Wednesday, 25th September 2024

IND vs BAN: ದ್ವಿತೀಯ ಟೆಸ್ಟ್‌ಗೆ ಭಾರೀ ಮಳೆ ಎಚ್ಚರಿಕೆ; ಪಂದ್ಯ ನಡೆಯುವುದು ಅನುಮಾನ

IND vs BAN

ಕಾನ್ಪುರ: ಪ್ರವಾಸಿ ಬಾಂಗ್ಲಾದೇಶ(IND vs BAN) ಮತ್ತು ಆತಿಥೇಯ ಭಾರತ ದ್ವಿತೀಯ(IND vs BAN 2nd Test) ಟೆಸ್ಟ್‌ ಪಂದ್ಯಕ್ಕಾಗಿ ಮಂಗಳವಾರ ಕಾನ್ಪುರಕ್ಕೆ(Kanpur ) ಆಗಮಿಸಿತ್ತು. ಸೆ. 27ರಂದು ಇಲ್ಲಿನ “ಗ್ರೀನ್‌ ಪಾರ್ಕ್‌ ಸ್ಟೇಡಿಯಂ’ನಲ್ಲಿ(Green Park Stadium) ಟೆಸ್ಟ್‌ ಪಂದ್ಯ ಆರಂಭವಾಗಲಿದೆ. ಇಂದಿನಿಂದ ಉಭಯ ತಂಡಗಳ ಆಟಗಾರು ಅಭ್ಯಾಸ ಆರಂಭಿಸಲಿದ್ದಾರೆ. ಆದರೆ, ಪಂದ್ಯಕ್ಕೆ ಭಾರೀ ಮಳೆ ಎಚ್ಚರಿ ನೀಡಲಾಗಿದೆ.

ಕಾನ್ಪುರಕ್ಕೆ ಬಂದಿಳಿದ ಕ್ರಿಕೆಟಿಗರಿಗರೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಅದರಲ್ಲೂ ಬಾಂಗ್ಲಾದೇಶಕ್ಕೆ ಹೆಚ್ಚಿನ ಭದ್ರತೆ ನೀಡಲಾಯಿತು. ಇದಕ್ಕೆ ಕಾರಣ ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯ. ಭಾರತದಲ್ಲಿಯೂ ಕೆಲ ಸಂಘಟನೆಗಳು ಬಾಂಗ್ಲಾ ವಿರುದ್ಧ ಕ್ರಿಕೆಟ್‌ ಸರಣಿ ಆಡಬಾರದೆಂದು ವಿರೋಧ ವ್ಯಕ್ತವಾಗುತ್ತಿದೆ. ಕಾನ್ಪುರದಲ್ಲೂ ಪ್ರತಿಭಟನೆ ನಡೆದಿದೆ. ಇದೇ ಕಾರಣಕ್ಕೆ ಆಟಗಾರರಿಗೆ ಹೆಚ್ಚಿನ ಭದ್ರತೆ ನೀಡಲಾಯಿತು. ಪಂದ್ಯಕ್ಕೂ ಕೂಡ ಭಾರೀ ಭದ್ರತೆ ಕಲ್ಪಿಸಲಾಗಿದೆ.

ಇದನ್ನೂ ಓದಿ IND vs BAN: ದ್ವಿತೀಯ ಟೆಸ್ಟ್‌ಗೆ ಭಾರತ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ

