ದುಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಐಸಿಸಿ ಟಿ20 ರ್ಯಾಂಕಿಂಗಿನ ಬ್ಯಾಟಿಂಗ್ ವಿಭಾಗದಲ್ಲಿ ಒಂದು ಸ್ಥಾನ ಏರಿಕೆ ಕಂಡಿದ್ದಾರೆ. ಕೆಎಲ್ ರಾಹುಲ್ 3ನೇ ಸ್ಥಾನಕ್ಕೇರಿದರೆ, ವಿರಾಟ್ ಕೊಹ್ಲಿ 8ನೇ ಸ್ಥಾನಕ್ಕೇರಿದ್ದಾರೆ.
816 ಪಾಯಿಂಟ್ಸ್ ಕಲೆ ಹಾಕಿರುವ ರಾಹುಲ್, ಎರಡನೇ ಸ್ಥಾನದಲ್ಲಿರುವ ಪಾಕ್ನ ಬಾಬರ್ ಅಜಮ್ಗಿಂತ (871) 55 ಪಾಯಿಂಟ್ಸ್ ಹಿಂದಿದ್ದಾರೆ. ಇಂಗ್ಲೆಂಡ್ ಬ್ಯಾಟ್ಸ್ಮನ್ ಡೇವಿಡ್ ಮನಲ್ (915) ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 697 ಅಂಕ ಸಂಪಾದಿಸಿ ದ್ದಾರೆ. ರಾಹುಲ್ ಮೊದಲ ಟಿ20 ಪಂದ್ಯದಲ್ಲಿ 51 ರನ್ ಸಿಡಿಸಿದರೆ, 2ನೇ ಪಂದ್ಯದಲ್ಲಿ 30 ರನ್ ಬಾರಿಸಿದ್ದರು.
ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಡಂ ಜಂಪಾ ಎರಡು ಸ್ಥಾನ ಏರಿಕೆ ಕಂಡು 5ನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ನ ಕ್ರಿಸ್ ಜೋರ್ಡಾನ್ ಅಗ್ರ 10ರೊಳಿಗೆ ಸ್ಥಾನ ಪಡೆದರೆ, ರಶೀದ್ ಖಾನ್ ಹಾಗೂ ಮುಜೀಬ್ ಉರ್ ರೆಹಮಾನ್ ಕ್ರಮವಾಗಿ ಮೊದಲ ಹಾಗೂ 2ನೇ ಸ್ಥಾನ ದಲ್ಲಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ಅಘಾನಿಸ್ತಾನದ ಮೊಹಮದ್ ನಬಿ 294 ರೇಟಿಂಗ್ ಪಾಯಿಂಟ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ.