Wednesday, 9th October 2024

ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್‌‌ನಿಂದ ಹಮೀದ್ ಶಿನ್ವಾರಿ ವಜಾ

ಕಾಬೂಲ್: ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಹಮೀದ್ ಶಿನ್ವಾರಿ ಅವರನ್ನು ವಜಾ ಮಾಡಲಾಗಿದೆ.

ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಯಿಂದ ತಮ್ಮನ್ನು ತೆಗೆದು ಹಾಕಲಾಗಿದ್ದು, ತಮ್ಮ ಸ್ಥಾನಕ್ಕೆ ತಾಲಿಬಾನ್ ನ ಹೊಸ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿಯ ಕಿರಿಯ ಸಹೋದರ ಅನಸ್ ಹಕ್ಕಾನಿ ಅವರನ್ನು ನೇಮಕ ಮಾಡಲಾಗಿದೆ ಎಂದು ಶಿನ್ವಾರಿ ಹೇಳಿದ್ದಾರೆ.

ನನ್ನನ್ನು ವಜಾಗೊಳಿಸಲು ಕಾರಣ ನೀಡಿಲ್ಲ. ಆದರೆ ನಸೀಬುಲ್ಲಾ ಹಕ್ಕಾನಿ ಅವರನ್ನು ನೇಮಿಸಲಾಗಿದೆ ಎಂದು ಮಾತ್ರ ತಿಳಿಸಿರುವುದಾಗಿ ಹಮೀದ್ ಶಿನ್ವಾರಿ ಹೇಳಿದ್ದಾರೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯೂ ತನ್ನ ಫೇಸ್ಬುಕ್ ಪೇಜ್ ನಲ್ಲಿ ಹೊಸ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನಸೀಬುಲ್ಲಾ ಹಕ್ಕಾನಿ  ನೇಮಕ ಗೊಂಡಿದ್ದಾರೆ ಎಂದು ಪ್ರಕಟಿಸಿದೆ.

ಕ್ರೀಡೆಗಳಿಂದ ಮಹಿಳೆಯರನ್ನು ನಿಷೇಧಿಸುವ ತಾಲಿಬಾನ್ ಆದೇಶಕ್ಕೆ ಕ್ರಿಕೆಟ್ ಸೇರಿದಂತೆ, ಅಂತಾರಾಷ್ಟ್ರೀಯ ಮಟ್ಟ ದಲ್ಲಿ ತೀವ್ರ ಹಿನ್ನಡೆಗೆ ಕಾರಣವಾಗಿದೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರನ್ನು ಕ್ರೀಡೆಗಳಿಂದ ನಿಷೇಧಿಸಿದ್ದನ್ನು ವಿರೋಧಿಸಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಕಳೆದ ವಾರ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ದೊಂದಿಗಿನ ಪಂದ್ಯವನ್ನು ರದ್ದುಗೊಳಿಸಿತು.