Saturday, 23rd November 2024

ಇಂದು ಗೆದ್ದರೆ ಗುಜರಾತ್​ ಟೈಟಾನ್ಸ್​​ ಕ್ವಾಲಿಫೈ ಫಿಕ್ಸ್..!

ಮುಂಬೈ: ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್  ಮತ್ತು ಗುಜರಾತ್​ ಟೈಟಾನ್ಸ್​​ ಮುಖಾಮುಖಿಯಾಗುತ್ತಿದೆ.

ಟೇಬಲ್​ ಟಾಪ್​ನಲ್ಲಿರುವ ಗುಜರಾತ್​ ಇಂದಿನ ಪಂದ್ಯ ಗೆದ್ದಲ್ಲಿ ಅಗ್ರಸ್ಥಾನದಲ್ಲಿ ಭದ್ರವಾಗ ಲಿದ್ದು, ಕ್ವಾಲಿಫೈ ಆಗಲು ಇನ್ನೊಂದು ಪಂದ್ಯದ ಗೆಲುವು ಬೇಕಾದೀತು.

ಮುಂಬೈ ಇಂಡಿಯನ್ಸ್​ಗೆ ಈ ಪಂದ್ಯ ಸೇರಿದಂತೆ ಮುಂದೆ ಆಡಲಿರುವ ಎರಡು ಪಂದ್ಯಗಳು ನಿರ್ಣಾಯಕವಾಗಲಿರುವುದರಿಂದ ಗೆಲ್ಲುವ ಒತ್ತಡ ತಂಡದ ಮೇಲಿದೆ. ವಾಂಖೆಡೆಯಲ್ಲಿ ಇಂದಿನ ಪಂದ್ಯ ನಡೆಯುತ್ತಿರುವುದರಿಂದ ಇದರ ಲಾಭ ಪಡೆದುಕೊಳ್ಳುವ ಸಾಧ್ಯತೆ ರೋಹಿತ್​ ಪಡೆಗಿದೆ.

ಗುಜರಾತ್​ ಕಳೆದ ಮೂರು ಪಂದ್ಯದಲ್ಲಿ ಎದುರಾಳಿಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿ, ಎರಡು ಪಂದ್ಯದಲ್ಲಿ ಜಯಿಸಿದೆ. ಇದೇ ಬೌಲಿಂಗ್​ ಬಲವನ್ನು ಮುಂಬೈ ಇಂಡಿಯನ್ಸ್​ ವಿರುದ್ಧ ಹಾರ್ದಿಕ್​ ಪಾಂಡ್ಯ ತೆಗೆದುಕೊಂಡು ಹೋಗಲಿದ್ದಾರೆ. ಬೃಹತ್​ ಮೊತ್ತವನ್ನು ಪೇರಿಸಿ ಗೆದ್ದ ಮುಂಬೈಗೆ ಗುಜರಾತ್​ ಬೌಲರ್​ಗಳು ಸವಾಲಾಗಲಿದ್ದಾರೆ.

ಗುಜರಾತ್​ ಬೃಹತ್​ ರನ್​ ನೀಡಿದರೂ ಅದನ್ನೂ ಬೆನ್ನಟ್ಟುವ ಸಾಮರ್ಥ್ಯದ ಪಡೆ ರೋಹಿತ್​ ಬಳಿ ಇದೆ. ಗೆಲುವಿನ ಅನಿವಾರ್ಯ ಇರುವ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಇಂದಿನ ಹಣಾಹಣಿ ಜೋರಾಗಿಯೇ ನಡೆಯಲಿದೆ.

ಮುಂಬೈ ನಾಯಕ ರೋಹಿತ್​​ ಶರ್ಮಾ ಇನ್ನೂ ಫಾರ್ಮ್​ ಕಂಡುಕೊಂಡಿಲ್ಲ. ಆದರೆ, ಇಶಾನ್​ ಕಿಶನ್​, ಕ್ಯಾಮರೂನ್​ ಗ್ರೀನ್​​, ಸೂರ್ಯ ಕುಮಾರ್ ಯಾದವ್​, ಟಿಮ್​ ಡೇವಿಡ್​, ನೆಹಾಲ್​ ವಧೇರಾ, ತಿಲಕ್​ ವರ್ಮಾ ಭರ್ಜರಿ ಫಾರ್ಮ್​ನಲ್ಲಿದ್ದು, ದೊಡ್ಡ ಮೊತ್ತದ ಗುರಿಯನ್ನು ಸುಲಭವಾಗಿ ಗೆಲ್ಲಿಸುತ್ತಿದ್ದಾರೆ. ಗುಜರಾತ್​ ಸಹ ಬ್ಯಾಟಿಂಗ್​ ಬೌಲಿಂಗ್​ನಲ್ಲಿ ಬಲಿಷ್ಟವಾಗಿದೆ.

ವೃದ್ಧಿಮಾನ್​ ಸಾಹ, ಶುಭಮನ್​ ಗಿಲ್​, ಹಾರ್ದಿಕ್​ ಪಾಂಡ್ಯ ಅಬ್ಬರದ ಪ್ರದರ್ಶನ ನೀಡುತ್ತಿದ್ದಾರೆ. ಇವರ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯ ಬ್ಯಾಟ್​ ಬೀಸುತ್ತಿದ್ದಾರೆ. ಬೌಲಿಂಗ್​ನಲ್ಲಿ ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ ಪ್ರಭಾವ ಬೀರುತ್ತಿದ್ದಾರೆ.

ಮುಂಬೈ ಇಂಡಿಯನ್ಸ್​: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್​​ ಕೀಪರ್​​), ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವಧೇರಾ, ತಿಲಕ್ ವರ್ಮಾ, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆಂಡಾರ್ಫ್

ಗುಜರಾತ್​ ಟೈಟಾನ್ಸ್​​: ವೃದ್ಧಿಮಾನ್ ಸಹಾ(ವಿಕೆಟ್​ ಕೀಪರ್​​), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