Thursday, 12th December 2024

ಇಂದಿನಿಂದ ಮಹಿಳಾ ಟಿ20 ವಿಶ್ವಕಪ್‌ ಕಲರವ; ಬಾಂಗ್ಲಾ-ಸ್ಲಾಟ್ಲೆಂಡ್‌ ಮೊದಲ ಪಂದ್ಯ

Women’s T20 World Cup

ಶಾರ್ಜಾ: 9ನೇ ಆವೃತ್ತಿಯ ಮಹಿಳಾ ವಿಶ್ವಕಪ್‌ ಟೂರ್ನಿ(Womens T20 World Cup) ಆರಂಭಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಇಂದು(ಗುರುವಾರ) ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ-ಸ್ಲಾಟ್ಲೆಂಡ್‌ ಮುಖಾಮುಖೀ ಆಗಲಿವೆ. ದಿನದ ಇನ್ನೊಂದು ಪಂದ್ಯ ಪಾಕಿಸ್ತಾನ-ಶ್ರೀಲಂಕಾ ನಡುವೆ ನಡೆಯಲಿದೆ. ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭಗೊಳ್ಳಲಿದೆ.

​ಆಸ್ಟ್ರೆಲಿಯಾ, ಭಾರತ, ನ್ಯೂಜಿಲ್ಯಾಂಡ್‌​, ಶ್ರೀಲಂಕಾ ಮತ್ತು ಪಾಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​, ವೆಸ್ಟ್​ ಇಂಡೀಸ್ ಮತ್ತು ಸ್ಕಾಟ್ಲೆಂಡ್‌​ ಸ್ಪರ್ಧೆಯಲ್ಲಿರುವ ತಂಡಗಳು. ಭಾರತ ತನ್ನ ಮೊದಲ ಪಂದ್ಯವನ್ನು ನಾಳೆ (ಶುಕ್ರವಾರ) ನ್ಯೂಜಿಲ್ಯಾಂಡ್‌ ವಿರುದ್ಧ ದುಬೈನಲ್ಲಿ ಆಡಲಿದೆ. ಅಭ್ಯಾಸ ಪಂದ್ಯಗಳನ್ನು ಗೆದ್ದಿರುವ ಹರ್ಮನ್‌ ಪಡೆ ಲೀಗ್‌ನಲ್ಲಿಯೂ ಗೆಲುವಿನ ಶುಭಾರಂಭದ ನಿರೀಕ್ಷೆಯಲ್ಲಿದೆ.

ಈ ಬಾರಿಯ ಮಹಿಳಾ ಟಿ20 ವಿಶ್ವಕಪ್‌ ವಿಜೇತರು 2.34 ಮಿಲಿಯನ್‌ ಡಾಲರ್‌ ನಿಧಿ (ಸುಮಾರು 19.61 ಕೋಟಿ ರೂ.) ಯನ್ನು ಪಡೆಯಲಿದ್ದಾರೆ. ಇದು ಕಳೆದ ವಿಶ್ವಕಪ್‌ಗಿಂತ ಶೇಕಡಾ 134ರಷ್ಟು ಹೆಚ್ಚು. 2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್‌ನ ವಿಜೇತರಾದ ಆಸ್ಟ್ರೇಲಿಯಾದ ಮಹಿಳೆಯರಿಗೆ ಒಂದು ಮಿಲಿಯನ್‌ ಡಾಲರ್‌ ನಿಧಿ (8.38 ಕೋಟಿ ರೂ.)ಯನ್ನು ನೀಡಲಾಗಿತ್ತು. ಒಟ್ಟಾರೆ ಬಹುಮಾನ ನಿಧಿಯಲ್ಲಿ ಶೇಕಡಾ 225ರಷ್ಟು ಏರಿಕೆ ಮಾಡಲಾಗಿದೆ. ಸಮಗ್ರವಾಗಿ 7. 95 ಮಿಲಿಯನ್‌ ಡಾಲರ್‌ ಬಹುಮಾನ ನಿಧಿಯನ್ನು ಈ ವಿಶ್ವಕಪ್‌ ಒಳಗೊಂಡಿದೆ. ಈ ಹಿಂದಿನ ಮಹಿಳಾ ವಿಶ್ವಕಪ್‌ 2.45 ಮಿಲಿಯನ್‌ ಡಾಲರ್‌ ನಿಧಿಯನ್ನು ಒಳಗೊಂಡಿತ್ತು.

ಇದನ್ನೂ ಓದಿ Womens T20 World Cup: ಟೂರ್ನಿಯ ಮಾದರಿ, ವೇಳಾಪಟ್ಟಿಯ ವಿವರ ಹೀಗಿದೆ

ಬಾಂಗ್ಲಾದೇಶ

ನಿಗರ್ ಸುಲ್ತಾನಾ (ನಾಯಕಿ), ನಹಿದಾ ಅಕ್ಟರ್, ಮುರ್ಷಿದಾ ಖಾತುನ್, ಶೋರ್ನಾ ಅಕ್ಟರ್, ರಿತು ಮೋನಿ, ಸೋಭಾನಾ ಮೊಸ್ತರಿ, ರಬೇಯಾ ಖಾನ್, ಸುಲ್ತಾನಾ ಖಾತುನ್, ಫಾಹಿಮಾ ಖಾತುನ್, ಮಾರುಫಾ ಅಕ್ಟರ್, ಜಹಾನಾರಾ ಆಲಂ, ದಿಲಾರಾ ಅಕ್ಟರ್, ತಾಜ್ ನೆಹರ್, ಶತಿ ರಾಣಿ, ದಿಶಾ ಬಿಸ್ವಾಸ್.

ಸ್ಕಾಟ್ಲೆಂಡ್‌

ಕ್ಯಾಥರಿನ್ ಬ್ರೈಸ್ (ನಾಯಕಿ), ಸಾರಾ ಬ್ರೈಸ್, ಲೋರ್ನಾ ಜ್ಯಾಕ್-ಬ್ರೌನ್, ಅಬ್ಬಿ ಐಟ್ಕೆನ್-ಡ್ರಮಂಡ್, ಅಬ್ಟಾಹಾ ಮಕ್ಸೂದ್, ಸಾಸ್ಕಿಯಾ ಹಾರ್ಲೆ, ಕ್ಲೋಯ್ ಅಬೆಲ್, ಪ್ರಿಯಾನಾಜ್ ಚಟರ್ಜಿ, ಮೇಗನ್ ಮೆಕಾಲ್, ಡಾರ್ಸಿ ಕಾರ್ಟರ್, ಐಲ್ಸಾ ಲಿಸ್ಟರ್, ಹನ್ನಾ ರೈನೆರಿ, ಕ್ಯಾಚೆಲ್ ಸ್ಲಾ ಫ್ರೇಸರ್, ಒಲಿವಿಯಾ ಬೆಲ್.

ಪಾಕಿಸ್ತಾನ

ಫಾತಿಮಾ ಸನಾ (ನಾಯಕಿ), ಅಲಿಯಾ ರಿಯಾಜ್, ಡಯಾನಾ ಬೇಗ್, ಗುಲ್ ಫಿರೋಜಾ, ಇರಾಮ್ ಜಾವೇದ್, ಮುನೀಬಾ ಅಲಿ, ನಶ್ರಾ ಸುಂಧು, ನಿದಾ ದಾರ್, ಒಮೈಮಾ ಸೊಹೈಲ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್ (ಫಿಟ್‌ನೆಸ್‌ಗೆ ಅವಲಂಬಿತ), ಸಿದ್ರಾ ಅಮೀನ್, ಸೈಯದಾ ಅರೂಬ್ ಶಾ ತಸ್ಮಿಯಾ ರುಬಾಬ್, ತುಬಾ ಹಸನ್‌.

ಶ್ರೀಲಂಕಾ

ಚಾಮರಿ ಅಟಪಟ್ಟು(ನಾಯಕಿ), ಅನುಷ್ಕಾ ಸಂಜೀವನಿ, ಹರ್ಷಿತಾ ಮಾಧವಿ, ನೀಲಾಕ್ಷಿಕಾ ಡಿ ಸಿಲ್ವಾ, ಇನೋಕಾ ರಣವೀರ, ಹಾಸಿನಿ ಪೆರೇರಾ, ಕವಿಶಾ ದಿಲ್ಹಾರಿ, ಸಚಿನಿ ನಿಸಂಸಾಲಾ, ವಿಶ್ಮಿ ಗುಣರತ್ನೆ, ಉದೇಶಿಕಾ ಪ್ರಬೋಧನಿ, ಅಚಿನಿ ಕುಲಸೂರಿಯಾ, ಸುಗಂಧಿಕಾ, ಪ್ರಿಯಾನಿ ಶಶಿಯಾ ಕುಮಾರಿ, ಜಿ. ಕಾಂಚನಾ.