ಬೆಂಗಳೂರು: ಬಾಂಗ್ಲಾದೇಶ ವಿರುದ್ಧದ ಕಾನ್ಪುರ ಟೆಸ್ಟ್ನಲ್ಲಿ ಭಾರತ ತಂಡ ಆಡಿದ ಆಕ್ರಮಣಕಾರಿ ಆಟವನ್ನು ನ್ಯೂಜಿಲ್ಯಾಂಡ್(IND vs NZ) ವಿರುದ್ಧವೂ ಮುಂದುವರಿಸುವ ಸುಳಿವನ್ನು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್(Gautam Gambhir) ನೀಡಿದ್ದಾರೆ. ಭಾರತ ತಂಡದ ಬ್ಯಾಟರ್ಗಳು ದೊಡ್ಡ ರಿಸ್ಕ್ ತೆಗೆದುಕೊಳ್ಳುವುದನ್ನು ನಾನು ತಡೆಯುವುದಿಲ್ಲ. ಯಾಕೆಂದರೆ ದೊಡ್ಡ ರಿಸ್ಕ್ಗಳನ್ನು ತೆಗೆದುಕೊಂಡಾಗ, ಪ್ರತಿಲವೂ ದೊಡ್ಡದಾಗಿರುತ್ತವೆ ಎಂದು ಗಂಭೀರ್ ಹೇಳಿದ್ದಾರೆ.
ಬುಧವಾರ(ಅ.16) ದಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ‘ಒಂದೇ ದಿನದಲ್ಲಿ 400 ರನ್ ಗಳಿಸುವ ತಂಡ ನಮ್ಮದಾಗಬೇಕೆಂದು ಬಯಸುತ್ತೇನೆ. ಅದೇ ರೀತಿ ಡ್ರಾ ಸಾಧಿಸುವ ಅಗತ್ಯಬಿದ್ದರೆ 2 ದಿನಗಳ ಕಾಲ ಬ್ಯಾಟಿಂಗ್ ನಡೆಸಬಲ್ಲ ತಂಡವೂ ನಮ್ಮದಾಗಬೇಕು. ಪರಿಸ್ಥಿತಿಗೆ ತಕ್ಕಂತೆ ಒಗ್ಗಿಕೊಳ್ಳುವುದು ಮುಖ್ಯ. ನಾವು ರಿಸ್ಕ್ ತೆಗೆದುಕೊಂಡೇ ಆಡುವಾಗ ವೈಲ್ಯಗಳ ಅಪಾಯವೂ ಇದ್ದೇ ಇರುತ್ತದೆ. ನಾವು ಕೆಲವೊಮ್ಮೆ 100 ರನ್ಗಳಿಗೆ ಆಲೌಟ್ ಆಗಬಹುದು. ಅದನ್ನೂ ಒಪ್ಪಿಕೊಳ್ಳಬೇಕು. ಆದರೆ ದೊಡ್ಡ ರಿಸ್ಕ್ ತೆಗೆದುಕೊಂಡು ಆಡುವ ಆಟಗಾರರಿಗೆ ನಮ್ಮ ಬೆಂಬಲ ಇದ್ದೇ ಇರುತ್ತದೆʼ ಎಂದು ಹೇಳುವ ಮೂಲಕ ಟೆಸ್ಟ್ನಲ್ಲಿ ಆಕ್ರಮಣಕಾರಿ ಆಟವಾಡುವ ಸೂಚನೆ ನೀಡಿದ್ದಾರೆ. ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನವೇ ನಾಯಕ ರೋಹಿತ್ ಅವರು ಈ ಹಿಂದೆ ಕೋಚ್ ಆಗಿದ್ದ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಆಡುವುದಕ್ಕೂ ಗಂಭೀರ್ ಮಾರ್ಗದರ್ಶನಕ್ಕೂ ತುಂಬಾ ವ್ಯತ್ಯಾಸವಿದೆ. ಇದಕ್ಕೆ ನಾವು ಒಗ್ಗಿಕೊಳ್ಳಲೇ ಬೇಕು ಎಂದು ಹೇಳಿದ್ದರು.
ಬಾಂಗ್ಲಾದೇಶವನ್ನು ಮಣಿಸಿದಷ್ಟು ಸುಲಭವಾಗಿ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸುವುದು ಸುಲಭವಲ್ಲ. ಕಿವೀಸ್ ತಂಡದಲ್ಲಿ ಗುಣಮಟ್ಟದ ಆಟಗಾರರು ಇದ್ದಾರೆ. ಈ ಹಿಂದೆ ಭಾರತ ಪ್ರವಾಸದಲ್ಲಿಯೂ ಕಿವೀಸ್ ಉತ್ತಮ ಹೋರಾಟ ಸಂಘಟಿಸಿದೆ. ಹಾಗಂತ ಯಾರಿಗೂ ಭಯ ಪಡುವುದಿಲ್ಲ. ನಾವು ದೇಶಕ್ಕಾಗಿ ಪ್ರತಿ ಪಂದ್ಯವನ್ನೂ ಗೆಲ್ಲಲು ಪ್ರಯತ್ನಿಸುತ್ತೇವೆ ಎಂದು ಗಂಭೀರ್ ಹೇಳಿದರು.
ಇದನ್ನೂ ಓದಿ IND vs NZ Test: ಬೆಂಗಳೂರು ತಲುಪಿದ ರೋಹಿತ್, ಕೊಹ್ಲಿ
ಸದ್ಯ ಟೆಸ್ಟ್ ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗುತ್ತಿರುವ ಆಕ್ರಮಕಾರಿ ಆಟದ ಶೈಲಿಯಾದ ಗಮ್ ಬಾಲ್ ಪರಿಚಯಿಸಿದ್ದು ಕೋಚ್ ಗೌತಮ್ ಗಂಭೀರ್. ಅವರ ಹೆಸರಿನ ಅಕ್ಷರವನ್ನೇ ಬಳಸಿಕೊಂಡು ಇದನ್ನು ಗಮ್ ಬಾಲ್ ಎನ್ನಲಾಗುತ್ತಿದೆ. ನಿರ್ಭೀತ ಕ್ರಿಕೆಟ್ ಶೈಲಿಯನ್ನು ಅಳವಡಿಸಿಕೊಂಡುವುದು ಆಡುವುದು ಇಲ್ಲಿ ಮುಖ್ಯ. ಔಟ್ ಆಗುವುದರ ಬಗ್ಗೆ ಚಿಂತೆಯಿಲ್ಲದೇ ಗೆಲುವನ್ನೇ ಗುರಿಯಾಗಿಸಿ ಬ್ಯಾಟಿಂಗ್ ಮಾಡುವುದು ಇದರ ತಂತ್ರವಾಗಿದೆ. ಇಲ್ಲಿ ಯಾವುದೇ ಆಟಗಾರನ ವೈಯಕ್ತಿಕ ಮೈಲಿಗಲ್ಲುಗಳು ಮುಖ್ಯವಾಗುವುದಿಲ್ಲ. ಇಡೀ ತಂಡವಾಗಿ ಪ್ರತೀ ಪಂದ್ಯವನ್ನು ಗೆಲ್ಲುವುದೇ ಪ್ರಧಾನ ಗುರಿಯಾಗಿರುತ್ತದೆ. ಇದರಿಂದ ಟೆಸ್ಟ್ ಕ್ರಿಕೆಟ್ ಹೆಚ್ಚು ಆಸಕ್ತಿದಾಯಕವಾಗಲಿದೆ ಎನ್ನುವುದು ಗಂಭೀರ್ ಯೋಜನೆ.