Sunday, 15th December 2024

ಭಾರತ-ನ್ಯೂಜಿಲೆಂಡ್ ಎರಡನೇ ಟೆಸ್ಟ್’ಗೆ ’ವರುಣ’ ಕಾಟ

ಮುಂಬೈ: ಹವಾಮಾನ ವೈಪರೀತ್ಯ ಕಾರಣ ಎಡೆ ಬಿಡದೇ ಮಳೆ ಸುರಿಯುತ್ತಿರುವ ಕಾರಣ ಟೆಸ್ಟ್ ಪಂದ್ಯದ ಮೊದಲ ಎರಡೂ ದಿನದಾಟ ಅನುಮಾನ ಎಂದು ಹೇಳಲಾಗಿದೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯ ಶುಕ್ರವಾರ ದಿಂದ ಆರಂಭವಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂ ಈ ಕುತೂಹಲ ಕಾರಿ ಪಂದ್ಯಕ್ಕೆ ವೇದಿಕೆ ಸಜ್ಜು ಮಾಡುತ್ತಿದೆ. ಹೀಗಿರುವಾಗ ನ್ಯೂಜಿಲೆಂಡ್ ವಿರುದ್ಧ ತನ್ನ ಅಜೇಯ ಸರಣಿ ಗೆಲುವಿನ ಓಟ ಮುಂದುವರೆಸುವ ಇರಾದೆ ಯಲ್ಲಿದ್ದ ವಿರಾಟ್ ಕೊಹ್ಲಿ ಪಡೆಗೆ ಮಳೆ ವಿಲನ್ ಆಗಿ ಪರಿಣಮಿಸಿದ್ದಾರೆ.

ಐದು ವರ್ಷಗಳ ಬಳಿಕ ಟೆಸ್ಟ್‌ ಕ್ರಿಕೆಟ್​ಗೆ ಮುಂಬೈನ ವಾಂಖೆಡೆ ಕ್ರೀಡಾಂಗಣ ಆತಿಥ್ಯ ವಹಿಸುತ್ತಿದೆ. ಹವಾಮಾನ ವೈಪರೀತ್ಯ ಕಾರಣ ಎಡೆ ಬಿಡದೇ ಮಳೆ ಸುರಿಯುತ್ತಿರುವ ಕಾರಣ ಟೆಸ್ಟ್ ಪಂದ್ಯದ ಮೊದಲ ಎರಡೂ ದಿನದಾಟ ಅನುಮಾನ ಎಂಬಂತಾಗಿದೆ. ಹೀಗಾಗಿ ಶುಕ್ರವಾರ ಪಂದ್ಯ ಆರಂಭವಾಗುವುದು ಅನುಮಾನ.

ಮಳೆ ಕಾರಣ ಟೀಮ್ ಇಂಡಿಯಾದ ಅಭ್ಯಾಸವನ್ನು ರದ್ದು ಪಡಿಸಲಾಗಿದೆ ಎಂದು ಬಿಸಿಸಿಐ ಬುಧವಾರ ತನ್ನ ಅಧಿಕೃತ ಹೇಳಿಕೆ ಯಲ್ಲಿ ತಿಳಿಸಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ನಡೆಯಲಿರುವ 2ನೇ ಹಾಗೂ ನಿರ್ಣಾ ಯಕ ಅಂತಿಮ ಟೆಸ್ಟ್ ಪಂದ್ಯಕ್ಕೆ ಸಂಪೂರ್ಣವಾಗಿ ಸ್ಪಿನ್ ಸ್ನೇಹಿಯಾದ ಪಿಚ್ ನಿರ್ಮಾಣ ಗೊಳ್ಳುವ ನಿರೀಕ್ಷೆ ಇದೆ. ಇದರಿಂದಾಗಿ ವಾಂಖೆಡೆ ಪಿಚ್ ಬಗ್ಗೆ ಹೆಚ್ಚಿನ ಕುತೂಹಲ ಮೂಡಿದೆ.

ಮಳೆಯಿಂದಾಗಿ ಪಿಚ್ ಮೇಲೆ ತೇವಾಂಶ ಉಳಿದುಕೊಂಡರೆ ಕೂಡ ವೇಗಿಗಳಿಗೆ ಅದು ನೆರವಾಗಲಿದೆ. ಇದರಿಂದ ಭಾರತ ಮತ್ತೊಮ್ಮೆ 3 ಸ್ಪಿನ್ನರ್ ಗಳನ್ನು ಆಡಿಸುವ ಬಗ್ಗೆ ಅನುಮಾನವಿದೆ. ಮೂರನೇ ವೇಗಿಯಾಗಿ ಅಥವಾ ಇಶಾಂತ್ ಶರ್ಮ ಬದಲಿಗೆ ಮೊಹ ಮದ್ ಸಿರಾಜ್ ಆಡಲಿದ್ದಾರೆ ಎಂದೂ ಹೇಳಲಾಗಿದೆ.

ಭಾರತ ಸಂಭಾವ್ಯ ಪ್ಲೇಯಿಂಗ್ XI: ಕೆಎಸ್ ಭರತ್ (ವಿಕೆಟ್ ಕೀಪರ್), ಶುಭ್ಮನ್ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್‌ ಕೊಹ್ಲಿ(ನಾಯಕ), ಅಜಿಂಕ್ಯಾ ರಹಾನೆ, ಶ್ರೇಯಸ್‌ ಅಯ್ಯರ್‌, ರವೀಂದ್ರ ಜಡೇಜಾ, ಆರ್‌ ಅಶ್ವಿನ್‌, ಅಕ್ಷರ್‌ ಪಟೇಲ್‌, ಉಮೇಶ್‌ ಯಾದವ್, ಇಶಾಂತ್ ಶರ್ಮಾ/ ಮೊಹಮ್ಮದ್‌ ಸಿರಾಜ್‌.