Thursday, 19th September 2024

ಪಂದ್ಯದ ಕ್ಲೈಮ್ಯಾಕ್ಸ್: ಸ್ಪೋಟಕ ಆಟಗಾರ ಗ್ಲೆನ್‌ ಮ್ಯಾಕ್ಸ್’ವೆಲ್‌ ವಿಕೆಟ್‌ ಪತನ

ಕ್ಯಾನ್‌ಬೆರ್ರಾ: ಟೀಂ ಇಂಡಿಯಾ ನೀಡಿದ ಸವಾಲಿಗೆ ಉತ್ತರವಾಗಿ ಆತಿಥೇಯ ಆಸ್ಟ್ರೇಲಿಯಾ ತಂಡ ಸ್ಪೋಟಕ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ವಿಕೆಟನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇತ್ತೀಚಿನ ವರದಿ ಪ್ರಕಾರ, ಆಸೀಸ್‌ ಏಳು ವಿಕೆಟ್ ಕಳೆದುಕೊಂಡು 270 ರನ್‌ ಗಳಿಸಿದೆ.

ನಾಯಕ ಆರನ್‌ ಫಿಂಚ್‌ (75)ಅವರ ಅರ್ಧಶತಕ ಹೊರತುಪಡಿಸಿ, ಇತರ ಆಟಗಾರರಿಂದಲೂ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ಹೊಮ್ಮಲಿಲ್ಲ. ಮೊಯ್ಸಸ್‌ ಹೆನ್ರಿಕ್ಸ್ ಹಾಗೂ ಕ್ಯಾಮರೂನ್ ಗ್ರೀನ್ 20 ಆಸುಪಾಸು ರನ್ ಗಳಿಸಿ, ಔಟಾದರು. ಕಳೆದ ಎರಡು ಪಂದ್ಯಗಳ ಶತಕವೀರ ಸ್ಟೀವನ್‌ ಸ್ಮಿತ್‌ರನ್ನು ಈ ಬಾರಿ ಅಬ್ಬರಿಸಲು ಭಾರತ ಬಿಡಲಿಲ್ಲ. 7 ರನ್‌ ಗಳಿಸುವಷ್ಟರಲ್ಲಿ ಶಾರ್ದೂಲ್‌ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು. ಗ್ಲೆನ್‌ ಮ್ಯಾಕ್ಸ್ವೆಲ್‌ ತಂಡಕ್ಕೆ ಗೆಲುವಿನ ದಡ ಸೇರಿಸುವ ಹಂತದಲ್ಲಿ ಬುಮ್ರಾಗೆ ಬೌಲ್ಡ್ ಆದರು.

ಇದಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ನಾಯಕ ವಿರಾಟ್‌ ಕೊಹ್ಲಿ ಮತ್ತು ಆಲ್ರೌಂಡರುಗಳಾದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜ ದಾಖಲೆಯ ಜೊತೆಯಾಟದ ನೆರವಿನಿಂದ ಭಾರತ ತಂಡ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 302 ರನ್ ಗಳಿಸಿತು.

 

Leave a Reply

Your email address will not be published. Required fields are marked *