ನವದೆಹಲಿ: ಆಸ್ಟ್ರೇಲಿಯಾ ವಿರುದ್ದದ ಬಾರ್ಡರ್-ಗವಾಸ್ಕರ್ ಟ್ರೋಫಿ (IND vs AUS) ಟೆಸ್ಟ್ ಸರಣಿಗೂ ಮುನ್ನ ಅಭ್ಯಾಸ ಪಂದ್ಯ ಆಡದೇ ಇರುವ ಭಾರತ ತಂಡದ ನಿರ್ಧಾರದ ಬಗ್ಗೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಆಘಾತ ವ್ಯಕ್ತಪಡಿಸಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲನೇ ಟೆಸ್ಟ್ ಪಂದ್ಯ ನವೆಂಬರ್ 22ರಂದು ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಆದರೆ, ಟೀಮ್ ಇಂಡಿಯಾ ಅಭ್ಯಾಸ ಪಂದ್ಯಗಳನ್ನು ಆಡದೆ ಇರಲು ನಿರ್ಧರಿಸಿದೆ.
ಭಾರತ ತಂಡ ತನ್ನ ಸದಸ್ಯರ ನಡುವೆ ಅಭ್ಯಾಸ ಪಂದ್ಯಗಳನ್ನು ಆಡಿದೆ. ಆಸ್ಟ್ರೇಲಿಯಾ ದೇಶಿ ತಂಡದ ವಿರುದ್ದ ಯಾವುದೇ ಅಭ್ಯಾಸ ಪಂದ್ಯವನ್ನು ಆಡಲು ಭಾರತ ತಂಡ ನಿರಾಕರಿಸಿದೆ. ಆದರೆ, ಇದಕ್ಕೂ ಮುನ್ನ ಭಾರತ ಎ ತಂಡ ಅನಧಿಕೃತ ಟೆಸ್ಟ್ ಸರಣಿಯನ್ನು ಆಡಿತ್ತು . ಈ ಸರಣಿಯಲ್ಲಿ ಧ್ರುವ್ ಜುರೆಲ್, ಕೆಎಲ್ ರಾಹುಲ್ ಹಾಗೂ ಅಭಿಮನ್ಯು ಈಶ್ವರನ್ ಆಡಿದ್ದರು. ಆದರೆ, ಜುರೆಲ್ ಸಕ್ಸಸ್ ಕಂಡಿದ್ದರೆ, ರಾಹುಲ್ ಮತ್ತು ಈಶ್ವರನ್ ವೈಫಲ್ಯ ಅನುಭವಿಸಿದ್ದರು.
IND vs AUS: ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಭಾರತ ಕಳೆದುಕೊಳ್ಳಲಿರುವ ಮೂವರು ಸ್ಟಾರ್‌ಗಳು!
“ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಿಮಿತ್ತ ಭಾರತ ತಂಡ, ತನ್ನಲ್ಲಿಯೇ ಆಟಗಾರರ ಜೊತೆ ಅಭ್ಯಾಸವನ್ನು ನಡೆಸಿದೆ. ಈ ಕಾರಣದಿಂದ ನಾನು ಭಾರತ ತಂಡದ ಸುತ್ತುಮುತ್ತು ತಲೆ ಹಾಕುವುದಿಲ್ಲ. ಏಕೆಂದರೆ ತನ್ನ ತಂಡದಲ್ಲಿಯೇ ಎರಡು ತಂಡಗಳನ್ನು ಮಾಡಿಕೊಂಡು ಅಭ್ಯಾಸ ಪಂದ್ಯವನ್ನು ಆಡುವುದರಿಂದ ಆಟಗಾರರಲ್ಲಿ ಸ್ಪರ್ಧಾತ್ಮಕ ಮನಸ್ಥಿತಿ ಉಂಟಾಗುವುದಾದರೂ ಹೇಗೆ? ಆದರೆ, ಎಲ್ಲವನ್ನು ಸಮಯ ಹೇಳುತ್ತದೆ,” ಎಂದು ಮೈಕಲ್ ವಾನ್ ಫಾಕ್ಸ್ ಕ್ರಿಕೆಟ್‌ಗೆ ತಿಳಿಸಿದ್ದಾರೆ.
