ಬ್ರಿಸ್ಬೇನ್: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ(IND vs AUS) ವಿರುದ್ಧದ ಮೂರನೇ ಟೆಸ್ಟ್(IND vs AUS 3rd Test 2024) ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಕೊಹ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ಆಸ್ಟ್ರೇಲಿಯಾ ವಿರುದ್ಧ 100 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ವಿಶೇಷ ದಾಖಲೆ ಬರೆದರು. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ 2ನೇ ಆಟಗಾರ ಎನಿಸಿಕೊಂಡರು.
ಆಸೀಸ್ ವಿರುದ್ಧ ಅತ್ಯಧಿಕ ಪಂದ್ಯವನ್ನಾಡಿದ ದಾಖಲೆ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ. ಸಚಿನ್ ಆಸೀಸ್ ವಿರುದ್ಧ 6,707 ರನ್ ಕಲೆಹಾಕಿದರೆ, ವಿರಾಟ್ ಕೊಹ್ಲಿ 5,326* ರನ್ ಗಳಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ 91 ಪಂದ್ಯಗಳನ್ನಾಡಿ ನಾಲ್ಕನೇ ಸ್ಥಾನದಲ್ಲಿದೆ.
ಸದ್ಯ ಪಂದ್ಯ ಮಳೆಯಿಂದ ಸ್ಥಗಿತಗೊಂಡಿದ್ದು ಮೊದಲು ಬ್ಯಾಟಿಂಗ್ ನಡೆಸುತ್ತಿರುವ ಆಸ್ಟ್ರೇಲಿಯಾ 13.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ.
ಭಾರತ ಈ ಪಂದ್ಯಕ್ಕೆ ಆಡುವ ಬಳಗದಲ್ಲಿ ಎರಡು ಬದಲಾವಣೆ ಮಾಡಿತು. ಕಳೆದ ಪಂದ್ಯದಲ್ಲಿ ಆಡಿದ್ದ ವೇಗಿ ಹರ್ಷಿತ್ ರಾಣ ಮತ್ತು ಆರ್.ಅಶ್ವಿನ್ ಅವರನ್ನು ಕೈ ಬಿಟ್ಟು ಇವರ ಸ್ಥಾನಕ್ಕೆ ರವೀಂದ್ರ ಜಡೇಜಾ ಮತ್ತು ಆಕಾಶ್ ದೀಪ್‌ಗೆ ಅವಕಾಶ ನೀಡಲಾಯಿತು.
ಭಾರತ ತಂಡಕ್ಕೆ ಅಜಿಂಕ್ಯ ರಹಾನೆ ಕಮ್‌ಬ್ಯಾಕ್ ಮಾಡ್ತಾರಾ?
ಬೆಂಗಳೂರು: ಭಾರತ ಕ್ರಿಕೆಟ್ ತಂಡಕ್ಕೆ ಪುನರಾಗಮನ ಮಾಡಲು ಯತ್ನಿಸುತ್ತಿರುವ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಅಜಿಂಕ್ಯ ರಹಾನೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ (SMAT 2025) ಭಾರಿ ಸದ್ದು ಮಾಡುತ್ತಿದ್ದಾರೆ. ಅದ್ಭುತ ಫಾರ್ಮ್‌ನಲ್ಲಿರುವ ರಹಾನೆ ಅವರ ದಿಟ್ಟ ಪ್ರದರ್ಶನದಿಂದಾಗಿ ಮುಂಬೈ ತಂಡ ಫೈನಲ್‌ಗೂ ಲಗ್ಗೆ ಇಟ್ಟಿದೆ. ಸೆಮಿಫೈನಲ್ ಪಂದ್ಯದಲ್ಲಿ ರಹಾನೆ ಮುಂಬೈ ಪರ 98 ರನ್‌ಗಳ ಸ್ಪೋಟಕ ಇನಿಂಗ್ಸ್ ಅನ್ನು ಆಡಿದ್ದಾರೆ. ಆದರೆ, ಕೇವಲ ಎರಡು ರನ್‌ಗಳಿಂದ ರಹಾನೆ ಶತಕ ವಂಚಿತರಾದರು. ದೇಶಿ ಟೂರ್ನಿಯ ಈ ಋತುವಿನಲ್ಲಿ ಶತಕದ ಸಮೀಪಕ್ಕೆ ಬಂದು ವಿಕೆಟ್ ಒಪ್ಪಿಸಿರುವುದು ಇದು ಮೂರನೇ ಸಲ!
ಈ ಟೂರ್ನಿಯಲ್ಲಿ ಅಜಿಂಕ್ಯಾ ರಹಾನೆಯ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಇದೀಗ ಅವರು ಮುಂಬೈ ಪರ ಒಟ್ಟು 8 ಪಂದ್ಯಗಳನ್ನು ಆಡಿದ್ದಾರೆ. ಈ 8 ಪಂದ್ಯಗಳಲ್ಲಿ ರಹಾನೆ 432 ರನ್ ಗಳಿಸಿದ್ದಾರೆ, ಇದರಲ್ಲಿ ಅವರ ಸ್ಟ್ರೈಕ್ ರೇಟ್ 170 ಕ್ಕಿಂತ ಹೆಚ್ಚು. ಅಷ್ಟೇ ಅಲ್ಲ, ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ 19 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಈ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.