Thursday, 14th November 2024

IND vs AUS: ಇಂಡೋರ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ಭಾರತಕ್ಕೆ ಇಯಾನ್‌ ಹೀಲಿ ಎಚ್ಚರಿಕೆ!

Ian Healy urges Gambhir, Kohli, everyone else to stop hiding and come out

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (IND vs AUS) ಟೆಸ್ಟ್‌ ಸರಣಿಯ ನಿಮಿತ್ತ ಪರ್ತ್‌ನಲ್ಲಿ ಇಂಡೋರ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ಭಾರತ ತಂಡದ ಆಸೀಸ್‌ ಮಾಜಿ ಕ್ರಿಕೆಟಿಗ ಇಯಾನ್‌ ಹೀಲಿ ಅವರು ಎಚ್ಚಿರಿಕೆ ನೀಡಿದ್ದಾರೆ ಹಾಗೂ ಯಾರಿಗೂ ಕಾಣದೆ ಅಭ್ಯಾಸ ನಡೆಸುವುದು ಯಾವುದೇ ರೀತಿಯಲ್ಲಿ ವರ್ಕ್‌ಔಟ್‌ ಆಗುವುದಿಲ್ಲ ಎಂದು ಹೇಳಿದ್ದಾರೆ.

ನವೆಂಬರ್‌ 22ರಂದು ಪರ್ತ್‌ನ ಅಪ್ಟಸ್‌ ಸ್ಟೇಡಿಯಂನಲ್ಲಿ ಆರಂಭವಾಗುವ ಮೊದಲನೇ ಟೆಸ್ಟ್‌ ಪಂದ್ಯದ ನಿಮಿತ್ತ ಭಾರತ ತಂಡ ಇಂಡೋರ್‌ ಸ್ಟೇಡಿಯಂನಲ್ಲಿ ಹಾಗೂ ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳಿಗೆ ಕಾಣಿಸಿಕೊಳ್ಳದೆ ತರಬೇತಿ ನಡೆಸುತ್ತಿದೆ. ಆದರೆ, ಕೆಲ ವರದಿಗಾರರು ಡ್ರೋನ್‌ಗಳನ್ನು ಬಳಿಸಿಕೊಂಡು ಫೋಟೋಗಳು ಹಾಗೂ ವಿಡಿಯೋಗಳನ್ನು ಮಾಡುತ್ತಿದ್ದಾರೆ.

IND vs AUS: ರಹಸ್ಯ ಸ್ಥಳದಲ್ಲಿ ಟೀಮ್‌ ಇಂಡಿಯಾ ಅಭ್ಯಾಸ

ಭಾರತ ತಂಡ ಈ ತಂತ್ರವನ್ನು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಇಯಾನ್‌ ಹೀಲಿ ಅವರು ಖಂಡಿಸಿದ್ದಾರೆ ಹಾಗೂ ಇದು ಟೀಮ್‌ ಇಂಡಿಯಾಗೆ ವರ್ಕ್‌ಔಟ್‌ ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಈ ಹಿಂದೆ ಆಸ್ಟ್ರೇಲಿಯಾ ತಂಡ ತನ್ನ ಪ್ರವಾಸಿ ಸರಣಿಗಳಲ್ಲಿ ಇದೇ ವಿಧಾನವನ್ನು ಅಳವಡಿಸಿಕೊಂಡಿತ್ತು. ಇದೀಗ ಭಾರತ ಕೂಡ ಇದೇ ವಿಧಾನವನ್ನು ಅಳವಡಿಸಿಕೊಳ್ಳುತ್ತಿದೆ. ಹಾಗಾಗಿ ಭಾರತ ತಂಡ ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳಿಗೆ ಮುಕ್ತವಾಗಿ ಅಭ್ಯಾಸ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಮಾಧ್ಯಮವೊಂದರ ಜೊತೆ ಮಾತನಾಡಿದ ಇಯಾನ್‌ ಹೀಲಿ, “ಭಾರತ, ಶ್ರೀಲಂಕಾ, ಪಾಕಿಸ್ತಾನ ಸೇರಿದಂತೆ ವಿದೇಶಿ ಪ್ರವಾಸಗಳಲ್ಲಿ ಆಸ್ಟ್ರೇಲಿಯಾ ತಂಡ ಅನುಸರಿಸಿದ್ದ ವಿಧಾನವನ್ನು ಟೀಮ್‌ ಇಂಡಿಯಾ ಇದೀಗ ಅನುಸರಿಸುತ್ತಿದೆ. ಆರಂಭದಲ್ಲಿಯೇ ಮಾಧ್ಯಮಗಳಿಗೆ ಕಾಣಿಸಿಕೊಳ್ಳದೆ ವಿಶೇಷ ಅನುಭವವನ್ನು ಪಡೆಯುತ್ತಿರುವುದು ಇದಾಗಿದೆ,” ಎಂದು ಹೇಳಿದ್ದಾರೆ.

