Thursday, 12th December 2024

ಕನ್ನಡಿಗನ ಪರ ಗವಸ್ಕರ್ ಬ್ಯಾಟಿಂಗ್

ಎರಡನೇ ವರ್ಷವೂ ಮಯಾಂಕ್ ಅಗರ್ವಾಲ್ ಬ್ಯಾಾಟಿಂಗ್ ಲಯ ಮುಂದುವರಿಸುವ ವಿಶ್ವಾಾಸ : ಬ್ಯಾಾಟಿಂಗ್ ದಿಗ್ಗಜ ಅಭಿಪ್ರಾಾಯ

ಮುಂಬೈ:
ಆಡಿರುವ ಎಂಟು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿರುವ ಮಯಾಂಕ್ ಅಗರ್ವಾಲ್ ಅವರು ಮುಂದಿನ ವರ್ಷವೂ ತನ್ನ ಬ್ಯಾಾಟಿಂಗ್ ಲಯ ಮುಂದುವರಿಸಲಿದ್ದಾಾರೆಂದು ಬ್ಯಾಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್‌ರ್ ವಿಶ್ವಾಾಸ ವ್ಯಕ್ತಪಡಿಸಿದ್ದಾಾರೆ.

ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಬಾಂಗ್ಲಾಾದೇಶ ವಿರುದ್ಧದ ಮೊದಲನೇ ಟೆಸ್‌ಟ್‌ ಪಂದ್ಯದಲ್ಲಿ 243 ರನ್ ಗಳಿಸಿದ್ದರು. ಇದು ಅವರ ವೃತ್ತಿಿ ಜೀವನದ ವೈಯಕ್ತಿಿಕ ಅತಿ ಹೆಚ್ಚು ರನ್ ಆಗಿತ್ತು. ಇವರ ಅದ್ಭುತ ಬ್ಯಾಾಟಿಂಗ್ ನೆರವಿನಿಂದ ಭಾರತ ಇನಿಂಗ್‌ಸ್‌ ಹಾಗೂ 130 ರನ್ ಗಳಿಂದ ಜಯ ಸಾಧಿಸಿತ್ತು. ಇತ್ತೀಚೆಗೆ ಬಿಡುಗಡೆಯಾಗಿದ್ದ ಟೆಸ್‌ಟ್‌ ಬ್ಯಾಾಟಿಂಗ್ ಶ್ರೇಯಾಂಕದಲ್ಲಿ ಮಯಾಂಕ್ 11ನೇ ಸ್ಥಾಾನ ಪಡೆಯುವ ಮೂಲಕ ವೃತ್ತಿಿ ಜೀವನದ ಶ್ರೇಷ್ಠ ಕ್ರಮಾಂಕ ಪಡೆದಿದ್ದಾಾರೆ.

‘‘ ಮಯಾಂಕ್ ಅಗರ್ವಾಲ್ ಟೆಸ್‌ಟ್‌ ಕ್ರಿಿಕೆಟ್ ತುಂಬಾ ಆಹ್ಲಾಾದಿಸುತ್ತಿಿದ್ದಾಾರೆ. ಮೊದಲನೇ ವರ್ಷದಂತೆ ಎರಡನೇ ವರ್ಷವೂ ಅದೇ ಬ್ಯಾಾಟಿಂಗ್ ಮುಂದುವರಿಸಲಿದ್ದಾಾರೆಂಬ ನಂಬಿಕೆ ಇದೆ. ಬಲಗೈ ಆರಂಭಿಕನ ಬಗ್ಗೆೆ ಎರಡನೇ ವರ್ಷ ಇನ್ನೂ ಹೆಚ್ಚಿಿನ ಮಾಹಿತಿ ಲಭ್ಯವಾಗಲಿದೆ. ಆದರೆ, ಸದ್ಯ ಅವರು ಅತ್ಯುತ್ತಮ ಬ್ಯಾಾಟಿಂಗ್ ಮಾಡುತ್ತಿಿದ್ದಾಾರೆ.’’ ಎಂದು ಸ್ಟಾಾರ್ ಸ್ಪೋೋರ್ಟ್‌ಸ್‌ ವಾಹಿನಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾಾರೆ.

ಅಗರ್ವಾಲ್ ಅವರ ಆಫ್‌ಸೈಡ್, ಸ್ಟ್ರೈಟ್ ಹಾಗೂ ಫ್ರಂಟ್ ಹಾಗೂ ಬ್ಯಾಾಕ್ ಫುಟ್ ಬ್ಯಾಾಟಿಂಗ್ ಅಮೋಘವಾಗಿದೆ. ಅವರ ನೋಡಲು ಖುಷಿಯಾಗುತ್ತದೆ. ಪ್ರಸ್ತುತ ಅವರು ಅತ್ಯುತ್ತಮ ಲಯದಲ್ಲಿದ್ದಾಾರೆ. ಅಲ್ಲದೇ, ತಮ್ಮ ಬ್ಯಾಾಟಿಂಗ್ ನಲ್ಲಿ ಹೆಚ್ಚಿಿನ ವಿಶ್ವಾಾಸ ಹೊಂದಿದ್ದಾಾರೆ ಎಂದು ಹೇಳಿದರು.

