Sunday, 15th December 2024

IND vs BAN : ಟೆಸ್ಟ್ ಇತಿಹಾಸದಲ್ಲಿ ಅತಿ ವೇಗದ 50, 100, 150, 200 ಮತ್ತು 250 ರನ್; ವಿಶ್ವದಾಖಲೆ ನಿರ್ಮಿಸಿದ ಭಾರತ

IND vs BAN

ಬೆಂಗಳೂರು: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ (IND vs BAN) ಟೀಂ ಇಂಡಿಯಾ (Team India) ಭರ್ಜರಿ ಬ್ಯಾಟಿಂಗ್ ಮಾಡಿದೆ. ಕಾನ್ಪುರದ ಗ್ರೀನ್ ಪಾರ್ಕ್ನಲ್ಲಿ ಉಭಯ ತಂಡಗಳ ನಡುವಿನ ಪಂದ್ಯ ನಡೆಯುತ್ತಿದ್ದು ಗೆಲುವಿಗಾಗಿ ಭಾರತ ತಂಡ ಶತ ಪ್ರಯತ್ನ ಮಾಡುತ್ತಿದೆ.

ಆತಿಥೇಯ ಬಾರತ ಬಾಂಗ್ಲಾದೇಶವನ್ನು ಕೇವಲ 233 ರನ್ ಗಳಿಗೆ ಆಲೌಟ್ ಮಾಡಿದ ನಂತರ ಭಾರತದ ಬ್ಯಾಟರ್‌ಗಳು ಅಬ್ಬರದ ಬ್ಯಾಟಿಂಗ ನಡೆಸಿದರು. ಯಶಸ್ವಿ ಜೈಸ್ವಾಲ್ ಮೊದಲ ಓವರ್‌ನಲ್ಲಿ ಮೂರು ಬೌಂಡರಿಗಳನ್ನು ಬಾರಿಸುವ ಮೂಲಕ ಪಂದ್ಯ ಪ್ರಾರಂಭಿಸಿದರು. ನಂತರ ರೋಹಿತ್ ಸತತ ಎರಡು ಸಿಕ್ಸರ್‌ಗಳ ಮೂಲಕ ಹೊಸ ದಾಖಲೆ ಬರೆದರು. ರೋಹಿತ್ ಶರ್ಮಾ ಕೇವಲ 11 ಎಸೆತಗಳಲ್ಲಿ 23 ರನ್ ಗಳಿಸಿದರು. ಮತ್ತೊಂದೆಡೆ, ಯಶಸ್ವಿ ಜೈಸ್ವಾಲ್ ಅದ್ಭುತ ಹೊಡತಗಳ ಮೂಲಕ ಬೌಂಡರಿಗಳನ್ನು ಬಾರಿಸಿದರು. ಹೀಗಾಗಿ ಭಾರತಕ್ಕೆಉತ್ತಮ ಆರಂಭ ತಂದಕೊಟ್ಟಿತು.

ರೋಹಿತ್ ಮತ್ತು ಯಶಸ್ವಿ ನೆರವಿನಿಂದ ಭಾರತ ಕೇವಲ 3 ಓವರ್‌ಗಳಲ್ಲಿ 50 ರನ್ ಕಲೆಹಾಕಿತು. ಇದು ಕ್ರಿಕೆಟ್‌ನ ಸುದೀರ್ಘ ಸ್ವರೂಪದ ಇತಿಹಾಸದಲ್ಲಿ ಯಾವುದೇ ತಂಡವು ಗಳಿಸಿದ ಅತಿ ವೇಗದ ಅರ್ಧಶತಕ. ಈ ಅವಧಿಯಲ್ಲಿ ಯಾವುದೇ ತಂಡವು ಅರ್ಧ ಶತಕವನ್ನು ದಾಟಿದ ಮೊದಲ ನಿದರ್ಶನವೂ ಇದಾಗಿದೆ. ಇದು ಟೆಸ್ಟ್‌ ಕ್ರಿಕೆಟ್‌ನ ಜತೆಯಾಟದಲ್ಲಿ ಅತ್ಯಧಿಕ ಸ್ಕೋರಿಂಗ್ ರೇಟ್ ಕೂಡ ಆಗಿದೆ.

