ಪ್ಯಾರಿಸ್ ಒಲಿಂಪಿಕ್ಸ್: ಗುರುವಾರ ಭಾರತದ ಹಾಕಿ ತಂಡ ಗುಂಪು ಹಂತದ ಪಂದ್ಯದಲ್ಲಿ ಭಾರತ 1-2 ರಿಂದ ಬೆಲ್ಜಿಯಂ ವಿರುದ್ಧ ಸೋಲು ಅನುಭವಿಸಿದರೆ, ಮಹಿಳೆಯರ ಸಿಂಗಲ್ಸ್ 50 ಕೆ.ಜಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ನಿಖತ್ ಜರೀನ್ ನಿರಾಸೆ ಅನುಭವಿಸಿದ್ದಾರೆ.
ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಬೆಲ್ಜಿಯಂ ತಂಡದ ವಿರುದ್ಧ ಆರನೇ ಶ್ರೇಯಾಂಕಿತ ಭಾರತ ಅಮೋಘ ಪ್ರದರ್ಶನ ನೀಡಿದವು. ಈಗಾಗಲೇ ಆಡಿದ ಮೂರು ಪಂದ್ಯಗಳಲ್ಲಿ ಅಜೇಯ ಓಟ ಮುಂದುವರೆಸಿದ್ದ ಭಾರತಕ್ಕೆ ಬೆಲ್ಜಿಯಂ ಪೆಟ್ಟು ನೀಡಿತು.
ಭಾರತದ ಪರ ಅಭಿಷೇಕ್ ಎರಡನೇ ಅವಧಿಯಲ್ಲಿ ಸೊಗಸಾದ ಪ್ರದರ್ಶನ ನೀಡಿದರು. ಇವರು ಅಬ್ಬರದ ಆಟದ ಪ್ರದರ್ಶನ ನೀಡಿ ಎದುರಾಳಿ ಗೋಲಿ ಯನ್ನು ವಂಚಿಸುವಲ್ಲಿ ವಿಫಲರಾದರು. ಈ ಅವಧಿಯ 3ನೇ ನಿಮಿಷದಲ್ಲಿ ಅಭಿಷೇಕ್ ಸೊಗಸಾದ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ದೊರಕಿಸಿ ಕೊಟ್ಟರು. ಎರಡನೇ ಅವಧಿಯನ್ನು ಭಾರತ ಮುನ್ನಡೆಯೊಂದಿಗೆ ಕೊನೆ ಗೊಳಿಸಿತು.
ಮೂರನೇ ಅವಧಿಯಲ್ಲಿ ಭಾರತ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿತು. ಈ ವೇಳೆ ಬೆಲ್ಜಿಯಂ ತಂಡ ಟೀಮ್ ಇಂಡಿಯಾದ ರಕ್ಷಣಾ ವಿಭಾಗಕ್ಕೆ ಮಣ್ಣು ಮುಕ್ಕಿಸಿ, 33ನೇ ನಿಮಿಷದಲ್ಲಿ ಮೊದಲ ಗೋಲಿನ ನಗೆ ಬೀರಿತು.
ಕೊನೆಯ ಅವಧಿಯಲ್ಲಿ ಭಾರತದ ನ್ಯೂನತೆ ಅರಿತು ಆಡಿದ ವಿಶ್ವದ ನಂಬರ್ 1 ಬೆಲ್ಜಿಯಂ ತಂಡ 44ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸಿತು. ಇದರಿಂದ ಭಾರತದ ಗೆಲುವಿನ ಆಸೆಗೆ ಪೆಟ್ಟು ಬಿದ್ದಿತು.
ಭಾರತದ ಮಹಿಳಾ ಬಾಕ್ಸರ್ ನಿಖತ್ ಜರೀನ್ ಅವರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ. ಪ್ರೀ ಕ್ವಾರ್ಟರ್ ಫೈನಲ್ ಪಂದ್ಯ ದಲ್ಲಿ ಚೀನಾದ ವು ಯು ಅಬ್ಬರದ ಆಟವಾಡಿ, ಅಬ್ಬರಿಸಿದರು. ಸತತ ಅಂಕಗಳ ಬೇಟೆಯನ್ನು ನಡೆಸಿ ಭಾರತೀಯ ಬಾಕ್ಸರ್ ವಿರುದ್ಧ ಮೇಲುಗೈ ಸಾಧಿಸಿದರು. 50 ಕೆಜಿ ವಿಭಾಗದಲ್ಲಿ ಪದಕದ ಆಸೆಯನ್ನು ಕೈ ಬಿಟ್ಟರು. ಮೂರು ಗೇಮ್‌ಗಳನ್ನು ಏಕಪಕ್ಷೀಯವಾಗಿ ಗೆದ್ದು ಬೀಗಿದರು.