆರ್‌ ವಿರುದ್ದದ ಪಂದ್ಯಕ್ಕೆ ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌ ಔಟ್‌?

ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರು ಕೂಡ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರು ಗಾಯದಿಂದ ಗುಣಮುಖರಾಗಬೇಕಿದೆ. ಮಂಡಿರಜ್ಜು ಗಾಯದ ಸಮಸ್ಯೆಗೆಯಿಂದ ಬಳಲುತ್ತಿರುವ ಅವರು ಈಗಾಗಲೇ ಐಪಿಎಲ್ 2025ರಿಂದ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಚೇತರಿಕೆಯ ಮೇಲೆ ಆಯ್ಕೆಯಾಗುವ ಸಾಧ್ಯತೆ ಇದೆ.