ಪರ್ತ್: (IND vs AUS) ಕೆಎಲ್ ರಾಹುಲ್ ಅವರ ವಿವಾದಾತ್ಮಕ ಕ್ಯಾಚ್‌ಗೆ ಆಸ್ಟ್ರೇಲಿಯಾದ ಹಿರಿಯ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಪ್ರತಿಕ್ರಿಯಿಸಿದ್ದಾರೆ. ಇದು ನಿಯಮಗಳ ಪ್ರಕಾರ ತೆಗೆದುಕೊಂಡ ಸಾಮಾನ್ಯ ವಿಕೆಟ್ ಎಂದು ಆಸೀಸ್ ವೇಗಿ ಹೇಳಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಅವರ ಔಟ್‌ವಿವಾದವನ್ನು ಹುಟ್ಟುಹಾಕಿತು ಮತ್ತು ಆನ್-ಫೀಲ್ಡ್ ಅಂಪೈರ್ ‘ನಾಟೌಟ್’ ನಿರ್ಧಾರವನ್ನು ಪ್ರಕಟಿಸಿದ್ದರು. ಆದರೆ, ಮೂರನೇ ಅಂಪೈರ್ ವಿಡಿಯೋ ನೋಡಿ ಔಟ್ ನಿರ್ಧಾರವನ್ನು ತೆರೆ ಮೇಲೆ ಪ್ರಕಟಿಸಿದ್ದರು.
ಆನ್-ಫೀಲ್ಡ್ ಅಂಪೈರ್ ರಿಚರ್ಡ್ ಕೆಟಲ್‌ಬರೋ ರಾಹುಲ್ ಪರವಾಗಿ ನಿರ್ಧಾರವನ್ನು ನೀಡಿದ್ದರು. ಆದರೆ ಆತಿಥೇಯ ತಂಡ ಡಿಆರ್‌ಎಸ್ ತೆಗೆದುಕೊಂಡಿತು. ಮೂರನೇ ಅಂಪೈರ್ ರಿಚರ್ಡ್ ಇಲ್ಲಿಂಗ್‌ವರ್ಥ್, ‘ಸ್ಪ್ಲಿಟ್ ಸ್ಕ್ರೀನ್ ವ್ಯೂ’ ನೋಡದೆ ನಿರ್ಧಾರ ಬದಲಿಸಿದರು. ‘ಸ್ಪ್ಲಿಟ್ ಸ್ಕ್ರೀನ್ ವ್ಯೂ’ ಅವರಿಗೆ ಸ್ಟಾರ್ಕ್ ಅವರ ಚೆಂಡು ನಿಜವಾಗಿಯೂ ಬ್ಯಾಟ್‌ಗೆ ಬಡಿದಿದೆಯೇ ಅಥವಾ ‘ಸ್ನಿಕೊ’ ಬ್ಯಾಟ್ ಪ್ಯಾಡ್‌ಗೆ ಬಡಿದ ಶಬ್ದವನ್ನು ಕೇಳಿದೆಯೇ ಎಂದು ಸ್ಪಷ್ಟಪಡಿಸುತ್ತದೆ. ಆದರೆ ಮೂರನೇ ಅಂಪೈರ್ ಇದನ್ನು ಪರಿಗಣಿಸದೆ ಔಟ್ ತೀರ್ಪನ್ನು ಪ್ರಕಟಿಸಿದ್ದರು.
IND vs AUS: 26 ರನ್‌ಗೆ ಔಟಾದರೂ ವಿಶೇಷ ದಾಖಲೆ ಬರೆದ ಕನ್ನಡಿಗ ಕೆಎಲ್ ರಾಹುಲ್!
