ದೆಹಲಿ: ದೇಶಾದ್ಯಂತ ಕೊರೋನಾ ಸೋಂಕಿನ ಭೀತಿಯ ಹಿನ್ನೆೆಲೆಯಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ ಗಳನ್ನು ಯುಎಇಯಲ್ಲಿ ಆಯೋಜಿಸಲಾಗುತ್ತಿದ್ದು, ಇದರ ಸಿದ್ದತೆಯನ್ನು ಪರಿಶೀಲಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ದುಬೈಗೆ ಪ್ರಯಾಣ ಬೆಳೆಸಿದರು.
ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಈ ವರ್ಷಾರಂಭದಲ್ಲಿ ಗಂಗೂಲಿ ವಿಮಾನ ಯಾನ ಕೈಗೊಂಡಿರಲಿಲ್ಲ. ಇದು ಅವರ ಕಳೆದ ಆರು ತಿಂಗಳಿನಲ್ಲಿ ಮೊದಲನೇ ವಿದೇಶ ಪ್ರಯಾಣವಾಗಿದೆ. ಹದಿಮೂರನೇ ಐಪಿಎಲ್ ಪಂದ್ಯಾವಳಿಯ ಸಿದ್ದತೆಗಳನ್ನು ಖುದ್ದಾಗಿ ವೀಕ್ಷಿಸಲಿದ್ದಾರೆ.
ಕೊರೋನಾ ಸೋಂಕಿನ ಹಿನ್ನೆೆಲೆಯಲ್ಲಿ, ಗಂಗೂಲಿ ಮಾಸ್ಕ್ ಹಾಗೂ ಫೇಸ್ ಶೀಲ್ಡ್ ಧರಿಸಿರುವ ಚಿತ್ರವನ್ನು ಶೇರ್ ಮಾಡಿ ದ್ದಾರೆ. ಈ ಬಾರಿಯ ಐಪಿಎಲ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.