ಹಿರಿಯ ವೇಗಿ ಮೊಹಮ್ಮದ್ ಶಮಿ ಕೂಡ ಬಾಂಗ್ಲಾಾದೇಶ ವಿರುದ್ಧ ಅದ್ಭುತ ಬೌಲಿಂಗ್ ಮಾಡಿದರು. ಮೊದಲನೇ ಇನಿಂಗ್‌ಸ್‌ ನಲ್ಲಿ 27 ಕ್ಕೆೆ 3 ಹಾಗೂ ಎರಡನೇ ಇನಿಂಗ್‌ಸ್‌ ನಲ್ಲಿ 21 ಕ್ಕೆೆ 4 ವಿಕೆಟ್ ಕಬಳಿಸಿದರು. ಇದರ ಫಲವಾಗಿ ಐಸಿಸಿ ಬೌಲಿಂಗ್ ಶ್ರೇಯಾಂಕದಲ್ಲಿ ವೃತ್ತಿಿ ಜೀವನದ ಶ್ರೇಷ್ಠ ಸ್ಥಾಾನ ಪಡೆದಿದ್ದಾಾರೆ.

‘‘ ಪಿಂಕ್ ಪಂದ್ಯದ ಬಗ್ಗೆೆ ಪ್ರತಿಕ್ರಿಿಯಿಸಿದ ಅವರು, ‘ ಬೌಲರ್‌ಗಳು ಪಿಂಕ್ ಚೆಂಡು ಪಿಚ್ ನಲ್ಲಿ ಹೇಗೆ ವರ್ತಿಸುತ್ತದೆ ಎನ್ನುವುದನ್ನು ಮನಗಾಣಬೇಕು. ಪಿಚ್ ಒಂದು ವೇಳೆ ನಿಧಾನಗತಿಯಿಂದ ಕೂಡಿದ್ದರೆ ಏನು ಮಾಡಬೇಕು ಎಂಬ ಬಗ್ಗೆೆ ಪ್ರತಿಯೊಂದು ತಂತ್ರವನ್ನು ರೂಪಿಸಬೇಕು. ಆಗ ಮಾತ್ರ ಬ್ಯಾಾಟ್‌ಸ್‌ ಮನ್ ನಿಯಂತ್ರಿಿಸಲು ಸಾಧ್ಯ’’ ಎಂದು ಸಲಹೆ ನೀಡಿದರು.

ಭಾರತ ತಂಡದಲ್ಲಿ ಗುಣಮಟ್ಟದ ಬೌಲರ್‌ಗಳು:
ಭಾರತ ತಂಡದ ಮಾಜಿ ಆರಂಭಿಕ ಬ್ಯಾಾಟ್‌ಸ್‌‌ಮನ್ ಗೌತಮ್ ಗಂಭೀರ್ ಕೂಡ ವೇಗಿಗಳನ್ನು ಕೊಂಡಾಡಿದ್ದಾಾರೆ. ‘‘ ಬೇರೆ ತಂಡಗಳನ್ನು ಗಮನಿಸಬಹುದು. ಆ ತಂಡಗಳಲ್ಲಿ ಗುಣಮಟ್ಟದ ವೇಗಿಗಳು ಹಾಗೂ ಸ್ಪಿಿನ್ನರ್ ಗಳು ಇದ್ದಾಾರೆ. ಆದರೆ, ಪ್ರಸ್ತುತ ಭಾರತ ತಂಡದಲ್ಲಿ ಇಬ್ಬರು ಗುಣಮಟ್ಟದ ಸ್ಪಿಿನ್ನರ್ ಗಳು ಹಾಗೂ ಮೂವರು ಗುಣಮಟ್ಟದ ವೇಗಿಗಳು ಇದ್ದಾಾರೆ. ಇವರ ಜತೆಗೆ, ಜಸ್ಪ್ರಿತ್ ಬುಮ್ರಾಾ ಹಾಗೂ ಭುವನೇಶ್ವರ್ ಕುಮಾರ್ ಇದ್ದಾಾರೆ.’’ ಎಂದು ತಿಳಿಸಿದ್ದಾಾರೆ. ಭಾರತ ಹಾಗೂ ಬಾಂಗ್ಲಾಾದೇಶ ನಡುವಿನ ಚೊಚ್ಚಲ ಹೊನಲು ಬೆಳಕಿನ ಪಂದ್ಯ ಶುಕ್ರವಾರದಿಂದ ಆರಂಭವಾಗಲಿದೆ.