IND vs AUS: ಬಾರ್ಡರ್‌-ಗವಾಸ್ಕರ್‌ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಟಾಪ್‌ 5 ಬ್ಯಾಟರ್ಸ್‌!

“ನೀವು ಮಾಧ್ಯಮದ ಅವಕಾಶಗಳಿಗೆ ನಿಮ್ಮನ್ನು ತೆರೆದುಕೊಂಡರೆ ಮತ್ತು ಸುದ್ದಿಗೋಷ್ಠಿ ನಡೆಸಿದರೆ ಹಾಗೂ ಆಸ್ಟ್ರೇಲಿಯಾದ ಸಾರ್ವಜನಿಕರನ್ನು ಮತ್ತು ಇಲ್ಲಿರುವ ಅನೇಕ ಭಾರತೀಯರನ್ನು ಭೇಟಿ ಮಾಡಿದರೆ-ಇದು ಹೆಚ್ಚು ಸಂತೋಷದ ಪ್ರವಾಸವಾಗುತ್ತದೆ. ಭಾರತವು ತನ್ನನ್ನು ತಾನೇ ಬೀಗ ಹಾಕಿಕೊಂಡಿರುವುದಕ್ಕೆ ಹಲವು ಕಾರಣಗಳಿವೆ, ಅವರು(ಭಾರತ) ದಿನವಿಡೀ ನಿಭಾಯಿಸಬೇಕಾದ ಹಗ್ಗಜಗ್ಗಾಟದ ಗುಂಪನ್ನು ನಾವು ಊಹಿಸಲು ಸಾಧ್ಯವಿಲ್ಲ,” ಎಂದು ಆಸೀಸ್‌ ಮಾಜಿ ಕ್ರಿಕೆಟಿಗ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಟೀಮ್‌ ಇಂಡಿಯಾಗೆ ಹೀಲಿ ವಾರ್ನಿಂಗ್‌

“ಇದು ಯಾವತ್ತಿಗೂ ಕೆಲಸ ಮಾಡುವುದಿಲ್ಲ. ಆಟಗಾರರು ಆರಾಮದಾಯಕವಾಗಿ ಕಾಣಿಸಬೇಕು. ಇಂಗ್ಲೆಂಡ್‌ ತಂಡ ಒಮ್ಮೆ ಸಾರ್ವಜನಿಕವಾಗಿ ಮುಕ್ತವಾಗಿತ್ತು ಹಾಗೂ ಮುಂದಿನ ಸಲ ಮುಕ್ತವಾಗಿರಲಿಲ್ಲ. ಈ ವೇಳೆ ಅವರ ಪ್ರದರ್ಶನದಲ್ಲಿ ಅಸಾಧಾರಣ ಬದಲಾವಣೆ ಕಂಡು ಬಂದಿತ್ತು. ಹಾಗಾಗಿ ಆಟಗಾರರು ಸರಣಿಗೂ ಮುನ್ನ ಸ್ವಲ್ಪ ಆರಾಮದಾಯಕವಾಗಿ ಕಾಣಬೇಕಾಗುತ್ತದೆ ಹಾಗೂ ಮಾಧ್ಯಮಗಳ ಜತೆ ಸಂವಾದ ನಡೆಸಬೇಕು. ಆಸ್ಟ್ರೇಲಿಯಾದಲ್ಲಿ ಸಂಗತಿಗಳು ತುಂಬಾ ಸುಲಭವಾಗಿರುತ್ತವೆ. ಹಾಗಾಗಿ ಭಾರತ ತಂಡ ಸ್ವಲ್ಪ ಎಚ್ಚರಿಕೆ ಇರಬೇಕಾಗುತ್ತದೆ,” ಎಂದು ಇಯಾನ್‌ ಹೀಲಿ ಎಚ್ಚರಿಕೆ ನೀಡಿದ್ದಾರೆ.

ಮೊದಲನೇ ಟೆಸ್ಟ್‌ಗೆ ರೋಹಿತ್‌ ಶರ್ಮಾ ಅಲಭ್ಯ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ಪರ್ತ್‌ನಲ್ಲಿ ನವೆಂಬರ್‌ 22ರಂದು ಆರಂಭವಾಗಲಿದೆ. ವೈಯಕ್ತಿಕ ಕಾರಣಗಳಿಂದಾಗಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಪರ್ತ್‌ ಟೆಸ್ಟ್‌ಗೆ ಅಲಭ್ಯರಾಗಲಿದ್ದು, ಉಪ ನಾಯಕ ಜಸ್‌ಪ್ರೀತ್‌ ಬುಮ್ರಾ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.