Thursday, 12th December 2024

ಮಾಜಿ ಜೂನಿಯರ್ ಹಾಕಿ ಆಟಗಾರ ರಾಜೀವ್ ಕುಮಾರ್ ಮಿಶ್ರಾ ಇನ್ನಿಲ್ಲ

ಕ್ನೋ : ಭಾರತದ ಮಾಜಿ ಜೂನಿಯರ್ ಹಾಕಿ ಆಟಗಾರ ರಾಜೀವ್ ಕುಮಾರ್ ಮಿಶ್ರಾ(46) ವಾರಣಾಸಿಯ ಸರ್ಸೌಲಿ ಪ್ರದೇಶದಲ್ಲಿನ ಅವರ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಅವರ ಮನೆಯಿಂದ ದುರ್ವಾಸನೆ ಬರುತ್ತಿದ್ದ ಕಾರಣ ಅವರ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ ನಂತ್ರ ವಿಷಯ ಬೆಳಕಿಗೆ ಬಂದಿದೆ.

ಮಿಲ್ಟನ್ ಕೇನ್ಸ್‌ನಲ್ಲಿ 1997 ರಲ್ಲಿ ನಡೆದ ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾರತವು ಬೆಳ್ಳಿ ಪದಕವನ್ನು ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಸಾಧಾರಣ ಪ್ರತಿಭಾವಂತ ಆಟಗಾರ ರಾಜೀವ್ ಮಿಶ್ರಾ.

ಉತ್ತರ ರೈಲ್ವೆಯ ಲಕ್ನೋ ವಿಭಾಗದಲ್ಲಿ ಮುಖ್ಯ ಟಿಕೆಟ್ ಇನ್ಸ್‌ಪೆಕ್ಟರ್ (ಸಿಐಟಿ) ಆಗಿ ನೇಮಕ ಗೊಂಡ ಅವರು ವಾರಣಾಸಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಲಕ್ನೋದಲ್ಲಿ ವಾಸವಾಗಿರುವ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಬಿಹಾರದ ಹಾಜಿಪುರದ ಲಿಲುದಾಬೈಟ್ ಗ್ರಾಮದವರಾದ ರಾಜೀವ್ ತಮ್ಮ ಗುಂಗುರು ಉದ್ದನೆಯ ಕೂದಲಿಗೆ ಹೆಸರುವಾಸಿಯಾಗಿದ್ದರು. ಲಂಡನ್‌ ನಲ್ಲಿ ನಡೆದ 1997 ಜೂನಿಯರ್ ವಿಶ್ವಕಪ್‌ನಲ್ಲಿ ಅವರ ಅದ್ಭುತ ಪ್ರದರ್ಶನದ ನಂತರ ಅವರು ಅಪಾರ ಅಭಿಮಾನಿಗಳನ್ನು ಗಳಿಸಿದರು.