ಕಾನ್ಪುರ: ವಿರಾಟ್ ಎಷ್ಟೇ ಅಗ್ರೆಸಿವ್ ಇದ್ದರೂ ಸಹ ಮೈದಾನದಲ್ಲಿ ಅಷ್ಟೇ ತಮಾಷೆ ಮಾಡುವ ವ್ಯಕ್ತಿಯಾಗಿದ್ದಾರೆ. ಸಹ ಆಟಗಾರರಿಗೆ ಕೊಹ್ಲಿ ನೀಡುವ ಕೆಲವು ಕೀಟಲೆಗಳ ವಿಡಿಯೊಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ಬಾಂಗ್ಲಾದೇಶ(IND vs BAN) ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ(Jasprit Bumrah) ಅವರು ಯಾವ ರೀತಿ ಬೌಲಿಂಗ್ ನಡೆಸುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಇದೇ ವೇಳೆ ಕೊಹ್ಲಿಗೆ(Virat Kohli) ಜಡೇಜ(Ravindra Jadeja) ಕೂಡ ಸಾಥ್ ನೀಡಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಊಟದ ವಿರಾಮದ ಬಳಿಕ ಆಟ ಆರಂಭಿಸುವ ಮುನ್ನ ಕೊಹ್ಲಿ ಮತ್ತು ಜಡೇಜಾ ತೀವ್ರ ಪೈಪೋಟಿಯೊಂದಿಗೆ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿಯನ್ನು ತೋರಿಸುವ ಮೂಲಕ ಬುಮ್ರಾ ಕಾಲೆಳೆದರು. ಬುಮ್ರಾ ಹೇಗೆ ಓಡಿ ಬಂದು ಬೌಲಿಂಗ್ ಮಾಡುತ್ತಾರೆ ಜತೆಗೆ ವಿಕೆಟ್ನಂಚಿನಲ್ಲಿ ಚೆಂಡು ಹೋದಾದ ಬುಮ್ರಾ ಹಾವ-ಭಾವ ಹೇಗಿತ್ತದೆ ಎನ್ನುವುದನ್ನು ಕೊಹ್ಲಿ ಅನುಕರಣೆ ಮಾಡಿಸಿ ತೋರಿಸಿಕೊಟ್ಟಿದ್ದಾರೆ. ಈ ವೇಳೆ ಬುಮ್ರಾ ಕೂಡ ಉಪಸ್ಥಿತರಿದ್ದರು. ಕೊಹ್ಲಿಯ ನಟನೆ ಕಂಡು ಬುಮ್ರಾ ಸೇರಿ ಸಹ ಆಟಗಾರು ಮತ್ತು ಕೋಚಿಂಗ್ ಸಿಬ್ಬಂದಿ ಬಿದ್ದು ಬಿದ್ದು ನಕ್ಕಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಜಸ್ಪ್ರೀತ್ ಬುಮ್ರಾ ಕೂಡ ವಿರಾಟ್ ಕೊಹ್ಲಿ ಪೀಲ್ಡಿಂಗ್ ವೇಳೆ ಯಾವ ರೀತಿ ನಿಲ್ಲುತ್ತಾರೆ ಎನ್ನುವುದನ್ನು ಆ್ಯಕ್ಷನ್ ಮೂಲಕ ತೋರಿಸಿಕೊಟ್ಟಿದ್ದಾರೆ. ಮೊದಲ ದಿನದಾಟ ಮಳೆಯಿಂದ ರದ್ದುಗೊಂಡಿದೆ. ಸದ್ಯ ಬಾಂಗ್ಲಾ 3 ವಿಕೆಟ್ಗೆ 107ರನ್ ಗಳಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ದ್ವಿತೀಯ ದಿನದಾಟಕ್ಕೂ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದೆ. ಒಂದೊಮ್ಮೆ ನಾಳೆಯೂ ಮಳೆಯಿಂದ ಪಂದ್ಯ ಅಡಚಣೆ ಉಂಟಾದರೆ ಪಂದ್ಯ ಡ್ರಾ ಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಭಾರತ ಪರ ಮೊದಲ ದಿನ ವೇಗಿ ಆಕಾಶ್ ದೀಪ್ 34 ರನ್ಗೆ 2 ವಿಕೆಟ್ ಕಿತ್ತರು. ಬಾಂಗ್ಲಾ ಪರ ಮೊಮಿನುಲ್ ಹಾಕ್(40), ಮುಶ್ಫಿಕರ್ ರಹೀಂ(6) ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಇದನ್ನೂ ಓದಿ IND vs BAN 2nd Test: ಕಾನ್ಪುರದಲ್ಲಿ ಭಾರೀ ಮಳೆ; ಟಾಸ್ ವಿಳಂಬ
ಕೊಹ್ಲಿ ಕಾಲಿಗೆ ಬಿದ್ದ ಮೈದಾನ ಸಿಬ್ಬಂದಿ
ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಮೈದಾನ ಸಿಬ್ಬಂದಿ(Groundstaff) ಕೊಹ್ಲಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಘಟನೆ ನಡೆಯಿತು. ಈ ವಿಡಿಯೊ ವೈರಲ್(viral video) ಆಗಿದೆ. ವಿರಾಟ್ ಕೊಹ್ಲಿ ಅವರು ಬ್ಯಾಟಿಂಗ್ ಅಭ್ಯಾಸ ನಡೆಸಲು ಮೈದಾನಕ್ಕೆ ಬರುತ್ತಿದ್ದ ವೇಳೆ ಮೈದಾನಕ್ಕೆ ಅಳವಡಿಸಿದ್ದ ಕವರ್ಗಳನ್ನು ತೆಗೆಯುತ್ತಿದ್ದ ಸಿಬ್ಬಂದಿ ನೇರವಾಗಿ ಕೊಹ್ಲಿ ಬಳಿಗೆ ಓಡಿ ಬಂದು ಅವರ ಕಾಲಿಗೆ ಬಿದ್ದಿದ್ದಾನೆ. ಈ ಮೂಲಕ ಬಹು ದಿನಗಳಿಂದ ಕೊಹ್ಲಿಯನ್ನು ಭೇಟಿಯಾಗುವ ಆಸೆಯನ್ನು ತೀರಿಸಿಕೊಂಡಿದ್ದಾರೆ.
ಚೆನ್ನೈಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ನಲ್ಲಿ ವಿರಾಟ್ ಘೋರ ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದರು. ದ್ವಿತೀಯ ಟೆಸ್ಟ್ನಲ್ಲಿ ನಿರೀಕ್ಷಿತ ಬ್ಯಾಟಿಂಗ್ ನಡೆಸುವ ವಿಶ್ವಾಸದಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಕ್ರಮವಾಗಿ 6 ಮತ್ತು17 ರನ್ ಬಾರಿಸಿ ವಿಕೆಟ್ ಕೈಚೆಲ್ಲಿದ್ದರು.