Friday, 22nd November 2024

IND vs BAN 1st T20I: ಟೀಂ ಇಂಡಿಯಾಕ್ಕೆ ಬಿಗ್‌ ಶಾಕ್‌- ಟಿ20 ಪಂದ್ಯದಿಂದ ಶಿವಂ ದುಬೆ ಹೊರಕ್ಕೆ

IND vs BAN 1st T20I

ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಮುಂಬರುವ ಮೂರು ಪಂದ್ಯಗಳ T20I ಸರಣಿ(IND vs BAN 1st T20I)ಯಿಂದ ಆಲ್‌ರೌಂಡರ್ ಶಿವಂ ದುಬೆ(Shivam Dube) ಅವರನ್ನು ಹೊರಗಿಡಲು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿರ್ಧರಿಸಿದೆ. ಈ ಬಗ್ಗೆ ಬಿಸಿಸಿಐ ಪ್ರಕಟಣೆ ಹೊರಡಿಸಿದ್ದು, ಅದರ ಪ್ರಕಾರ, ತೀವ್ರ ಬೆನ್ನುನೋವಿನ ಸಮಸ್ಯೆ ಎದುರಿಸುತ್ತಿರುವ ಕಾರಣ ದುಬೆಯ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ತಿಳಿಸಿದೆ.

ಯುವ ಆಟಗಾರ ಎಡಗೈ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅವರು ದುಬೆ ಅವರ ಸ್ಥಾನಕ್ಕೆ ಬರಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ. ಭಾನುವಾರ ಬೆಳಗ್ಗೆ ವರ್ಮಾ ಅವರು ಗ್ವಾಲಿಯರ್‌ಗೆ ಬಂದು ತಂಡವನ್ನು ಸೇರಿಕೊಳ್ಳಲಿದ್ದಾರೆ. ಶಿವಂ ದುಬೆ ಅವರು ಇರಾನಿ ಕಪ್‌ ವರ್ಸಸ್‌ ರೆಸ್ಟ್ ಆಫ್ ಇಂಡಿಯಾ ಪಂದ್ಯದಲ್ಲೂ ಭಾಗಿಯಾಗಿರಲಿಲ್ಲ. ಬಾಂಗ್ಲಾದೇಶ ಸರಣಿಗೆ ಮುನ್ನ ಮುಂಬೈ ತಂಡದೊಂದಿಗಿನ ತರಬೇತಿಯ ಸಮಯದಲ್ಲಿ ದುಬೆ ಅವರಿಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿತ್ತು. ಗ್ವಾಲಿಯರ್‌ ಗೆ ತಲುಪಿದ ನಂತರವೂ ನಂತರವೂ ನೋವು ಉಲ್ಬಣಿಸಿತ್ತು. ಹೀಗಾಗಿ ತರಬೇತಿ ಸಮಯದಲ್ಲಿ ಭಾರೀ ಸಂಕಷ್ಟ ಎದುರಿಸುತ್ತಿದ್ದರು.

ಅವರ ಬದಲಿಯಾಗಿ, ವರ್ಮಾ ಅವರು 16 T20I ಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ, 336 ರನ್ ಗಳಿಸಿದ್ದಾರೆ. ಅಲ್ಲದೇ ಅರೆಕಾಲಿಕ ಬೌಲರ್ ಆಗಿ ಎರಡು ವಿಕೆಟ್‌ಗಳ ಪಡೆದಿರುವ ಹೆಗ್ಗಳಿಕೆ ಅವರದು. ಇತ್ತೀಚೆಗೆ ಮುಕ್ತಾಯಗೊಂಡ ಜಿಂಬಾಬ್ವೆ ಮತ್ತು ಶ್ರೀಲಂಕಾ ಟಿ20 ಐ ಸರಣಿಯ ವೇಳೆ ಅವರು ಗಾಯಗೊಂಡಿದ್ದರು.
ದುಬೆ ಪಂದ್ಯದಿಂದ ಹೊರಗುಳಿದಿರುವುದು ತಂಡಕ್ಕೆ ದೊಡ್ಡ ನಷ್ಟವಾಗಿದ್ದರೂ, ವರ್ಮಾ ಅವರನ್ನು ತಂಡಕ್ಕೆ ಬಲ ತುಂಬಲಿದೆ. ಈಗಾಗಲೇ ವರ್ಮಾ ಇತ್ತೀಚಿನ ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್‌ನ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ.

ಐಪಿಎಲ್‌ನಲ್ಲಿ ಅವರು 38 ಪಂದ್ಯಗಳಲ್ಲಿ 1156 ರನ್ ಗಳಿಸಿದ್ದಾರೆ ಮತ್ತು 146.32 ಸ್ಟ್ರೈಕ್ ರೇಟ್ ಇದರಲ್ಲಿ ಆರು ಅರ್ಧ ಶತಕಗಳು ಸೇರಿದೆ. ನಾಯಕ ಸೂರ್ಯಕುಮಾರ್ ಯಾದವ್ ಅವರ ಆಟದ ಬಗ್ಗೆಯೂ ಪರಿಚಿತರಾಗಿರುತ್ತಾರೆ. ಹೀಗಾಗಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನವನ್ನು ಪಡೆದುಕೊಳ್ಳಬಹುದು.

ಟೀಮ್ ಇಂಡಿಯಾ ಅಕ್ಟೋಬರ್ 6 ರಂದು ಗ್ವಾಲಿಯರ್‌ನಲ್ಲಿ ತಮ್ಮ ಮೊದಲ T20I ಅನ್ನು ಆಡಲಿದೆ. ಇದರ ನಂತರ ಎರಡನೇ ಪಂದ್ಯವನ್ನು ಅಕ್ಟೋಬರ್ 9 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮತ್ತು ಅಂತಿಮ ಪಂದ್ಯವು ಅಕ್ಟೋಬರ್ 12 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಈ ಸುದ್ದಿಯನ್ನೂ ಓದಿ: Dwayne Bravo Retirement: ಎಲ್ಲ ಮಾದರಿಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಡ್ವೇನ್‌ ಬ್ರಾವೊ