Saturday, 14th December 2024

ಟೆಸ್ಟ್​ ಸರಣಿಯಲ್ಲಿ ಆಸ್ಟ್ರೇಲಿಯಾ ಕ್ಲೀನ್​ಸ್ವೀಪ್: 2ನೇ ಸ್ಥಾನಕ್ಕೆ ಕುಸಿದ ಭಾರತ

ದುಬೈ: ಕೇಪ್​ಟೌನ್​ ಟೆಸ್ಟ್​ ಪಂದ್ಯ ಗೆಲ್ಲುವ ಮೂಲಕ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ 3ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಭಾರತ ತಂಡ, ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಕ್ಲೀನ್​ಸ್ವೀಪ್​ ಸಾಧಿಸುವುದರೊಂದಿಗೆ 2ನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಆಸ್ಟ್ರೇಲಿಯಾ ಈಗ ಶೇ.56.25 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದರೆ, ಭಾರತ ತಂಡ ಶೇ. 54.16 ಅಂಕಗಳೊಂದಿಗೆ ದ್ವೀತಿಯ ಸ್ಥಾನಕ್ಕೆ ಕುಸಿದಿದೆ. ಆದರೆ ಡಬ್ಲ್ಯುಟಿಸಿಯಲ್ಲಿ ಭಾರತ ಇದುವರೆಗೆ 4 ಟೆಸ್ಟ್​ ಮಾತ್ರ ಆಡಿದ್ದರೆ, ಆಸೀಸ್​ ಈಗಾಗಲೆ 8 ಟೆಸ್ಟ್​ ಆಡಿದೆ.