Saturday, 23rd November 2024

1964ರ ಟೋಕಿಯೊ ಒಲಿಂಪಿಕ್ಸ್: ಹಾಕಿ ಆಟಗಾರ ಚರಂಜಿತ್ ಸಿಂಗ್ ಇನ್ನಿಲ್ಲ

ನವದೆಹಲಿ: ಭಾರತದ 1964ರ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಹಾಕಿ ತಂಡದ ನಾಯಕ ಚರಂಜಿತ್ ಸಿಂಗ್(9೦) ಅವರು ಹೃದಯ ಸ್ತಂಭನದಿಂದ ಉನಾದಲ್ಲಿನ ತಮ್ಮ ನಿವಾಸ ದಲ್ಲಿ ನಿಧನರಾದರು. ಅವರು ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

ಚರಂಜಿತ್ ಐದು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ಒಳಗಾದರು. ನಂತರ ಅವರು ಕೋಲನ್ನು ಆಧರಿಸಿ ನಡೆಯುತ್ತಿದ್ದರು ಮಗ ವಿ ಪಿ ಸಿಂಗ್ ತಿಳಿಸಿದರು.

1964 ರಲ್ಲಿ ಒಲಿಂಪಿಕ್ ಚಿನ್ನ ವಿಜೇತ ತಂಡದ ನಾಯಕತ್ವದ ಜೊತೆಗೆ, ಅವರು 1960ರ ಕ್ರೀಡಾ ಕೂಟದಲ್ಲಿ ಬೆಳ್ಳಿ ವಿಜೇತ ತಂಡದ ಭಾಗವಾಗಿದ್ದರು. ಅವರು 1962 ರ ಏಷ್ಯನ್ ಗೇಮ್ಸ್ ಬೆಳ್ಳಿ ವಿಜೇತ ತಂಡದ ಭಾಗವಾಗಿದ್ದರು.’ನನ್ನ ಸಹೋದರಿ ದೆಹಲಿಯಿಂದ ಉನಾ ತಲುಪಿದ ನಂತರ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು’ ಎಂದು ವಿ ಪಿ ಸಿಂಗ್ ಹೇಳಿದ್ದಾರೆ.

ಅವರ ಹಿರಿಯ ಮಗ ಕೆನಡಾದಲ್ಲಿ ವೈದ್ಯನಾಗಿದ್ದರೆ, ಕೊನೆಯುಸಿರೆಳೆದಾಗ ಅವನ ಕಿರಿಯ ಮಗ ಅವರ ಜೊತೆಯಲ್ಲಿದ್ದರು. ಅವರ ಒಬ್ಬಳೇ ಮಗಳು ಮದುವೆ ಯಾಗಿ ನವದೆಹಲಿಯಲ್ಲಿ ನೆಲೆಸಿದ್ದಾಳೆ.