Thursday, 12th December 2024

IND vs AUS: ಮಾರ್ನಸ್‌ ಲಾಬುಶೇನ್‌ ಕಡೆಗೆ ಚೆಂಡನ್ನು ಎಸೆದ ಮೊಹಮ್ಮದ್‌ ಸಿರಾಜ್‌! ವಿಡಿಯೊ

IND vs AUS: Mohammed Siraj chucks the ball in frustration as Marnus Labuschagne pulls out from stance

ಅಡಿಲೇಡ್: ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್‌ ಸಿರಾಜ್‌ (IND vs AUS) ಅವರು ವೈಟ್‌ ಬಾಲ್‌ ಕ್ರಿಕೆಟ್‌ಗಿಂತ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ಕಾಣಿಸಿಕೊಳ್ಳುತ್ತಾರೆ. ಬೌಲಿಂಗ್‌ ವೇಳೆ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಸ್ಲೆಡ್ಜ್‌ ಮಾಡುವುದರಲ್ಲಿ ಟೀಮ್‌ ಇಂಡಿಯಾ ವೇಗಿ ನಿಸ್ಸೀಮರು. ಅದೇ ರೀತಿ ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕೈಕ ಫಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದ ದಿನ ಮೊಹಮ್ಮದ್‌ ಸಿರಾಜ್‌ ಬೌಲಿಂಗ್‌ ವೇಗಿ ಆಸೀಸ್‌ ಬ್ಯಾಟ್ಸ್‌ಮನ್‌ ಎದುರು ಸಿಟ್ಟಿಗೆದ್ದರು.

ಭಾರತ ತಂಡದ ಪ್ರಥಮ ಇನಿಂಗ್ಸ್‌ನಲ್ಲಿ 180 ರನ್‌ಗಳಿಗೆ ಆಲ್‌ಔಟ್‌ ಆದ ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡ ತನ್ನ ಮೊದಲನೇ ವಿಕೆಟ್‌ ಅನ್ನು ಬಹುಬೇಗ ಕಳೆದುಕೊಂಡಿತು. ಆದರೆ, ನೇಥನ್‌ ಮೆಕ್‌ಸ್ವೀನಿ ಮತ್ತು ಮಾರ್ನಸ್‌ ಲಾಬುಶೇನ್‌ ಜೋಡಿ ಎರಡನೇ ವಿಕೆಟ್‌ ಉತ್ತಮ ಜತೆಯಾಟವನ್ನು ಆಡಿರು. ಒಂದು ಕಡೆ ಮೆಕ್‌ಸ್ವೀನ್‌ ತಾಳ್ಮೆಯ ಬ್ಯಾಟಿಂಗ್‌ ಮುಂದುವರಿಸಿದ್ದರೆ, ಮತ್ತೊಂದು ತುದಿಯಲ್ಲಿ ಮಾರ್ನಸ್‌ ಲಾಬುಶೇನ್‌ ಬಹಳ ಎಚ್ಚರಿಕೆಯ ಆಟವನ್ನು ಆಡಿದರು.

ಈ ಇಬ್ಬರೂ 62 ರನ್‌ಗಳ ಜೊತಯಾಟವನ್ನು ಆಡುವ ಮೂಲಕ ಆಸ್ಟ್ರೇಲಿಯಾಗೆ ಆರಂಭಿಕ ಭದ್ರ ಬುನಾದಿಯನ್ನು ಹಾಕಿದರು. ಈ ಜೋಡಿಯನ್ನು ಬೇರ್ಪಡಿಸಲು ಭಾರತೀಯ ಬೌಲರ್‌ಗಳು ಎಷೇ ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಜಸ್‌ಪ್ರೀತ್‌ ಬುಮ್ರಾ, ಹರ್ಷಿತ್‌ ರಾಣಾ, ನಿತೀಶ್‌ ರೆಡ್ಡಿ ಹಾಗೂ ಆರ್‌ ಅಶ್ವಿನ್‌ ಅವರಿಂದ ಈ ಜೋಡಿ ಔಟ್‌ ಮಾಡಲು ಸಾಧ್ಯವಾಗಲಿಲ್ಲ. ಈ ವೇಳೆ ಮೊಹಮ್ಮದ್‌ ಸಿರಾಜ್‌ ಅವರ ತಾಳ್ಮೆ ಕಳೆದುಕೊಂಡ ಘಟನೆ ನಡೆಯಿತು.

ಮಾರ್ನಸ್‌ ಲಾಬುಶೇನ್‌ ಮೇಲೆ ಚೆಂಡನ್ನು ಎಸೆದ ಸಿರಾಜ್‌

ಆಸ್ಟ್ರೇಲಿಯದ ಇನಿಂಗ್ಸ್‌ನ 25ನೇ ಓವರ್‌ನ ಕೊನೆಯ ಎಸೆತವನ್ನು ಬೌಲ್‌ ಮಾಡುವಾಗ ಮೊಹಮ್ಮದ್ ಸಿರಾಜ್ ಅವರನ್ನು ಮಾರ್ನಸ್‌ ಲಾಬುಶೇನ್‌ ಹಠಾತ್ತನೆ ನಿಲ್ಲಿಸಿದರು. ಇದರಿಂದ ಕೆರಳಿದ ಮೊಹಮ್ಮದ್‌ ಸಿರಾಜ್‌, ಮರ್ನಸ್ ಲಾಬುಶೇನ್‌ ಕಡೆಗೆ ಚೆಂಡನ್ನು ಬಲವಾಗಿ ಎಸೆದರು. ಈ ವೇಳೆ ಸಿರಾಜ್‌ ಮುಖದಲ್ಲಿ ಆಕ್ರೋಶ ಎದ್ದು ಕಾಣುತ್ತಿತ್ತು. ಬ್ಯಾಟಿಂಗ್‌ಗೆ ನೇರವಾಗಿ ಸ್ಕ್ರೀನ್‌ ಸಮೀಪ ಒಬ್ಬ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಲಾಬುಶೇನ್‌, ಬೌಲ್‌ ಮಾಡಲು ಬಡುತ್ತಿದ್ದ ಸಿರಾಜ್‌ ಅವರನ್ನು ತಡೆದರು. ಇದಾದ ಬಳಿಕ ಮುಂದಿನ ಎಸೆತದಲ್ಲಿ ಸಿರಾಜ್‌ಗೆ ಲಾಬುಶೇನ್‌ ಬೌಂಡರಿ ಬಾರಿಸಿದ್ದರು.

ಅಡಿಲೇಡ್ ಟೆಸ್ಟ್‌ನಲ್ಲಿ ಒತ್ತಡಕ್ಕೆ ಸಿಲುಕಿದ ಭಾರತ

ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದೆ. ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 180 ರನ್‌ಳಿಗೆ ಆಲ್‌ಔಟ್‌ ಆದ ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡ ಮೊದಲನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್‌ ನಷ್ಟಕ್ಕೆ 86 ರನ್‌ ಗಳಿಸಿದೆ. ಆ ಮೂಲಕ ಇನ್ನೂ 94 ರನ್‌ಗಳ ಹಿನ್ನಡೆಯಲ್ಲಿದೆ. ನೇಥನ್‌ ಮೆಕ್‌ಸ್ವೀನ್‌ (38) ಹಾಗೂ ಮಾರ್ನಸ್‌ ಲಾಬುಶೇನ್‌ (20) ಅವರು ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS 2nd Test Day 1 Highlights: ಸ್ಟಾರ್ಕ್‌ ಮಾರಕ ದಾಳಿಯಿಂದ ಭಾರತಕ್ಕೆ ಮೊದಲನೇ ದಿನ ಹಿನ್ನಡೆ!