ಕಾನ್ಪುರ ಸ್ಪಿನ್‌ ಟ್ರ್ಯಾಕ್‌ ಆದ ಕಾರಣದಿಂದ ಉಭಯ ತಂಡಗಳು ಕೂಡ ಸ್ಪಿನ್‌ಗೆ ಹೆಚ್ಚಿನ ಪ್ರಧಾನ್ಯತೆ ನೀಡುವ ಸಾಧ್ಯತೆ ಅಧಿಕ. ಬುಧವಾರ ಭಾರತೀಯ ಬ್ಯಾಟರ್‌ಗಳಾದ ವಿರಾಟ್‌ ಕೊಹ್ಲಿ, ನಾಯಕ ರೋಹಿತ್‌, ಪಂತ್‌, ಗಿಲ್‌ ಸೇರಿ ಎಲ್ಲ ಆಟಗಾರರು ಸ್ಪಿನ್‌ ಬೌಲಿಂಗ್‌ಗೆ ಹೆಚ್ಚಿನ ಅಭ್ಯಾಸ ನಡೆಸಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ. ಭಾರತ ಈ ಪಂದ್ಯದಲ್ಲಿ ತ್ರಿವಳಿ ಸ್ಪಿನ್‌ ದಾಳಿಗೆ ಇಳಿಸಲಿದೆ ಎಂಬ ಸೂಚನೆಯೂ ಈಗಾಗಲೇ ಲಭಿಸಿದೆ. ಅನುಭವಿಗಳಾದ ಆರ್‌.ಅಶ್ವಿನ್‌ ಮತ್ತು ರವೀಂದ್ರ ಜಡೇಜಾ ಜತೆ ಕುಲ್‌ದೀಪ್‌ ಅಥವಾ ಅಕ್ಷರ್‌ ಪಟೇಲ್‌ ಕಾಣಿಸಬಹುದು. ವೇಗಿ ಸಿರಾಜ್‌ ಈ ಪಂದ್ಯದಿಂದ ಹೊರಗುಳಿಬಹುದು.

ಪಂದ್ಯಕ್ಕೆ ಮಳೆ ಭೀತಿ

ದ್ವಿತೀಯ ಪಂದ್ಯಕ್ಕೆ ಮಳೆ ಭೀತಿ ಕೂಡ ಎದುರಾಗಿದೆ. ಹವಾಮಾನ ಇಲಾಖೆ ವರದಿ ಪ್ರಕಾರ, ಸೆಪ್ಟೆಂಬರ್ 26 ರಂದು, ಅಂದರೆ ಟೆಸ್ಟ್ ಪಂದ್ಯ ಆರಂಭವಾಗುವು ಮುನ್ನ ದಿನ ಶೇ.79 ರಷ್ಟು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದೆ. ಪಂದ್ಯ ಆರಂಭವಾಗುವ ಸೆಪ್ಟೆಂಬರ್ 27 ರಂದು ಶೇ.92 ರಷ್ಟು ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಮಳೆಯಿಂದ ಮೊದಲ ದಿನದಾಟ ರದ್ದಾಗುವ ಸಾಧ್ಯತೆಯೊಂದು ಕಂಡುಬಂದಿದೆ. ಅದು ಕೂಡ ಹಗಲಿನಲ್ಲಿ ಮಳೆ ಅಧಿಕವಿರಲಿದೆ ಎನ್ನಲಾಗಿದೆ.

ಭಾರತ ತಂಡ

ರೋಹಿತ್‌ ಶರ್ಮ (ನಾಯಕ), ಜೈಸ್ವಾಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌ ರಾಹುಲ್‌, ಸರ್ಫರಾಜ್‌ ಖಾನ್‌, ರಿಷಭ್‌ ಪಂತ್‌, ಧ್ರುವ್‌ ಜುರೆಲ್‌, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಆಕಾಶ್‌ ದೀಪ್‌, ಜಸ್‌ಪ್ರೀತ್‌ ಬುಮ್ರಾ, ಯಶ್‌ ದಯಾಳ್‌.

ಬಾಂಗ್ಲಾ ಟೆಸ್ಟ್‌ ತಂಡ

ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಮಹಮ್ಮದುಲ್ ಹಸನ್ ಜಾಯ್, ಝಾಕಿರ್ ಹಸನ್, ಶದ್ಮಾನ್ ಇಸ್ಲಾಂ, ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಾಕಿಬ್ ಅಲ್ ಹಸನ್, ಲಿಟ್ಟನ್ ಕುಮಾರ್ ದಾಸ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ನಯೀಮ್ ಹಸನ್, ನಹಿದ್ ರಾಣಾ, ಹಸನ್ ಮಹಮ್ಮದ್, ತಾಸ್ ಮಹಮ್ಮದ್ ಸೈಯದ್ ಖಲೀದ್ ಅಹ್ಮದ್, ಜಾಕರ್ ಅಲಿ ಅನಿಕ್.