Thursday, 12th December 2024

IND vs BNG: ಮುಂದಿನ ವಾರ ಬಾಂಗ್ಲಾ ಸರಣಿಗೆ ಭಾರತ ತಂಡ ಪ್ರಕಟ

IND vs BNG

ಮುಂಬಯಿ: ಇದೇ ತಿಂಗಳು 19ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ(IND vs BNG) ವಿರುದ್ಧದ ತವರಿನ ಟೆಸ್ಟ್‌ ಸರಣಿಗೆ ಭಾರತ ತಂಡವನ್ನು(India squad) ಬಿಸಿಸಿಐ ಮುಂದಿನ ವಾರ ಆಯ್ಕೆ ಮಾಡಲಿದೆ ಎಂದು ತಿಳಿದುಬಂದಿದೆ. ಇಂದು ಆರಂಭಗೊಂಡಿರುವ ದುಲೀಪ್‌ ಟ್ರೋಫಿಯ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡ ಬಳಿಕ ಆಯ್ಕೆ ಸಮಿತಿ ಸಭೆ ಸೇರಲಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಬ್ಯಾಟಿಂಗ್‌ ಫಾರ್ಮ್‌ ಕಳೆದುಕೊಂಡಿರುವ ಶ್ರೇಯಸ್‌ ಅಯ್ಯರ್‌, ಕನ್ನಡಿಗ ಕೆ.ಎಲ್‌ ರಾಹುಲ್‌, ಕಾರು ಅಪಘಾತದ ಬಳಿಕ ಟೆಸ್ಟ್‌ ಸರಣಿ ಆಡದ ರಿಷಭ್‌ ಪಂತ್‌ ಸೇರಿ ಕೆಲ ಯುವ ಆಟಗಾರರಿಗೆ ದುಲೀಪ್‌ ಟ್ರೋಫಿಯ ಪ್ರದರ್ಶನ ಮುಖ್ಯವಾಗಿದೆ. ಇಲ್ಲಿ ತೋರುವ ಪ್ರದರ್ಶನದ ಮೇಲೆ ಆಟಗಾರರ ಆಯ್ಕೆಯಾಗಲಿದೆ. ಗಾಯಗೊಂಡು ಮೊದಲ ಸುತ್ತಿನ ಪಂದ್ಯಾವಳಿಯಿಂದ ಹೊರಬಿದ್ದಿರುವ ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌ ಮತ್ತು ಪ್ರಸಿದ್ಧ್‌ ಕೃಷ್ಣಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ.

ಇದನ್ನೂ ಓದಿ IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಯುವರಾಜ್‌ ಮುಖ್ಯ ಕೋಚ್‌

ರಿಷಭ್‌ ಪಂತ್‌ ಮತ್ತು ಶ್ರೇಯಸ್‌ ಅಯ್ಯರ್‌ ಇಂದು ಆರಂಭಗೊಂಡ ದುಲೀಪ್‌ ಟ್ರೋಫಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದಾರೆ. ಭಾರತ ಬಿ ತಂಡದ ಪರ ಆಡಿದ ಪಂತ್‌ 10 ಎಸೆತಗಳಿಂದ 7 ರನ್‌ ಬಾರಿಸಿದರೆ, ಇಂಡಿಯಾ ಡಿ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ 9 ರನ್‌ಗೆ ವಿಕೆಟ್‌ ಒಪ್ಪಿಸಿ ವೈಫಲ್ಯ ಕಂಡರು. ಒಂದೊಮ್ಮೆ ದ್ವಿತೀಯ ಇನಿಂಗ್ಸ್‌ ನಲ್ಲಿಯೂ ಇದೇ ರೀತಿ ವಿಫಲವಾದರೆ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗುವುದು ಅನುಮಾನ. ಈಗಾಗಲೇ ಬಾಂಗ್ಲಾದೇಶ ಪಾಕಿಸ್ತಾನ ತಂಡವನ್ನು ಅವರದ್ದೇ ನೆಲದಲ್ಲಿ 2-0 ಅಂತರದಿಂದ ಮಣಿಸಿ ಐತಿಹಾಸಿಕ ಸರಣಿ ಗೆದ್ದ ಸಾಧನೆ ಮಾಡಿತ್ತು. ಬಾಂಗ್ಲಾ ಅಪಾಯಕಾರಿಯಾಗಿ ಗೋಚರಿಸಿರುವ ಕಾರಣ ಬಿಸಿಸಿಐ ಬಲಿಷ್ಠ ತಂಡವನ್ನೇ ಪ್ರಕಟಿಸಬೇಕಿದೆ.

ಭಾರತ ತಂಡದ ಭವಿಷ್ಯದ ನಾಯಕನೆಂದೇ ಪರಿಗಣಿಸಲ್ಪಟ್ಟಿರುವ ಯುವ ಆಟಗಾರ ಶುಭಮನ್​ ಗಿಲ್(Shubman Gill)​ ಅವರನ್ನು ಟೆಸ್ಟ್‌ ತಂಡದ ಉಪನಾಯಕನನ್ನಾಗಿ ನೇಮಿಸಲು ಬಿಸಿಸಿಐ ಮುಂದಾಗಿದೆ. ಶುಭಮನ್​ ಗಿಲ್​ ಅವರು ಕಳೆದ 11 ಟೆಸ್ಟ್ ಇನಿಂಗ್ಸ್​ನಲ್ಲಿ ಸಂಪೂರ್ಣ ಬ್ಯಾಟಿಂಗ್​ ವೈಫಲ್ಯ ಎದುರಿಸಿದ್ದಾರೆ. 13, 8, 6, 10, 29*, 2, 26, 36, 10, 23, 0. ಗಿಲ್​ ಗಳಿಕೆ. ಅವರ ಬ್ಯಾಟಿಂಗ್​ ವೈಫಲ್ಯಕ್ಕೆ ಬ್ಯಾಟಿಂಗ್​ ಕ್ರಮಾಂಕದ ಬದಲಾವಣೆಯೂ ಮುಖ್ಯ ಕಾರಣ. ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ವೇಳೆ ಗಿಲ್​ ಆರಂಭಿಕನಾಗಿ ಆಡುತ್ತಿದ್ದರು. ಈ ವೇಳೆ ಉತ್ತಮ ಸಾಧನೆ ಕೂಡ ಮಾಡಿದ್ದರು. ಆದರೆ, ಆ ಬಳಿಕ ಇವರನ್ನು ದ್ವಿತೀಯ ಕ್ರಮಾಂಕದಲ್ಲಿ ಆಡಿಸಲಾಯಿತು. ಯಶಸ್ವಿ ಜೈಸ್ವಾಲ್ (Yashaswi Jaiiswal)​ ಆರಂಭಿಕನಾಗಿ ಆಡಲಾರಂಭಿಸಿದರು.

ವೇಳಾಪಟ್ಟಿ

ಸೆಪ್ಟೆಂಬರ್​-19 ಮೊದಲ ಟೆಸ್ಟ್​ ಪಂದ್ಯ. ತಾಣ: ಚೆನ್ನೈ

ಸೆಪ್ಟೆಂಬರ್​​-27 ದ್ವಿತೀಯ ಟೆಸ್ಟ್​. ತಾಣ; ಕಾನ್ಪುರ