ದುಬೈ: ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟಿ20 ಪಂದ್ಯ ಆರಂಭಕ್ಕೂ ಮುನ್ನವೇ ಭಾರತೀಯ ಆಟಗಾರರಾದ ಅರ್ಷದೀಪ್ ಸಿಂಗ್(642) ಮತ್ತು ಹಾರ್ದಿಕ್ ಪಾಂಡ್ಯ(216) ನೂತನ ಶ್ರೇಯಾಂಕದಲ್ಲಿ(ICC T20I Rankings) ಭಾರೀ ಪ್ರಗತಿ ಸಾಧಿಸಿದ್ದಾರೆ. ಅರ್ಷದೀಪ್(Arshdeep Singh) ಬೌಲಿಂಗ್ ಶ್ರೇಯಾಂಕದಲ್ಲಿ 8 ಸ್ಥಾನಗಳ ಏರಿಕೆಯೊಂದಿಗೆ 8ನೇ ಸ್ಥಾನ ಪಡೆದರೆ, ಆಲ್ರೌಂಡರ್ಗಳ ಯಾದಿಯಲ್ಲಿ ಹಾರ್ದಿಕ್ ಪಾಂಡ್ಯ(Hardik Pandya) 4 ಸ್ಥಾನ ಮೇಲೇರಿ 3ನೇ ರ್ಯಾಂಕಿಂಗ್ ಪಡೆದಿದ್ದಾರೆ.
ಗ್ವಾಲಿಯರ್ನಲ್ಲಿ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ ಅರ್ಷದೀಪ್ ಮೊನಚಾದ ಬೌಲಿಂಗ್ ದಾಳಿ ನಡೆಸಿ 3 ವಿಕೆಟ್ ಕೆಡವಿದ್ದರು. ಜತೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಅವರ ಈ ಪ್ರದರ್ಶನ ಶ್ರೇಯಾಂಕ ಪ್ರಗತಿಗೆ ಕಾರಣ. ಪಾಂಡ್ಯ ಕೂಡ ಬ್ಯಾಟಿಂಗ್ ಜತೆಗೆ ಬೌಲಿಂಗ್ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿದ್ದರು. ಅಜೇಯ 39 ರನ್ ಸಹಿತ ಒಂದು ವಿಕೆಟ್ ಕೆಡೆವಿದ್ದರು. ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಸಿಗದ ಕಾರಣ ಯುವ ಸ್ಪಿನ್ನರ್ ರವಿ ಬಿಷ್ಟೋಯಿ(629) ಒಂದು ಸ್ಥಾನ ಕುಸಿತದೊಂದಿಗೆ 12ನೇ ಸ್ಥಾನ ಪಡೆದರು.
ಇಂದು(ಬುಧವಾರ) ನಡೆಯುವ ದ್ವಿತೀಯ ಟಿ20 ಮತ್ತು ಅಂತಿಮ ಪಂದ್ಯದಲ್ಲಿಯೂ ಪಾಂಡ್ಯ ಮತ್ತು ಅರ್ಷದೀಪ್ ನಿರೀಕ್ಷಿತ ಪ್ರದರ್ಶನ ತೋರಿದರೆ ಶ್ರೇಯಾಂಕದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬಹುದು. ಪಾಂಡ್ಯಗೆ ನಂ.1 ಸ್ಥಾನಕ್ಕೇರುವ ಅವಕಾಶವಿದೆ. ಬ್ಯಾಟಿಂಗ್ ಶ್ರೇಯಾಂಕದಲ್ಲಿ ಯಾವುದೇ ದೊಡ್ಡ ಬದಲಾವಣೆ ಸಂಭವಿಸಿಲ್ಲ. ನಾಯಕ ಸೂರ್ಯಕುಮಾರ್ ಯಾದವ್ ಈ ಹಿಂದಿನಂತೆ 2ನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್(881) ಅಗ್ರಸ್ಥಾನದಲ್ಲೇ ಕಾಣಿಸಿಕೊಂಡಿದ್ದಾರೆ.
ಟಾಪ್-5 ಬೌಲರ್ಗಳು
ಆದೀಲ್ ರಶೀದ್-721
ಅಕಿಲ್ ಹೊಸೈನ್-695
ರಶೀದ್ ಖಾನ್-668
ಗುಡಾಕೇಶ್ ಮೋತಿ-664
ವನಿಂದು ಹಸರಂಗ-663
ಇದನ್ನೂ ಓದಿ IND vs NZ: ಭಾರತ ವಿರುದ್ಧದ ಟೆಸ್ಟ್ಗೆ ಬಲಿಷ್ಠ ತಂಡ ಪ್ರಕಟಿಸಿದ ನ್ಯೂಜಿಲ್ಯಾಂಡ್
ಟಾಪ್-5 ಆಲ್ರೌಂಡರ್
ಲಿಯಾಮ್ ಲಿವಿಂಗ್ಸ್ಟೋನ್-253
ದೀಪೇಂದ್ರ ಸಿಂಗ್ ಐರಿ-235
ಹಾರ್ದಿಕ್ ಪಾಂಡ್ಯ-216
ಮಾರ್ಕಸ್ ಸ್ಟೋಯಿನಿಸ್-211
ಸಿಕಂದರ್ ರಾಜಾ-208
ಟಾಪ್-5 ಬ್ಯಾಟರ್ಗಳು
ಟ್ರಾವಿಸ್ ಹೆಡ್-881
ಸೂರ್ಯಕುಮಾರ್ ಯಾದವ್-807
ಫಿಲ್ ಸಾಲ್ಟ್-800
ಬಾಬರ್ ಅಜಂ-755