  • 14.34 ಯಶಸ್ವಿ – ರೋಹಿತ್, ಬಾಂಗ್ಲಾ ವಿರುದ್ಧ, ಕಾನ್ಪುರ. 2024 (23 ಎಸೆತಗಳಲ್ಲಿ 55 ರನ್)
  • 11.86 ಸ್ಟೋಕ್ಸ್ – ಡಕೆಟ್. ವಿಂಡೀಸ್ ವಿರುದ್ಧ, ಎಜ್‌ಬಾಸ್ಟನ್‌, 2024 (44 ಎಸೆತಗಳಲ್ಲಿ 87* ರನ್)
  • 11.55 ವ್ಯಾಗ್ನರ್ – ಬೌಲ್ಟ್. ಇಂಗ್ಲೆಂಡ್ ವಿರುದ್ಧ, ಲೀಡ್ಸ್ 2013 (27 ಎಸೆತಗಳಲ್ಲಿ 52 ರನ್)

ರೋಹಿತ್ ಔಟಾದ ನಂತರ, ಯಶಸ್ವಿ ಜೈಸ್ವಾಲ್ ಆಕರ್ಷಕ ಅರ್ಧಶತಕ ಬಾರಿಸಿದರು. 142 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಆಡಿದರು. ಅವರು 51 ಎಸೆತಗಳಲ್ಲಿ 72 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು. ಈ ಮೂಲಕ ಭಾರತ 10.1 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡದ ವೇಗದ 100 ರನ್ ಆಗಿದೆ.

ಇದನ್ನೂ ಓದಿ: Virat Kohli : ಸಚಿನ್‌ ತೆಂಡೂಲ್ಕರ್ ಮತ್ತೊಂದು ದಾಖಲೆ ಮುರಿದ ವಿರಾಟ್ ಕೊಹ್ಲಿ

  • 10.1 ಓವರ್‌ಗಳಲ್ಲಿ, ಭಾರತ, ಬಾಂಗ್ಲಾದೇಶ ವಿರುದ್ಧ, ಕಾನ್ಪುರ, 2024
  • 12.2 ಓವರ್‌ಗಳಲ್ಲಿ, ಭಾರತ ,ವಿ ವಿಂಡೀಸ್ ವಿರುದ್ಧ, ಪೋರ್ಟ್ ಆಫ್ ಸ್ಪೇನ್, 2023
  • 13.1 ಓವರ್‌ಗಳಲ್ಲಿ, ಶ್ರೀಲಂಕಾ . ಬಾಂಗ್ಲಾ ವಿರುದ್ಧ, ಕೊಲಂಬೊ, 2001
  • 13.4 ಓವರ್‌ಗಳಲ್ಲಿ ಬಾನ್ ವಿರುದ್ಧ ಡಬ್ಲ್ಯುಐ ಮಿರ್ಪುರ್ 2012
  • 13.4 ಇಂಗ್ಲೆಂಡ್ , ಪಾಕಿಸ್ತಾನ ವಿರುದ್ಧ, ಕರಾಚಿ 2022
  • 13.4 ಇಂಗ್ಲೆಂಡ್, ಪಾಕಿಸ್ತಾನ ವಿರುದ್ಧ, ರಾವಲ್ಪಿಂಡಿ 2022
  • 13.6 ಆಸ್ಟ್ರೇಲಿಯಾ, ಭಾರತ ವಿರುದ್ಧ, ಪರ್ತ್ 2012

ಅಂತಿಮವಾಗಿ ಭಾರತ 9 ವಿಕೆಟ್ ನಷ್ಟಕ್ಕೆ 285 ರನ್ ಕಲೆಹಾಕಿದೆ. ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ 150 (18.2 ಓವರ್‌), 200 (24.2 ಓವರ್‌) ಮತ್ತು 250 (30.1 ಓವರ್‌) ಸಾಧನೆ ಮಾಡಿದೆ. ಆತಿಥೇಯ ಭಾರತ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದೆ. ಭಾರತ ಒಟ್ಟು 90 ಸಿಕ್ಸರ್ ಸಿಡಿಸಿದೆ. ಈ ಮೂಲಕ 2022ರಲ್ಲಿ ಇಂಗ್ಲೆಂಡ್‌ನ 89 ಸಿಕ್ಸರ್‌ಗಳ ದಾಖಲೆ ಮುರಿದಿದೆ.