ಕಾನ್ಪುರ: ಮೂರು ವರ್ಷಗಳ ಬಳಿಕ ಟೆಸ್ಟ್ ಪಂದ್ಯದ ಆತಿಥ್ಯ ವಹಿಸಿಕೊಂಡಿರುವ ಕಾನ್ಪುರದ(Kanpur) ಐಕಾನಿಕ್ ಗ್ರೀನ್ ಪಾರ್ಕ್ ಸ್ಟೇಡಿಯಂ(Green Park) ಭಾರತ ಮತ್ತು ಬಾಂಗ್ಲಾ ನಡುವಣ ದ್ವಿತೀಯ(IND vs BAN 2nd Test) ಟೆಸ್ಟ್‌ಗೆ ಅಣಿಯಾಗಿದೆ. ಭಾರತಕ್ಕೆ ಸರಣಿ ಗೆಲ್ಲುವ ತವಕವಾದರೆ, ಮೊದಲ ಪಂದ್ಯವನ್ನು ಸೋತಿರುವ ಬಾಂಗ್ಲಾಗೆ ಸರಣಿ ಸೋಲಿನಿಂದ ಪಾರಾಗುವ ಸಂಕಟ. ಪಂದ್ಯದ ಪಿಚ್ ರಿಪೋರ್ಟ್(Green Park pitch pitch), ಹವಾಮಾನ ವರದಿ(Kanpur weather) ಮತ್ತು ಸಂಭಾವ್ಯ ತಂಡಗಳ ಮಾಹಿತಿ ಹೀಗಿದೆ.
ಪಿಚ್ ರಿಪೋರ್ಟ್
ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ದೀರ್ಘಕಾಲದ ಇತಿಹಾಸವನ್ನು ಹೊಂದಿದೆ. ಮೊದಲಿನಿಂದಲೂ ಇಲ್ಲಿ ಸ್ಪಿನ್ನರ್‌ಗಳೇ ಉತ್ತಮ ದಾಖಲೆ ಹೊಂದಿದ್ದಾರೆ. ನೇರವಾಗಿ ಹೇಳಬೇಕೆಂದರೆ ಇದು ಸ್ಪಿನ್ ಟ್ರ್ಯಾಕ್. ಹೀಗಾಗಿ ಉಭಯ ತಂಡಗಳು ಕೂಡ ತ್ರಿವಳಿ ಸ್ಪಿನ್ ದಾಳಿಗಿಳಿಸುವುದರಲ್ಲಿ ಅನುಮಾನವಿಲ್ಲ. ಎರಡೂ ತಂಡಗಳಲ್ಲಿಯೂ ಸಮರ್ಥ ಸ್ಪಿನ್ ಬೌಲರ್‌ಗಳಿದ್ದಾರೆ. ಇನ್ನೊಂದೆಡೆ ಭಾರತ ಮತ್ತು ಬಾಂಗ್ಲಾ ತಂಡಗಳು ಕಾನ್ಪುರದಲ್ಲಿ ಆಡುತ್ತಿರುವ ಮೊದಲ ಟೆಸ್ಟ್ ಪಂದ್ಯ ಇದಾಗಿದೆ. ಹೀಗಾಗಿ ಯಾರು ಬಲಿಷ್ಠ ಎನುವುದನ್ನು ಅಂದಾಜಿಸುವುದು ಕೂಡ ತುಸು ಕಷ್ಟ.
ಕಪ್ಪು ಮಣ್ಣಿನ ಪಿಚ್ ಇದಾಗಿರುವುದರಿಂದ ಇಲ್ಲಿ ಹೆಚ್ಚಿನ ಬೌನ್ಸರ್‌ಗಳು ಇರುವುದಿಲ್ಲ. ಪಂದ್ಯ ಸಾಗಿದಂತೆ ಪಿಚ್ ನಿಧಾನವಾಗಿ ವರ್ತಿಸಲಿದೆ. ಆರಂಭದಲ್ಲಿ ಹೆಚ್ಚಿನ ತಿರುವುಗಳು ಕಂಡುಬರುವ ಸಾಧ್ಯತೆ ಕಡಿಮೆ. ಹೀಗಾಗಿ ಬ್ಯಾಟರ್‌ಗಳು ಸದ್ಯ ನಿರಾಳರಾಗಿದ್ದಾರೆ. ರನ್ ಗಳಿಸುವುದು ಬ್ಯಾಟರ್‌ಗಳಿಗೆ ಸುಲಭವಾಗಬಹುದು. ಈ ಕ್ರೀಡಾಂಗಣದ ಕೊನೆಯ ಬಾರಿಗೆ ನಡೆದಿದ್ದ 2 ಟೆಸ್ಟ್ ಪಂದ್ಯಗಳು 5 ದಿನಗಳ ಕಾಲ ನಡೆದಿದ್ದವು. ಈ ಪಂದ್ಯ ಎಷ್ಟು ದಿನ ಸಾಗಲಿದೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ IND vs BAN 2nd Test: ಕುಸಿಯುವ ಭೀತಿಯಲ್ಲಿ ಕಾನ್ಪುರ ಸ್ಟೇಡಿಯಂ; 50 ಮಂದಿ ಕುಳಿತರೂ ಅಪಾಯ!
ಹವಾಮಾನ ವರದಿ
ಕಾನ್ಪುರ ಟೆಸ್ಟ್ ಪಂದ್ಯದ ಮೊದಲ ದಿನದಾಟಕ್ಕೆ ಭಾರೀ ಮಳೆ ಎಚ್ಚರಿಕೆ ಇದೆ. ಶೇ.92ರಷ್ಟಿದೆ. ಅದರಲ್ಲೂ ಮೊದಲ ದಿನದ ಮೊದಲ 2 ಅವಧಿಗಳಲ್ಲಿ ಮಳೆ ಅಡಚಣೆಯ ಸಾಧ್ಯತೆ ಅಧಿಕವಾಗಿದೆ. ಹೀಗಾಗಿ ಮೊದಲ ದಿನದ ಆಟ ನಡೆಯುವುದು ಬಹುತೇಕ ಅನುಮಾನ ಎಂಬಂತಿದೆ. 2, 3 ಮತ್ತು 4ನೇ ದಿನ ಮಳೆ ಕಾಡುವ ಸಾಧ್ಯತೆ ಶೇ. 49, 65, 56ರಷ್ಟಿದೆ. ಪಂದ್ಯದ ಕೊನೇ ದಿನದಾಟದಲ್ಲಿ ಮಾತ್ರ ಮಳೆ ಅಡಚಣೆ ಸಾಧ್ಯತೆ ಕೇವಲ ಶೇ.3ರಷ್ಟಿದೆ.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿ.ಕೀ), ಕೆ.ಎಲ್. ರಾಹುಲ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಕ್ಷರ್ ಪಟೇಲ್ / ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಆಕಾಶ್ ದೀಪ್ / ಮೊಹಮ್ಮದ್ ಸಿರಾಜ್.
ಬಾಂಗ್ಲಾದೇಶ: ಶಾದ್ಮನ್ ಇಸ್ಲಾಂ, ಜಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್ (ವಿ.ಕೀ), ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್/ತೈಜುಲ್ ಇಸ್ಲಾಂ, ಹಸನ್ ಮಹಮೂದ್, ನಹಿದ್ ರಾಣಾ.