Sunday, 15th December 2024

ಎರಡನೇ ಏಕದಿನ ಗೆದ್ದ ದ.ಆಫ್ರಿಕಾ: 8 ವಿಕೆಟ್​ ಜಯ

ಗ್ಕೆಬರ್ಹಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸರಣಿ ಸಮಬಲ ಸಾಧಿಸಿದೆ.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ ಮೊದಲಿಗೆ ಬೌಲಿಂಗ್ ಆಯ್ದುಕೊಂಡ ಭಾರತಕ್ಕೆ ಬ್ಯಾಟಿಂಗ್​ಗೆ ಆಹ್ವಾನಿಸಿದರು. ಈ ಪಂದ್ಯ ದಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದ ಭಾರತ 46.2 ಓವರ್‌ಗಳಲ್ಲಿ 211 ರನ್‌ಗಳಿಗೆ ಸರ್ವಪತನ ಕಂಡಿತ್ತು. ಭಾರತದ ಪರ ಸಾಯಿ ಸುದರ್ಶನ್​ (62) ಮತ್ತು ಕೆ.ಎಲ್​ ರಾಹುಲ್ ​(56) ಅರ್ಧಶತಕ ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟರ್​ಗಳು ಹರಿಣಗಳ ಬೌಲಿಂಗ್​ ದಾಳಿಗೆ ಕ್ರೀಸ್​ನಲ್ಲಿ ನೆಲೆಯೂ ರಲು ಸಾಧ್ಯವಾಗಲಿಲ್ಲ.

ರುತುರಾಜ್​ ಗಾಯಕ್ವಾಡ್​ ಮತ್ತು ತಿಲಕ್​ ವರ್ಮಾ ಮತ್ತೊಮ್ಮ ವೈಫಲ್ಯ ಅನುಭವಿಸಿದರು. ವರ್ಮಾ ಕೇವಲ (10) ರನ್​ಗೆ ವಿಕೆಟ್​ ಒಪ್ಪಿಸಿದರು. ಸಾಧಾರಣ ಗುರಿ ಬೆನ್ನಟ್ಟಿದ ಆಫ್ರಿಕಾ ಟೋನಿ ಡಿಜಾರ್ಜ್ ಅವರ ಶತಕದ ನೆರವಿನಿಂದ ಎರಡು ವಿಕೆಟ್ ಕಳೆದುಕೊಂಡು 212 ರನ್‌ಗಳ ಗುರಿ ತಲಪುವ ಮೂಲಕ ಸರಣಿ ಸಮಬಲಗೊಳಿಸಿತು.

ಆಫ್ರಿಕಾ ಪರ ಡಿಜಾರ್ಜ್​(119 ಅಜೇಯ), ಹೆಂಡ್ರಿಕ್ಸ್​ (52), ವಾಂಡರ್​ ಡಸ್ಸೆನ (36) ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದರು.

ಮೊದಲ ಏಕದಿನ ಪಂದ್ಯದಲ್ಲಿ ಮಾರಕ ಬೌಲಿಂಗ್​ ದಾಳಿ ನಡೆಸಿ ಹರಿಣಗಳನ್ನು ಬಗ್ಗು ಬಡೆದಿದ್ದ ಭಾರತ, ಎರಡನೇ ಪಂದ್ಯದಲ್ಲಿ ಬೌಲಿಂಗ್​ ಸ್ನೇಹಿ ಪಿಚ್​ ಆಗಿದ್ದರೂ ಹೆಚ್ಚಿನ ಸಾಹಸ ಪ್ರದರ್ಶಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ.