Sunday, 15th December 2024

ಜಿಮ್ನಾಸ್ಟಿಕ್‌ ಕ್ವೀನ್‌ ಹಂಗೇರಿಯ ಆಯಗ್ನೆಸ್‌ ಕೆಲೆಟಿಗೆ ಶತಕದ ಹರೆಯ

ಬುಡಾಪೆಸ್ಟ್‌ : ‘ಒಲಿಂಪಿಕ್ಸ್‌ ಜಿಮ್ನಾಸ್ಟಿಕ್‌ ಕ್ವೀನ್‌’ ಎಂದೇ ಖ್ಯಾತ ಹಂಗೇರಿಯ ಆಯಗ್ನೆಸ್‌ ಕೆಲೆಟಿ 100ನೇ ಜನ್ಮ ದಿನದ ಸಂಭ್ರಮ ಆಚರಿಸಿಕೊಂಡರು. ಅವರೀಗ ಅತೀ ಹಿರಿಯ ಒಲಿಂಪಿಕ್ಸ್‌ ಚಾಂಪಿಯನ್‌ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

ಕೆಲೆಟಿ, ಒಲಿಂಪಿಕ್ಸ್‌ ಜಿಮ್ಮಾಸ್ಟಿಕ್‌ನಲ್ಲಿ 10 ಪದಕ ಗೆದ್ದ ಸಾಧಕಿ. ಇದರಲ್ಲಿ 5 ಚಿನ್ನದ ಪದಕಗಳೆಂಬುದು ವಿಶೇಷ. ದ್ವಿತೀಯ ವಿಶ್ವ ಯುದ್ಧದಿಂದಾಗಿ 1940 ಮತ್ತು 1944ರ ಒಲಿಂಪಿಕ್ಸ್‌ ರದ್ದಾಗದೇ ಹೋಗಿದ್ದರೆ, ಇವರ ಪದಕಗಳ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿತ್ತು.

ಕೆಲೆಟಿ, “ನೂರು ವರ್ಷ ಎನ್ನುವುದು ನನಗೆ 60 ವರ್ಷಗಳ ಅನುಭವ ಕೊಡುತ್ತಿದೆ’ ಎಂದಿದ್ದಾರೆ.