ಮೊದಲನೇ ಟೆಸ್ಟ್‌ಗೂ ಮುನ್ನ ಡಬ್ಲ್ಯುಎಸಿಎ ಮೈದಾನದಲ್ಲಿ ಒಂದು ಅಭ್ಯಾಸ ಪಂದ್ಯವನ್ನು ಭಾರತ ತಂಡ ಏಕೆ ಆಡಲಿಲ್ಲ ಎಂಬುದರ ಬಗ್ಗೆ ಮೈಕಲ್ ವಾನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಏಕೆಂದರೆ, ಪರ್ತ್‌ನ ಆಪ್ಟಸ್ ಹಾಗೂ ಡಬ್ಲ್ಯುಎಸಿಎ ಕ್ರೀಡಾಂಗಣದ ಪಿಚ್ ಕೂಡ ಒಂದೇ ರೀತಿ ಇದೆ ಎಂಬುದು ವಾನ್ ಅವರ ಅಭಿಪ್ರಾಯ.
ಬ್ಯಾಟ್ ಬದಿಗಿಟ್ಟು ಮೈಕ್ ಹಿಡಿದ ಪೂಜಾರ; ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕಾಮೆಂಟರಿ
ಅಚ್ಚರಿ ವ್ಯಕ್ತಪಡಿಸಿದ ಮೈಕಲ್ ವಾನ್
“ಟೆಸ್ಟ್ ಸರಣಿಗೂ ಮುನ್ನ ಒಂದೇ ಒಂದು ಅಭ್ಯಾಸ ಪಂದ್ಯವನ್ನು ಆಡದ ಭಾರತ ತಂಡದ ನಿರ್ಧಾರದ ಬಗ್ಗೆ ನನಗೆ ಅಚ್ಚರಿಯಾಗಿದೆ. ಏಕೆಂದರೆ ಪರ್ತ್ ಆಪ್ಟಸ್ ಕ್ರೀಡಾಂಗಣದ ಪಿಚ್‌ನಂತೆ ಡಬ್ಲ್ಯುಎಸಿಎ ಮೈದಾನದ ಪಿಚ್ ಸಾಮ್ಯತೆಯನ್ನು ಹೊಂದಿದೆ. ಇಲ್ಲಿಯೂ ಕೂಡ ಪಿಚ್ ಬೌನ್ಸ್‌ನಿಂದ ಕೂಡಿದೆ. ನಮ್ಮ ಕಾಲಕ್ಕಿಂತ ಈ ಕಾಲದ ಹುಡುಗರು ತುಂಬಾ ವಿಭಿನ್ನವಾಗಿದ್ದಾರೆ. ನಮ್ಮ ಕಾಲದಲ್ಲಿ ನಮಗೆ ಹೆಚ್ಚಿನ ಪಂದ್ಯಗಳ ಅಗತ್ಯವಿತ್ತು,” ಎಂದು ಇಂಗ್ಲೆಂಡ್ ಮಾಜಿ ನಾಯಕ ತಿಳಿಸಿದ್ದಾರೆ.
“ಈಗಿನ ಕಾಲದ ಹುಡುಗರು ವರ್ಷವೀಡಿ ಆಡುತ್ತಲೇ ಇರುತ್ತಾರೆ. ಆದರೆ, ಎರಡೂ ತಂಡಗಳ ಆಟಗಾರರು ದೀರ್ಘಾವಧಿ ಬಳಿಕ ಟೆಸ್ಟ್ ಪಂದ್ಯದ ಮೊದಲನೇ ದಿನ ಹೇಗೆ ಆಡುತ್ತಾರೆಂಬುದು ನನ್ನಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಆಧುನಿಕ ಕ್ರಿಕೆಟಿಗರು ನಮಗೆ ಹೆಚ್ಚಿನ ಪಂದ್ಯಗಳ ಅಗತ್ಯವಿಲ್ಲ ಎಂಬುದನ್ನು ಬಲವಾಗಿ ನಂಬುತ್ತಾರೆ. ವರ್ಷವಿಡೀ ಸಾಕಷ್ಟು ಕ್ರಿಕೆಟ್ ಅನ್ನು ಪಡೆಯುತ್ತಾರೆ ಎಂದು ಅವರು ಭಾವಿಸುತ್ತಾರೆ. ಈ ಕಾರಣದಿಂದ ಅವರು ಪ್ರತಿಕ್ರಿಯಿಸಬಹುದು ಮತ್ತು ಹೊಂದಿಕೊಳ್ಳಬಹುದು,” ಎಂದು ಮೈಕಲ್ ವಾನ್ ಹೇಳಿದ್ದಾರೆ.