ಕೆಎಲ್ ರಾಹುಲ್ ವಿವಾದಾತ್ಮಕ ಔಟ್ ಬಗ್ಗೆ ಸ್ಟಾರ್ಕ್ ಪ್ರತಿಕ್ರಿಯೆ
ಮೊದಲನೇ ದಿನದಾಟದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಿಚೆಲ್ ಸ್ಟಾರ್ಕ್,”ಔಟ್ ನಿರ್ಧಾರವನ್ನು ಖಂಡಿತವಾಗಿಯೂ ರದ್ದುಗೊಳಿಸಲಾಗಿತ್ತು. ಆದರೆ ಇದು ನಿಯಮಗಳ ಅಡಿಯಲ್ಲಿ ತೆಗೆದುಕೊಂಡ ವಿಕೆಟ್ ಎಂದು ನಾನು ಭಾವಿಸಿದೆ. ಆ ಸಮಯದಲ್ಲಿ ನನಗೆ ಇದು ಸಾಮಾನ್ಯ ವಿಕೆಟ್ ಎಂದು ಭಾವಿಸುವಂತೆ ಮಾಡಿತು ಹಾಗೂ ಬ್ಯಾಟ್‌ಗೆ ಚೆಂಡು ತಗುಲಿರುವ ಶಬ್ದ ಕೇಳಿ ಬಂದಿತ್ತು,” ಎಂದು ಹೇಳಿದ್ದಾರೆ.
Matthew Hayden explaining the KL Rahul bat-pad scenario.
— Mufaddal Vohra (@mufaddal_vohra) November 22, 2024
– Unlucky, KL. 💔 pic.twitter.com/lf0UOWwmy8
ಮಿಚೆಲ್ ಸ್ಟಾರ್ಕ್ (14 ರನ್‌ಗಳಿಗೆ 2 ವಿಕೆಟ್) ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡುವ ಮೂಲಕ ಈ ಸರಣಿಯಲ್ಲಿ ಮೊದಲನೇ ವಿಕೆಟ್ ಪಡೆದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು “ಇಂದು ಬೌಲಿಂಗ್ ಚೆನ್ನಾಗಿತ್ತು ಎಂದು ನಾನು ಭಾವಿಸುತ್ತೇನೆ. ನಿಸ್ಸಂಶಯವಾಗಿ ಇಲ್ಲಿನ ವಿಕೆಟ್ ಉತ್ತಮವಾಗಿತ್ತು ಮತ್ತು ಬಹುಶಃ ಇದು ‘ಹಾರ್ಡ್‌ಬಾಲ್’ ವಿಕೆಟ್ ಎಂದು ಭಾವಿಸಿದೆ,” ಎಂದು ತಿಳಿಸಿದ್ದಾರೆ.
“ಭಾರತದ ಇನಿಂಗ್ಸ್‌ನ ಅಂತ್ಯದ ವೇಳೆಗೆ ಚೆಂಡು ಸ್ವಲ್ಪ ‘ಮೃದು’ ಆಗಲು ಆರಂಭಿಸಿದಾಗ ಅದು ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ಪಿಚ್ ಇನ್ನೂ ಸಹಾಯ ಮಾಡುತ್ತಿತ್ತು ಆದರೆ, ಅದು ಹೊಸ ‘ಹಾರ್ಡ್‌ಬಾಲ್’ ನಂತೆ ಪರಿಣಾಮಕಾರಿಯಾಗಿರಲಿಲ್ಲ. ಎರಡನೇ ಇನಿಂಗ್ಸ್‌ನಲ್ಲಿ ತಂಡಗಳು ಈ ಬಗ್ಗೆ ಗಮನ ಹರಿಸಬೇಕು. ನೀವು ಕಷ್ಟದ ಸಮಯದಲ್ಲಿ ಶಾಂತವಾಗಿದ್ದರೆ ಬ್ಯಾಟಿಂಗ್ ಮಾಡಲು ಸುಲಭವಾಗುತ್ತದೆ. ಔಟ್ ಫೀಲ್ಡ್ ತುಂಬಾ ನಿಧಾನವಾಗಿರುವುದರಿಂದ ರನ್ ಗಳಿಸುವುದು ಸ್ವಲ್ಪ ಕಷ್ಟವಾಗಿತ್ತು. ಇಷ್ಟು ನಿಧಾನಗತಿಯ ಔಟ್‌ಫೀಲ್ಡ್ ಅನ್ನು ನಾವು ನೋಡಿ ಬಹಳ ಸಮಯವಾಗಿದೆ,” ಎಂದು ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ.