ನವದೆಹಲಿ: ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಹರ್ಮನ್ ಪ್ರೀತ್ ಕೌರ್ (Harmanpreet Kaur) ಅವರನ್ನು ಭಾರತ ತಂಡದ ನಾಯಕಿಯಾಗಿ ಹೆಸರಿಸಲಾಗಿದೆ. ವಿಶ್ವ ಕಪ್ನಲ್ಲಿ ಅವರ ಬಳಗದ ಕಳಪೆ ಪ್ರದರ್ಶನದ ಬಳಿಕ ನಾಯಕತ್ವದ ಬಗ್ಗೆ ಅನುಮಾನ ಉಂಟಾಗಿತ್ತು. ಲೀಗ್ ಹಂತದಲ್ಲಿ ತಂಡ ಹೊರ ಬಿದ್ದ ಹೊರತಾಗಿಯೂ ಅವರು ಅಕ್ಟೋಬರ್ 17 ರ ಬಿಸಿಸಿಐ ಪ್ರಕಟಿಸಿದ ಮುಂಬರುವ ಸರಣಿಯ ತಂಡದಲ್ಲಿಅವರಿಗೆ ಸ್ಥಾನ ನೀಡಲಾಗಿದೆ. ಇದರಲ್ಲಿ ಪ್ರಿಯಾ ಮಿಶ್ರಾ, ಸಯಾಲಿ ಸತ್ಗರೆ, ಸೈಮಾ ಠಾಕೂರ್ ಮತ್ತು ತೇಜಲ್ ಹಸಬ್ನಿಸ್ ಹೊಸ ಮುಖಗಳಾಗಿವೆ.
ಯುಎಇಯಲ್ಲಿ ನಡೆದ ಮಹಿಳಾ ಟಿ 20 ವಿಶ್ವಕಪ್ನಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಲು ವಿಫಲವಾದ ನಂತರ ಹರ್ಮನ್ಪ್ರೀತ್ ಟೀಕೆಗೆ ಗುರಿಯಾಗಿದ್ದರು. 35 ವರ್ಷದ ಬ್ಯಾಟರ್ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಅರ್ಧಶತಕಗಳನ್ನು ಗಳಿಸಿದ್ದರು. ಆದರೆ, ಭಾರತವು ಗುಂಪು ಹಂತಗಳಲ್ಲಿ ಸೋತಿತ್ತು.
ಇದನ್ನು ಓದಿ: Ranji Trophy: ಕೇರಳ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ
ನ್ಯೂಜಿಲ್ಯಾಂಡ್ ಸರಣಿಗೆ ಭಾರತ ತಂಡ
ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ಡಿ ಹೇಮಲತಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಸಯಾಲಿ ಸತ್ಗರೆ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ತೇಜಲ್ ಹಸಬ್ನಿಸ್, ಸೈಮಾ ಠಾಕೂರ್, ಪ್ರಿಯಾ ಮಿಶ್ರಾ, ರಾಧಾ ಯಾದವ್, ಶ್ರೇಯಂಕಾ ಪಾಟೀಲ್.