Thursday, 12th December 2024

ಹನುಮನ ಆಟ, ಅಶ್ವಿನ್‌ ಬೌಂಡರಿ ಹೊಡೆತ, ಬರಿಗೈ ಆಸೀಸ್‌

ಸಿಡ್ನಿ: ಟೀಂ ಇಂಡಿಯಾ ಆಟಗಾರರು ಮನಸ್ಸಿಗೆ ಬಂದಂತೆ ಚೆಂಡನ್ನು ಬೌಂಡರಿ ಬಾರಿಸುತ್ತ, ಆತಿಥೇಯರಿಗೆ ಕ್ಷಣ ಕ್ಷಣಕ್ಕೂ ದಂಗು ಬಡಿಸುತ್ತಿದ್ದಾರೆ.

ಹೌದು. ವಿಕೆಟ್‌ ಕೀಪರ್‌ ರಿಷಬ್‌ ಪಂತ್‌ ಹಾಗೂ ಚೇತೇಶ್ವರ ಪೂಜಾರ ಅವರ ಸುಧೀರ್ಘ ಇನ್ನಿಂಗ್ಸ್ ಬಳಿಕ, ಹನುಮ ವಿಹಾರಿ ಹಾಗೂ ಆಲ್ರೌಂಡರ್‌ ರವಿಚಂದ್ರನ್‌ ಅಶ್ವಿನ್‌ ಆಸೀಸ್‌ ಬೌಲರುಗಳನ್ನ ಕಂಗೆಡಿಸಿದರು. ಇವರ ಜತೆಯಾಟದಲ್ಲಿ 204 ಎಸೆತಗಳಲ್ಲಿ 47 ರನ್‌ ಬಂದಿವೆ. ಈ ಮೂಲಕ ಪಂದ್ಯ ಡ್ರಾ ದತ್ತ ಮುಖ ಮಾಡಿದೆ.

ಇನ್ನೂ ಹತ್ತು ಓವರ್‌ ಆಟ ಬಾಕಿಯಿದ್ದು, ಟೀಂ ಇಂಡಿಯಾ ಗೆಲ್ಲಲು 88 ರನ್‌ ಗಳ ಅವಶ್ಯಕತೆ ಇದೆ.

ಏಕದಿನ ಶೈಲಿಯಲ್ಲೇ ಬ್ಯಾಟ್ ಬೀಸಿದ ಪಂತ್ 97 ರನ್ ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರು. ಮೂರು ಸಿಕ್ಸರ್ ಮತ್ತು 12 ಬೌಂಡರಿ ಬಾರಿಸಿದ ಪಂತ್ ಶತಕದ ಹೊಸ್ತಿಲಲ್ಲಿ ಎಡವಿದರು.

ಪಂತ್ ಮತ್ತು ಪೂಜಾರ ಶತಕದ ಜೊತೆಯಾಟವಾಡಿದರು. ರಕ್ಷಾಣಾತ್ಮಕವಾಗಿ ಆಡಿದ ಪೂಜಾರ 77 ರನ್ ಗಳಿಸಿ ಔಟಾದರು. ಇದೇ ವೇಳೆ ಪೂಜಾರ ಟೆಸ್ಟ್ ಕ್ರಿಕೆಟ್ ನಲ್ಲಿ ಆರು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.