Sunday, 15th December 2024

ಬಾಕ್ಸಿಂಗ್ ಡೇ ಟೆಸ್ಟ್‌: ಹನ್ನೊಂದರ ಬಳಗ ಸೇರಿದ ಗಿಲ್‌, ರಾಹುಲ್‌ ಹೊರಕ್ಕೆ

ನವದೆಹಲಿ: ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಮುನ್ನಾದಿನ ಟೀಮ್ ಇಂಡಿಯಾ ಆಡುವ 11ರ ಬಳಗವನ್ನು ಪ್ರಕಟಿಸಿದೆ. ಶುಭಮನ್ ಗಿಲ್ ಆಡುವ ಬಳಗವನ್ನು ಸೇರಿದರೆ, ಕನ್ನಡಿಗ ಕೆಎಲ್ ರಾಹುಲ್‌ರನ್ನು ಹೊರಗಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.

ಪೃಥ್ವಿ ಶಾ ಸ್ಥಾನವನ್ನು ತುಂಬಲಿರುವ 21ರ ಹರೆಯದ ಗಿಲ್ ಚೊಚ್ಚಲ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ. ವೇಗದ ಬೌಲರ್ ಮುಹಮ್ಮದ್ ಸಿರಾಜ್ ಕೂಡ ಟೆಸ್ಟ್ ಕ್ರಿಕೆಟಿಗೆ ಕಾಲಿಡಲಿದ್ದಾರೆ. ಪ್ರತಿಸ್ಪರ್ಧಿ ನವದೀಪ್ ಸೈನಿ ಅವರನ್ನು ಹಿಂದಿಕ್ಕಿ ಗಾಯಗೊಂಡಿ ರುವ ಮುಹಮ್ಮದ್ ಶಮಿ ಅವರಿಂದ ತೆರವಾಗಿರುವ ಸ್ಥಾನವನ್ನು ತುಂಬಲು ಸಿರಾಜ್ ಸಜ್ಜಾಗಿದ್ದಾರೆ. ಶಮಿ ಮೊದಲ ಟೆಸ್ಟ್ ಪಂದ್ಯ ದಲ್ಲಿ ಬ್ಯಾಟಿಂಗ್ ಮಾಡುವಾಗ ಚೆಂಡು ಮಣಿಕಟ್ಟಿಗೆ ತಗಲಿ ಗಾಯವಾಗಿತ್ತು.

ಟ್ವೆಂಟಿ-20 ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಸ್ಥಾನ ಪಡೆಯದ ಆಲ್‌ರೌಂಡರ್ ರವೀಂದ್ರ ಜಡೇಜ ಆಡುವ 11ರ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ. ಬ್ಯಾಟಿಂಗ್ ಸರದಿಯನ್ನು ಬಲಿಷ್ಠಗೊಳಿಸಲು ಮುಂದಾಗಿರುವ ಆಯ್ಕೆಗಾರರು ವಿಕೆಟ್‌ಕೀಪರ್ ವೃದ್ದಿಮಾನ್ ಸಹಾ ಬದಲಿಗೆ ರಿಷಭ್ ಪಂತ್‌ರನ್ನು ಆಯ್ಕೆ ಮಾಡಿದ್ದಾರೆ. ಸಹಾ ಅಡಿಲೇಡ್ ಟೆಸ್ಟ್‌ನಲ್ಲಿ ರನ್ ಗಳಿಸಲು ಪರದಾಡಿ ದ್ದರು.