Friday, 13th December 2024

ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಗೈ ವಿಟ್ಟಲ್ ಪ್ರಾಣಾಪಾಯದಿಂದ ಪಾರು

ಫಲೋ: ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಗೈ ವಿಟ್ಟಲ್ ಅವರು ಚಿರತೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅವರನ್ನು ಜಿಂಬಾಬ್ವೆಯ ಬಫಲೋ ರೇಂಜ್‌ನಿಂದ ವಿಮಾನದ ಮೂಲಕ ತುರ್ತು ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಯಿತು.

ಚಿಕಿತ್ಸೆ ಪಡೆಯುತ್ತಿರುವ ವಿಟ್ಟಲ್ ಅವರ ಫೋಟೋಗಳನ್ನು ಅವರ ಪತ್ನಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ವಿಟ್ಟಲ್ ಅವರು ಬ್ಯಾಂಡೇಜ್ ಮತ್ತು ರಕ್ತಸಿಕ್ತ ಅಂಗಿಯನ್ನು ಧರಿಸಿರುವುದನ್ನು ಕಾಣಬಹುದಾಗಿದೆ. ಅವರು ಮಿಲ್ಟನ್ ಪಾರ್ಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

2013 ರಲ್ಲಿ, 8 ಅಡಿ ಉದ್ದದ ಮೊಸಳೆ ದಾಳಿಯಿಂದಲೂ ಪಾರಾಗಿದ್ದರು.

51 ವರ್ಷದ ವಿಟ್ಟಲ್ ಜಿಂಬಾಬ್ವೆ ಪರ 46 ಟೆಸ್ಟ್ ಮತ್ತು 147 ಏಕದಿನ ಪಂದ್ಯಗಳನ್ನಾಡಿದ್ದಾರೆ.