ಟೆಸ್‌ಟ್‌ ಕ್ರಿಿಕೆಟ್ ಬೆಳವಣಿಗೆಗೆ ಪಿಂಕ್ ಬಾಲ್ ಪರಿಹಾರವಲ್ಲ: ದ್ರಾಾವಿಡ್
ಟೆಸ್‌ಟ್‌ ಕ್ರಿಿಕೆಟ್ ಜೀರ್ಣೋದ್ಧಾಾರಕ್ಕೆೆ ಪಿಂಕ್ ಬಾಲ್ ಒಂದೇ ಪರಿಹಾರವಲ್ಲ. ಆದರೆ, ಟೆಸ್‌ಟ್‌ ಕ್ರಿಿಕೆಟ್‌ಗೆ ಜೀವತುಂಬಲು ನೆರವಾಗುವ ಒಂದು ಅಂಶ. ಮೈದಾನದಲ್ಲಿನ ತೇವಾಂಶವನ್ನು ನಿಯಂತ್ರಿಿಸುವ ಪರಿಹಾರ ಕಂಡುಕೊಂಡರೆ ಪಿಂಕ್ ಬಾಲ್ ಟೆಸ್‌ಟ್‌ ಪ್ರತಿ ವರ್ಷ ಆಯೋಜಿಸಲು ಸಾಧ್ಯವಾಗುತ್ತದೆ ಎಂದು ಸಂದರ್ಶನವೊಂದರಲ್ಲಿ ಭಾರತ ಕ್ರಿಿಕೆಟ್ ತಂಡದ ಮಾಜಿ ನಾಯಕ ಮತ್ತು ರಾಷ್ಟ್ರೀಯ ಕ್ರಿಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾಾವಿಡ್ ಅಭಿಪ್ರಾಾಯ ಪಟ್ಟಿಿದ್ದಾರೆ.
ಮೈದಾನದಲ್ಲಿನ ತೇವಾಂಶದಿಂದ ಚೆಂಡು ಒದ್ದೆಯಾದರೆ ಬೌಲರ್‌ಗಳಿಗೆ ಚೆಂಡನ್ನು ಎಸೆಯುವುದು ಕಷ್ಟವಾಗಲಿದೆ. ಅಷ್ಟೇ ಅಲ್ಲದೆ, ಚೆಂಡಿನಲ್ಲಿ ಯಾವುದೇ ಸ್ವಿಿಂಗ್ ಉಳಿಯುವುದಿಲ್ಲ. ಆದರೂ ಪಿಂಕ್ ಬಾಲ್ ಮೂಲಕ ಕ್ರೀಡಾಂಗಣಕ್ಕೆೆ ಜನರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಎಂದರೆ ಪ್ರಯತ್ನಿಿಸಲೇಬೇಕು ಎಂದು ಹೇಳಿದ್ದಾರೆ.
ಟೆಸ್‌ಟ್‌ ಕ್ರಿಿಕೆಟ್ ಜನರನ್ನು ಆಕರ್ಷಿಸಲು ಕ್ರೀಡಾಂಗಣದ ಒಳಗಡೆ ಪ್ರೇಕ್ಷಕರಿಗೆ ಲಭ್ಯವಾಗುವ ಸವಲತ್ತುಗಳು ಕೂಡ ಮುಖ್ಯವಾಗುತ್ತದೆ. ಪುಣೆಯಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಿಕಾ ನಡುವಣ ಟೆಸ್‌ಟ್‌ ಪಂದ್ಯದಲ್ಲಿ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಿರಲಿಲ್ಲ ಎಂದು ದೂರಿದ್ದರು. ಹಾಗಾಗಿ, ಕನಿಷ್ಠ ಸವಲತ್ತುಗಳಾದ ಶೌಚಾಲಯಗಳು, ಆಸನ ವ್ಯವಸ್ಥೆೆ ಮತ್ತು ಪಾರ್ಕಿಂಗ್ ಸೇರಿದಂತೆ ಮೊದಲಾದ ಮೂಲ ಸೌರ್ಕಯಗಳನ್ನು ಒದಗಿಸಿಕೊಡಬೇಕಾಗುತ್ತದೆ. ಈ ಅಂಶಗಳು ಕೂಡ ಪ್ರಭಾವ ಬೀರುತ್ತವೆ, ಎಂದು ದ್ರಾಾವಿಡ್ ತಿಳಿಸಿದ್ದಾರೆ.