Friday, 22nd November 2024

ಐಸಿಸಿ ಟಿ20 ಬ್ಯಾಟಿಂಗ್‌ ರ‍್ಯಾಂಕಿಂಗ್: ಸೂರ್ಯಕುಮಾರ್‌, ಬಾಬರ್‌ ಸ್ಥಾನ ಫಿಕ್ಸ್

ದುಬಾೖ: ನೂತನ ಐಸಿಸಿ ಟಿ20 ಬ್ಯಾಟಿಂಗ್‌ನಲ್ಲಿ ಪಾಕಿಸ್ಥಾನದ ಬಾಬರ್‌ ಆಜಂ ಮತ್ತು ಭಾರತದ ಸೂರ್ಯಕುಮಾರ್‌ ಯಾದವ್‌ ಮೊದಲೆರಡು ಸ್ಥಾನಗಳನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾ ಗಿದ್ದಾರೆ.

ಪಾಕ್‌ ನಾಯಕ ಬಾಬರ್‌ ಆಜಂ 818 ಅಂಕ ಹೊಂದಿದ್ದಾರೆ. ಏಪ್ರಿಲ್‌ನಲ್ಲಿ ಕೊನೆಯ ಟಿ20 ಪಂದ್ಯ ಆಡಿದ್ದರು.

ಇತ್ತೀಚೆಗೆ ವೆಸ್ಟ್‌ ಇಂಡೀಸ್‌ ಎದುರಿನ 5 ಪಂದ್ಯಗಳ ಸರಣಿಯಲ್ಲಿ 11 ಅಂಕ ಕಳೆದುಕೊಂಡ ಹೊರತಾಗಿಯೂ ಸೂರ್ಯ ಕುಮಾರ್‌ ಯಾದವ್‌ ದ್ವಿತೀಯ ಸ್ಥಾನ ಉಳಿಸಿಕೊಂಡರು. ಅವರು 805 ಅಂಕ ಹೊಂದಿದ್ದಾರೆ. ಅಂತಿಮ ಟಿ20 ಪಂದ್ಯದಲ್ಲಿ ವಿಶ್ರಾಂತಿ ನೀಡಿದ್ದರಿಂದ ಸೂರ್ಯಕುಮಾರ್‌ ಮುನ್ನಡೆಗೆ ಅಡ್ಡಿಯಾಯಿತು.

ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ ಭಾರತದ ಇಬ್ಬರು ಆಟಗಾರರೆಂದರೆ ಶ್ರೇಯಸ್‌ ಅಯ್ಯರ್‌ ಮತ್ತು ರಿಷಭ್‌ ಪಂತ್‌. ಅಂತಿಮ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ ಶ್ರೇಯಸ್‌ ಅಯ್ಯರ್‌ 6 ಸ್ಥಾನಗಳ ಪ್ರಗತಿ ಸಾಧಿಸಿ 19ನೇ ಸ್ಥಾನ ತಲುಪಿದ್ದಾರೆ. ಹಾಗೆಯೇ ಸರಣಿಯಲ್ಲಿ 115 ರನ್‌ ಹೊಡೆದ ಪಂತ್‌ 7 ಸ್ಥಾನ ಮೇಲೇರಿದ್ದಾರೆ. ಅವರಿಗೀಗ 59ನೇ ಸ್ಥಾನ.

ಬೌಲಿಂಗ್‌ ವಿಭಾಗದಲ್ಲಿ ಭುವನೇಶ್ವರ್‌ ಒಂದು ಸ್ಥಾನ ಕೆಳಕ್ಕೆ ಜಾರಿದ್ದು, 9ಕ್ಕೆ ಬಂದು ನಿಂತಿದ್ದಾರೆ. 8 ವಿಕೆಟ್‌ ಉಡಾಯಿಸಿದ ರವಿ ಬಿಷ್ಣೋಯಿ ಅವರದು 50 ಸ್ಥಾನಗಳ ಭರ್ಜರಿ ನೆಗೆತ.

ಟಾಪ್‌-10 ಬ್ಯಾಟರ್
1. ಬಾಬರ್‌ ಆಜಂ (ಪಾ) 818
2. ಸೂರ್ಯಕುಮಮಾರ್‌ (ಭಾ) 805
3. ಮೊಹಮ್ಮದ್‌ ರಿಜ್ವಾನ್‌ (ಪಾ) 794
4. ಐಡನ್‌ ಮಾರ್ಕ್‌ರಮ್‌ (ದ.ಆ.) 792
5. ಡೇವಿಡ್‌ ಮಲಾನ್‌ (ಇಂ) 731
6. ಆರನ್‌ ಫಿಂಚ್‌ (ಆ) 716
7. ಪಥುಮ್‌ ನಿಸ್ಸಂಕ (ಶ್ರೀ) 661
8. ಡೇವನ್‌ ಕಾನ್ವೆ (ನ್ಯೂ) 655
9. ನಿಕೋಲಸ್‌ ಪೂರಣ್‌ (ವೆ) 644
10. ಮಾರ್ಟಿನ್‌ ಗಪ್ಟಿಲ್‌ (ನ್ಯೂ) 638