Friday, 20th September 2024

ಐ-ಲೀಗ್ ಆರು ವಾರ ಮುಂದೂಡಿಕೆ

ನವದೆಹಲಿ : ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಸೋಮವಾರ ಐ-ಲೀಗ್ ಅನ್ನು ಕನಿಷ್ಠ ಆರು ವಾರಗಳ ಕಾಲ ಅಮಾನತುಗೊಳಿಸಿದೆ.

ಕೋವಿಡ್-19 ಸ್ಫೋಟವು ಬಯೋ ಬಬ್ಬಲ್‌ ಯೊಳಗೆ ಭಾಗ ವಹಿಸುವ ತಂಡಗಳಿಗೆ ಅಪ್ಪಳಿಸಿದೆ. ಎಐಎಫ್‌ಎಫ್(AIFF) ಅನ್ನು ಆರು ವಾರಗಳ ಕಾಲ ಲೀಗ್ ಅನ್ನು ಸ್ಥಗಿತಗೊಳಿಸಲು ಪ್ರೇರೇಪಿಸಿದೆ.

ಐ-ಲೀಗ್ ಕನಿಷ್ಠ ಆರು ವಾರಗಳ ಕಾಲ ಮುಂದೂಡಲ್ಪಟ್ಟಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐ-ಲೀಗ್ ಅಧಿಕಾರಿಗಳು ಮುಂದಿನ ತಿಂಗಳ ಮೊದಲ ವಾರದಲ್ಲಿ ಪರಿಸ್ಥಿತಿಯನ್ನ ಅವಲೋಕಿಸುತ್ತಾರೆ ಮತ್ತು ಭವಿಷ್ಯದ ಕ್ರಮವನ್ನ ನಿರ್ಧರಿಸುತ್ತಾರೆ. ಕೋವಿಡ್-19 ತನ್ನ ಬಯೋ ಬಬ್ಬ‌ಲ್‌ನ್ನ ಉಲ್ಲಂಘಿಸಿದ್ದರಿಂದ ಐ-ಲೀಗ್ʼನ್ನ ಬುಧವಾರ ಒಂದು ವಾರದವರೆಗೆ ಅಮಾನತುಗೊಳಿಸಲಾಗಿದೆ.

ಕಳೆದ ವಾರ ಎಂಟು ಆಟಗಾರರು ಮತ್ತು ಮೂವರು ಅಧಿಕಾರಿಗಳು ವೈರಸ್ʼಗೆ ಪಾಸಿಟಿವ್ ಪರೀಕ್ಷಿಸಿದ್ದರು.